This page has not been fully proofread.

ಮಿಂಚಿನಬಳ್ಳಿ
 
ಜಂಬುಮಾಲಿಯ ಬಾಣಗಳಿಗೆ ಉತ್ತರವಾಗಿ ಹನುಮಂತನು ಒಂದು
ದೊಡ್ಡ ಶಿಲೆಯನ್ನು ಅವನೆಡೆಗೆ ಎಸೆದನು. ಜಂಬುಮಾಲಿಯ ಬಾಣ ಅದನ್ನು
ಭೇದಿಸಿತು. ಹನುಮಂತನು ಮರವೊಂದನ್ನು ಕಿತ್ತೆಸೆದನು. ಶತ್ರುವಿನ ಬಾಣ
ಅದನ್ನೂ ಕಬಳಿಸಿತು. ಹೆಬ್ಬಾಗಿಲಿನ ಕೀಲೇ ಕೊನೆಗೂ ಆಯುಧವಾಯಿತು.
ಮಾರುತಿಯ ಈ ಆಯುಧ ಶತ್ರುವನ್ನು ಆತನ ವಾಹನಸಮೇತವಾಗಿ ಪುಡಿ-
ಗುಟ್ಟಿತು.
 
689
 
ಕೆಲವರು ಕೈ
 
ಉಳಿದ ಮಂತ್ರಿ ಪುತ್ರರ ಗತಿಯೂ ಹೀಗೆಯೇ ಆಯಿತು.
ಹೊಡೆತಕ್ಕೆ ಸುಣ್ಣಾದರು. ಇನ್ನು ಕೆಲರು ಕಾಲಡಿಗೆ ಬಿದ್ದು ನುಗ್ಗಾದರು. ಕೆಲ
ವರು ಕೂರುಗುರಿನ ಆಘಾತವನ್ನು ತಡೆದುಕೊಳ್ಳದಾದರು. ಮತ್ತೆ ಕೆಲವರಿಗೆ
ಹನುಮಂತನ ಸಿಂಹನಾದವೇ ಮರಣ ಸಂಗೀತವಾಯಿತು ! ರಾಕ್ಷಸರಿಗೆ ಹನು-
ಮಂತನು ಕಾಲಪುರುಷನಂತೆ ಕಾಣಿಸಿಕೊಂಡನು.
 
ಈಗ ರಾವಣನು ಸ್ವಲ್ಪ ಯೋಚಿಸುವಂತಾಯಿತು. ಕೊನೆಗೆ ದುರ್ಧಷ್ರ,
ಯೂಪಾಕ್ಷ, ವಿರೂಪಾಕ್ಷ, ಭಾಸಕರ್ಣ, ಪ್ರಘಸ ಎಂಬ ಐದು ಜನ ಮಹಾ-
ವೀರರಾದ ಸೇನಾಪತಿಗಳನ್ನು ಯುದ್ಧಕ್ಕೆ ಹೋಗುವಂತೆ ರಾವಣನು ಆಜ್ಞಾ-
ಪಿಸಿದನು:
 
" ನಾನು ಅನೇಕ ಪರಾಕ್ರಮಿಗಳನ್ನು ನೋಡಿದ್ದೇನೆ. ವಾಲಿ-ಸುಗ್ರೀವ
ರಂಥ ಕಪಿವೀರರನ್ನೂ ನೋಡಿದ್ದೇನೆ. ಆದರೆ ಈ ಕಪಿಗೆ ಅವರಾರೂ ಎಣೆ
ಯಲ್ಲ. ಈ ಕಪಿ ಬಂದುದು ಲಂಕೆಗೆ ದೆವ್ವ ಬಡಿದಂತಾಗಿದೆ.
ಇದರ ಶಕ್ತಿ-
ಸಾಮರ್ಥ್ಯ ಕಲ್ಪನಾತೀತವಾಗಿದೆ. ಬಹಳ ಜಾಗರೂಕತೆಯಿಂದ ಈ ಕಪಿ-
ಯನ್ನು ಹಿಡಿದು ತನ್ನಿರಿ. ದೇಹದ ರಕ್ಷಣೆಯ ಮೇಲೆ ಜಾಗ್ರತೆಯಿರಲಿ, ಅಸಾ-
ಮಾನ್ಯವಾದ ಈ ಕಪಿಯೊಡನೆ ಚಿನ್ನಾಟವಾಡುವುದು ತರವಲ್ಲ.
 
"}
 
ಪಂಚ ಮಹಾಸೇನಾನಿಗಳು ಚತುರಂಗ ಸೈನ್ಯದೊಡನೆ ಹನುಮಂತನ
ಮೇಲೆ ದಾಳಿಯಿಟ್ಟರು; ಬಾಣದ ಮಳೆಗರೆದರು. ರಾಕ್ಷಸರು ಗಾಳಿಯೊಡನೆ
ಗುದ್ದಾಡುತ್ತಿದ್ದರು. ಪವನತನಯನಿಗೆ ಅವುಗಳು ನಾಟುವುದುಂಟೆ ?
 
'ಯೂಪಾಕ್ಷನೆಸೆದ ಕಬ್ಬಿಣದ ಸಲಾಕೆ ವ್ಯರ್ಥವಾಯಿತು. ವಿರೂಪಾಕ್ಷ
ರೂಪಾಕ್ಷ ಇಬ್ಬರೂ ಹನುಮಂತನೆಸೆದ ಒಂದು ಮರದ ಪೆಟ್ಟಿಗೆ ನುಚ್ಚು ನೂರಾಗಿ
ಬಿದ್ದರು.