This page has been fully proofread once and needs a second look.

ಸಂಗ್ರಹರಾಮಾಯಣ
 
ಶಂಕರನ ವರದಿಂದ ಅವಧ್ಯರಾದ ಕಿಂಕರರೆಂಬ ರಾಕ್ಷಸರನ್ನು ಯುದ್ಧ -
ಕ್ಕೆಂದು ಕಳುಹಿಸಲಾಯಿತು. ಆ ಸೈನ್ಯದಲ್ಲಿ ಎಂಭತ್ತು ಕೋಟಿ ಸೈನಿಕರಿದ್ದರು;
ಎಂಭತ್ತು ಸಾವಿರ ಸೇನಾಪತಿಗಳಿದ್ದರು. ರಾಕ್ಷಸರು ಆಯುಧಗಳ ಮಳೆಗರೆದರೂ
ಹನುಮಂತನು ಉಗುರಿನಷ್ಟೂ ಅಲುಗಲಿಲ್ಲ ! ಬದಲಾಗಿ ರಾಕ್ಷಸರೆಡೆಗೆ ತಿರ
ಸಾ
ಸ್ಕಾರ ದೃಷ್ಟಿಯನ್ನು ಬೀರಿ ಹೀಗೆ ಘೋಷಿಸಿದನು :
 
೧೫೩
 

 
"ರಾಮಚಂದ್ರನಿಗೆ ಜಯವಾಗಲಿ, ಅವನ ಅನುಯಾಯಿಗಳಾದ ಲಕ್ಷ್ಮ
ನಿಗೂ-ಸುಗ್ರೀವನಿಗೂ ಜಯವಾಗಲಿ. ಕಪಿಸೇನೆಗೆ ಮಂಗಳ- ವಾಗಲಿ, ಸೀತಾ
ಮಾತೆಯ ಪಾದಾರವಿಂದಕ್ಕೆ ಶರಣು. ನನ್ನೊಡನೆ ಯುದ್ಧ ಮಾಡುವವರು
ಬನ್ನಿ; ಜೀವ ಭಾರವಾದವರೆಲ್ಲ ಬನ್ನಿ, ಸಾವಿರ ರಾವಣರು ಒಮ್ಮೆಲೆ ಬಂದರೂ
ನಾನೇನೂ ಹೆದರುವವ- ನಲ್ಲ. ಬನ್ನಿ, ಯುದ್ಧಕ್ಕೆ ಬರುವವರು ಬನ್ನಿ, ಯಮ
ಸದನಕ್ಕೆ ಹೊರಟವರು ಬನ್ನಿ."
 

 
ಲಂಕೆಯ ಸೊಬಗು ಬೆಂಕಿಯಪಾಲಾಯಿತು
 

 
ಹನುಮಂತನ ಯುದ್ಧ ಕೌಶಲ್ಯವನ್ನು ಕಾಣುವುದಕ್ಕಾಗಿ ದೇವತೆಗಳು
ಮುಗಿಲಿನಲ್ಲಿ ಮುತ್ತಿದರು.
 

 
ಹನುಮಂತನ ಮುಷ್ಟಿ ಪ್ರಹಾರ ಅನೇಕರ ಜೀವವನ್ನು ಬಲಿ ತೆಗೆದು
ಕೊಂಡಿತು. ಹೆಬ್ಬಾಗಿಲಿನ ಕೀಲನ್ನೇ ಕಿತ್ತು ಹಿಡಿದುಕೊಂಡು ಅನೇಕರನ್ನು
ಸಂಹರಿಸಿದನು. ನಗರ ಪ್ರಾಸಾದದ ಮೇಲೇರಿ ಅಲ್ಲಿನ ಕಂಬವನ್ನು ಕಿತ್ತೆಸೆದು
ವನಪಾಲಕರನ್ನೂ ಕೊನೆಗೊಳಿಸಿದನು. ಕಂಬಗಳ ಸಮ್ಮರ್ದನದಿಂದ ಎದ್ದ ಕಿಡಿ
ಪ್ರಾಸಾದವನ್ನು ಸುಟ್ಟಿಟೊಗೆಯಿತು. ಆಕಾಶಕ್ಕೆ ನೆಗೆದ ಹನುಮಂತನು ಯುದ್ಧ
ಗರ್ಜನೆಯನ್ನು ಮಾಡಿದನು :
 
(6
 

 
"
ರಾಮಚಂದ್ರನು ನನ್ನ ಸ್ವಾಮಿ, ನನ್ನಂಥ ಸಾವಿರ ಜನ ಅವನ ಸೇವಕ
ರಾಗಿದ್ದಾರೆ. ನನ್ನ ತೋಳಿನ ತೀಟೆ ಶತ್ರುಗಳಿಗೆ ಆಹ್ವಾನ-ವನ್ನೀಯುತ್ತಿದೆ.
ಧೈರ್ಯವಿದ್ದವರು ಮುಂದೆ ಬನ್ನಿ,. "
 

 
ಹನುಮಂತನು ಕಿಂಕರರನ್ನು ತೀರಿಸಿ ಮಾಡಿದ ಗರ್ಜನೆ ರಾವಣನಿಗೆ
ತಿಳಿದುಬಂದಿತು. ಅವನು ಪ್ರಹಸ್ತಪುತ್ರನಾದ ಜಂಬುಮಾಲಿ ಮೊದಲಾದ
ಪ್ರಚಂಡರನ್ನು ಯುದ್ಧಕ್ಕಾಗಿ ಕಳಿಸಿದನು.