This page has been fully proofread once and needs a second look.

ಮಿಂಚಿನಬಳ್ಳಿ
 
ಜಂಬುಮಾಲಿಯ ಬಾಣಗಳಿಗೆ ಉತ್ತರವಾಗಿ ಹನುಮಂತನು ಒಂದು
ದೊಡ್ಡ ಶಿಲೆಯನ್ನು ಅವನೆಡೆಗೆ ಎಸೆದನು. ಜಂಬುಮಾಲಿ ಯ ಬಾಣ ಅದನ್ನು
ಭೇದಿಸಿತು. ಹನುಮಂತನು ಮರವೊಂದನ್ನು ಕಿತ್ತೆಸೆದನು. ಶತ್ರುವಿನ ಬಾಣ
ಅದನ್ನೂ ಕಬಳಿಸಿತು. ಹೆಬ್ಬಾಗಿಲಿನ ಕೀಲೇ ಕೊನೆಗೂ ಆಯುಧವಾಯಿತು.
ಮಾರುತಿಯ ಈ ಆಯುಧ ಶತ್ರುವನ್ನು ಆತನ ವಾಹನಸಮೇತವಾಗಿ ಪುಡಿ-
ಗುಟ್ಟಿತು.
 
689
 
ಕೆಲವರು ಕೈ
 

 
ಉಳಿದ ಮಂತ್ರಿ ಪುತ್ರರ ಗತಿಯೂ ಹೀಗೆಯೇ ಆಯಿತು.
ಕೆಲವರು ಕೈ ಹೊಡೆತಕ್ಕೆ ಸುಣ್ಣಾದರು. ಇನ್ನು ಕೆಲರು ಕಾಲಡಿಗೆ ಬಿದ್ದು ನುಗ್ಗಾದರು. ಕೆಲ
ವರು ಕೂರುಗುರಿನ ಆಘಾತವನ್ನು ತಡೆದುಕೊಳ್ಳದಾದರು. ಮತ್ತೆ ಕೆಲವರಿಗೆ
ಹನುಮಂತನ ಸಿಂಹ- ನಾದವೇ ಮರಣ ಸಂಗೀತವಾಯಿತು ! ರಾಕ್ಷಸರಿಗೆ ಹನು-
ಮಂತನು ಕಾಲಪುರುಷನಂತೆ ಕಾಣಿಸಿಕೊಂಡನು.
 

 
ಈಗ ರಾವಣನು ಸ್ವಲ್ಪ ಯೋಚಿಸುವಂತಾಯಿತು. ಕೊನೆಗೆ ದುರ್ಧಷ್ರರ್ಷ,
ಯೂಪಾಕ್ಷ, ವಿರೂಪಾಕ್ಷ, ಭಾಸಕರ್ಣ, ಪ್ರಘಸ ಎಂಬ ಐದು ಜನ ಮಹಾ-
ವೀರರಾದ ಸೇನಾಪತಿಗಳನ್ನು ಯುದ್ಧಕ್ಕೆ ಹೋಗುವಂತೆ ರಾವಣನು ಆಜ್ಞಾ-
ಪಿಸಿದನು:
 

 
" ನಾನು ಅನೇಕ ಪರಾಕ್ರಮಿಗಳನ್ನು ನೋಡಿದ್ದೇನೆ. ವಾಲಿ-ಸುಗ್ರೀವ
ರಂಥ ಕಪಿವೀರರನ್ನೂ ನೋಡಿದ್ದೇನೆ. ಆದರೆ ಈ ಕಪಿಗೆ ಅವರಾರೂ ಎಣೆ
ಯಲ್ಲ. ಈ ಕಪಿ ಬಂದುದು ಲಂಕೆಗೆ ದೆವ್ವ ಬಡಿದಂತಾಗಿದೆ.
ಇದರ ಶಕ್ತಿ-
ಸಾಮರ್ಥ್ಯ ಕಲ್ಪನಾತೀತವಾಗಿದೆ. ಬಹಳ ಜಾಗರೂಕತೆಯಿಂದ ಈ ಕಪಿ-
ಯನ್ನು ಹಿಡಿದು ತನ್ನಿರಿ. ದೇಹದ ರಕ್ಷಣೆಯ ಮೇಲೆ ಜಾಗ್ರತೆಯಿರಲಿ, ಅಸಾ-
ಮಾನ್ಯವಾದ ಈ ಕಪಿಯೊಡನೆ ಚಿನ್ನಾಟವಾಡುವುದು ತರವಲ್ಲ.
 
"}
 

 
ಪಂಚ ಮಹಾಸೇನಾನಿಗಳು ಚತುರಂಗ ಸೈನ್ಯದೊಡನೆ ಹನುಮಂತನ
ಮೇಲೆ ದಾಳಿಯಿಟ್ಟರು; ಬಾಣದ ಮಳೆಗರೆದರು. ರಾಕ್ಷಸರು ಗಾಳಿಯೊಡನೆ
ಗುದ್ದಾಡುತ್ತಿದ್ದರು. ಪವನತನಯನಿಗೆ ಅವುಗಳು ನಾಟುವುದುಂಟೆ ?
 
'

 
ಯೂಪಾಕ್ಷನೆಸೆದ ಕಬ್ಬಿಣದ ಸಲಾಕೆ ವ್ಯರ್ಥವಾಯಿತು. ವಿರೂಪಾಕ್ಷ
ರೂ
-ಯೂಪಾಕ್ಷ ಇಬ್ಬರೂ ಹನುಮಂತನೆಸೆದ ಒಂದು ಮರದ ಪೆಟ್ಟಿಗೆ ನುಚ್ಚು ನೂರಾಗಿ
ಬಿದ್ದರು.