This page has been fully proofread once and needs a second look.

Ot
 
ಮಿಂಚಿನಬಳ್ಳಿ
 
ದುಃಖ-ಕೋಪಗಳಿಂದ ವಿಕ್ಷಿಪ್ತನಾದ ರಾವಣ ಇಂದ್ರಜಿತ್ತನ್ನು ಕರೆದು
ಆಜ್ಞಾಪಿಸಿದನು :
 

 
" ಮಗು ! ಆ ಮಹಾಕಪಿಯನ್ನು ನಿಗ್ರಹಿಸುವ ಭಾರ ನಿನ್ನ ಮೇಲಿದೆ.
ಲಂಕೆಯ ಸೇನೆ ನಿನ್ನ ಬರವನ್ನು ಕಾಯುತ್ತಿದೆ."
 
""
 

 
ಇಂದ್ರನನ್ನೂ ಸೋಲಿಸಿದ ಹಮ್ಮಿನಿಂದ ಮೇಘನಾದ ಆನೆಯ ಮೇಲೇರಿ
ನಡೆದನು. ಅವನನ್ನು ನೋಡಿ ಹನುಮಂತನು ಪರ್ವತದಂತೆ ಬೆಳೆದುನಿಂತನು.
ಮೇಘನಾದ ಗುರಿಯಿಟ್ಟು ಬಾಣ ಹೊಡೆವುದರೊಳಗೆ ಹನುಮಂತ ಆಕಾಶಕ್ಕೆ
ಹಾರಿಯಾಗಿತ್ತು. ಯಾರ ಬಾಣಗಳಿಗೆ ಗುರಿ ತಪ್ಪುವುದೆಂದರೆನೆಂದೇ ತಿಳಿದಿರ
-
ಲಿಲ್ಲವೋ ಅಂಥ ಮೇಘನಾದನ ಬಾಣಗಳು ಹನುಮಂತನನ್ನು ಮುಟ್ಟಲಾರದೆ
ಮೊದಲಬಾರಿ ಗುರಿತಪ್ಪಿ ನಡೆದವು !
 

 
ಮೇಘನಾದನಿಗೆ ಚಿಂತೆಗಿಟ್ಟುಕೊಂಡಿತು. ಯಾವ ಬಾಣಕ್ಕೂ ಬಗ್ಗದ
ಇವನನ್ನು ಸೆರೆಹಿಡಿವುದಾದರೂ ಹೇಗೆ ? ಕೊನೆಯದಾಗಿ ಒಂದು ಪ್ರಯೋಗ
ಮಾಡಿ ಬಿಡುವುದಾಗಿ ನಿಶ್ಚಯಿಸಿ ಬ್ರಹ್ಮಾಸ್ತ್ರ- ವನ್ನು ಪ್ರಯೋಗಿಸಿದನು.
 

 
ಭಗವಂತನ ಅನುಗ್ರಹದಿಂದ ಯಾವ ಅಸ್ತ್ರಗಳೂ ಹನುಮಂತ ನಿಗೆ ತಾಕ
ಲಾರವು. ಆದರೂ ರಾವಣನನ್ನು ಕಂಡು ಮಾತನಾಡ- ಬೇಕು. ಅದಕ್ಕೆ ಇದೇ
ಉಪಾಯ ಎಂದು ಯೋಚಿಸಿದ ಹನುಮಂತ ಅಸ್ತ್ರಕ್ಕೆ ಕಟ್ಟು ಬಿದ್ದವರಂತೆ
ಕಾಣಿಸಿಕೊಂಡನು. ರಾಕ್ಷಸರು ಇನ್ನಷ್ಟು ಹಗ್ಗಗಳಿಂದ ಬಿಗಿದು ರಾಜಸಭೆಗೆ
ಕರೆದೊಯ್ದ ರು. ಹನುಮಂತನು ತನ್ನ ಕಾರ್ಯಸಿದ್ಧಿಗಾಗಿ ಈ ಅವಮಾನ
ವನ್ನು ನುಂಗಿಕೊಂಡನು.
 

 
ರಾವಣನೇ ಸ್ವಯಂ ಹನುಮಂತನನ್ನು ವಿಚಾರಣೆಗೆ ತೆಗೆದುಕೊಂಡನು:

 
" ಕಪಿಯಂತೆ ಕಾಣುವ ನೀನು ಯಾರು ? ಎಲ್ಲಿಂದ ಬಂದೆ ? ಬಂದ
ಉದ್ದೇಶವೇನು ? ಯಾರದಾದರೂ ದೂತನಾಗಿ ಬಂದಿರುವೆಯಾ ? ನಮ್ಮ
ಉದ್ಯಾನವನ್ನು ಹಾಳುಗೆಡವಲು ಕಾರಣವೇನು ?. ಸೈನ್ಯ- ವನ್ನೇಕೆ ನಾಶ
ಪಡಿಸಿದೆ !"
 

 
ರಾಮಚರಣಗಳಿಗೆ ವಂದಿಸಿ ಹನುಮಂತನು ಉತ್ತರಿಸಿದನು: