2023-03-16 07:01:53 by jayusudindra
This page has been fully proofread once and needs a second look.
ವಾಗಿ ಸೂಚಿಸಿ ಬಿಟ್ಟ ಅನೇಕ ವಿಷಯಗಳನ್ನು ಅವಶ್ಯಕ- ವೆನಿಸಿದಲ್ಲಿ ವಿವರಿಸಿ
ಬರೆದಿದ್ದೇನೆ. ನಿವಿಸ್ಕತರಿಸಿ ಬರವಣಿಗೆಯ ಓಘವನ್ನು ಕೆಡಿಸುವ ಕೆಲವು ಉಪಕಥೆ
ಗಳನ್ನು ಬಿಟ್ಟಿದ್ದೇನೆ.
%
*
%
ರಾಮಾಯಣವನ್ನು ಕುರಿತು, ರಾಮನ ಕತೆಯ ಕುರಿತು ಅನೇಕ ವಾದ
ವಿವಾದಗಳನ್ನು ಕೇಳುತ್ತೇವೆ. ರಾಮಚಂದ್ರನು ಅವತಾರ ಪುರುಷನೇ ಆದರ್ಶ
ಮಾನವ ಮಾತ್ರ ಮಾನವ ಮಾತ್ರನೇ ಎನ್ನುವ ಕುರಿತೂ 'ಚರ್ಚೆಗಳು' ನಡೆದಿವೆ. ಪ್ರಾಚೀನ
ಗ್ರಂಥಗಳೆಲ್ಲ ಆತನನ್ನು ಭಗವಂತನ ಅವತಾರ ಎನ್ನುತ್ತವೆ. ವಾಲ್ಮೀಕೀಯ
ಯೂ ಕೂಡ ರಾಮಚಂದ್ರ ಹರಿಯ ಅವತಾರ ಎನ್ನುವ ದೃಷ್ಟಿಯಿಂಲೇ ಕತೆಯನ್ನು
ಹೆಣೆದುಕೊಂಡು ಹೋಗಿದ್ದಾನೆ. ಆದರೆ 'ರಾಮಾಯಣ ಕವಿಯ ದೃಷ್ಟಿಯಲ್ಲಿ
ರಾಮಚಂದ್ರ ಒಬ್ಬ ಆದರ್ಶ ಮಾನವ ಮಾತ್ರ'ವೆಂದು ರಾಜಾಜಿ ಅನ್ನುತ್ತಾರೆ !
ಆದರೂ ಅಲ್ಲಲ್ಲಿ ಅವತಾರದ ಉಲ್ಲೇಖವಿದೆಯೆಂದು ಅವರೂ ಒಪ್ಪಿಕೊಂಡಿ
*
ದ್ದರೆ.
ಈ ಎರಡು ಪಂಥಗಳನ್ನು ಬಿಟ್ಟು ಇನ್ನೂ ಒಂದು ಪಂಥವಿದೆ. ಅದು
ರಾಮಾಯಣವನ್ನು ಓದದೆ ಅದನ್ನು ಕುರಿತು ಅಭಿಪ್ರಾಯ ಕೊಡುವ ಪಂಥ.
ಉತ್ತರ ದಕ್ಷಿಣಗಳ ಪಿಡುಗು ಹಿಡಿದ ಇಂಥ ಜನ 'ರಾಮಾಯಣವನ್ನು ಉತ್ತರ
-
ದವರು ಬರೆದುದು. ಅದು ತಮ್ಮನ್ನು ನಿಂದಿಸಲಿಕ್ಕಾಗಿಯೇ ಬರೆದ ಗ್ರಂಥ'
ಎಂದು ವಾದಿಸುತ್ತಾರೆ! ರಾಮಾಯಣಕ್ಕೆ ಬಹಿಷ್ಕಾರ ಹಾಕುವವರೆಗೂ ಈ
ವೀರ ದಾಕ್ಷಿಣಾತ್ಯರ ಅವಿವೇಕ ಮುಂದುವರಿದಿದೆ ! ಇಂಥವರ ಹಾರಾಟಗಳಿಂದ
ರಾಮಾಯಣದಂಥ ವಿಶ್ವಕೃತಿಗೇನೂ ಕುಂದು ಬಾರದು ಎಂದು ರಾಮಾಯಣ
ಓದಿದ ಎಲ್ಲರೂ ಬಲ್ಲರು.
ಪುಣ್ಯಸಂಪಾದನೆಗಾಗಿ, ಮೋಕ್ಷಸಿದ್ಧಿಗಾಗಿ ರಾಮಾಯಣ- ವನ್ನು ಓದ
ಬೇಕು ಎಂದೇನೂ ನಾನು ಹೇಳ ಹೊರಟಿಲ್ಲ. ಆದರೆ ಮತಪಂಥಗಳ, ದಕ್ಷಿ
ಣೋತ್ತರಗಳ ಪೂರ್ವವಾಗ್ರಹ- ವನ್ನು ತೊರೆದು ಒಮ್ಮೆ ಆ ಕಾವ್ಯವನ್ನು ಓದಬೇಕು.
ಅದರಲ್ಲಿ ಕಾಣುವ ಮಾನವೀಯ ಸ್ವಭಾವದ ಅದ್ಭುತ ಚಿತ್ರಣವನ್ನು ಕಾಣ
ಬೇಕು. ಕವಿಹೃದಯದ ಪಕ್ವತೆಯನ್ನು ಮನಗಾಣಬೇಕು.
ಆಗ ಅಂಥ
ಜನವೇ ತಾವು ಮೊದಲು ನೋಡದೆ ನಿಂದಿಸಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾರೆ.
%
*
%
ರಾಮಾಯಣವನ್ನು ಕುರಿತು, ರಾಮನ ಕತೆಯ ಕುರಿತು ಅನೇಕ ವಾದ
ಮಾನವ ಮಾತ್ರ