This page has been fully proofread once and needs a second look.

ಮಿಂಚಿನಬಳ್ಳಿ
 
ಎಂದು ಹನುಮಂತನ ಕೈಯಲ್ಲಿ ಚೂಡಾಮಣಿಯನ್ನಿತ್ತಳು. ಹನು

ಮಂತನು " ರಾಮಚಂದ್ರನನ್ನು ಸದ್ಯದಲ್ಲಿಲೆ ಕಾಣುವೆಯಂತೆ." ಎಂದು ಹೇಳಿ
ಸುತ್ತುವರಿದು ನಮಸ್ಕರಿಸಿ ಸೀತೆಯನ್ನು ಬೀಳ್ಕೊಂಡನು.
 
೧೫
 

 
ಅಲ್ಲಿಂದ ಹೊರಟ ಹನುಮಂತನಿಗೆ ಒಂದು ಯೋಚನೆ ಬಂತು. ರಾಮ
ದೂತನಾದ ತಾನು ಹೀಗೆ ಕಳ್ಳರಂತೆ ಗುಟ್ಟಾಗಿ ಬಂದುಹೋಗುವುದು ಚೆನ್ನಲ್ಲ.
ತನ್ನ ಪರಾಕ್ರಮದ ರುಚಿಯನ್ನು ರಾವಣನಿಗೆ ತೋರಿಸಿಯೇ ಹೋಗಬೇಕು.
ರಾಮದೂತನೆಂದರೆ ಸಾಮಾನ್ಯನಲ್ಲ ಎಂದು ಅವನು ತಿಳಿಯುವಂತಾಗಬೇಕು.
ಹೀಗೆ ಯೋಚಿಸಿದವನೇ ಅಶೋಕ ವನವನ್ನು ಪುಡಿ ಮಾಡತೊಡಗಿದನು.
- ದನು. ಸೀತೆಗೆ ಆಶ್ರಯವಿತ್ತ ಶಿಂಶಪೆಯನ್ನೊಂದು ಮುಟ್ಟಲಿಲ್ಲ. ಮಾರುತಿಯು ಬಿರು
ಗಾಳಿಯಂತೆ ಮರಗಳನ್ನು ಕೆಡವತೊಡಗಿ- ದನು. ಆನೆಯ ತುಳಿತಕ್ಕೆ ಸಿಕ್ಕಿದ
ಕಮಲದಂತೆ, ಬೆಂಕಿ ಬಿದ್ದ ಹತ್ತಿಯ ರಾಶಿಯಂತೆ ರಾವಣನ ಉದ್ಯಾನ ಹೇಳ
ಹೆಸರಿಲ್ಲ- ದಂತಾಯಿತು. ಇನ್ನೂ ಬೆಳಕು ಹರಿದಿರಲಿಲ್ಲ. ರಾಕ್ಷಸರು ಯಾರೂ

ಎದ್ದಿರಲಿಲ್ಲ. ಎಂತಲೇ ಹನುಮಂತನು ಯುದ್ಧಾಹ್ವಾನವೆಂಬಂತೆ ಸಿಂಹನಾದ
ವನ್ನು ಮಾಡಿ ನಗರದ ಹೆಬ್ಬಾಗಿಲನ್ನೇರಿ ಕುಳಿತನು.
 

 
ಈ ಕೂಗಿಗೆ ಸೀತೆಯ ಬಳಿಯಿದ್ದ ಕಾವಲುಗಾರೆಯರಿಗೆ ಎಚ್ಚರಾಯಿತು.
ಅವರಲ್ಲಿ ಕೆಲವರು ಇದೇ ಕಸಿಪಿ, ಸೀತೆಯ ಬಳಿ ಮಾತನಾಡುತ್ತಿರುವುದನ್ನೂ
ಕಂಡಿದ್ದರು. ಎಲ್ಲರೂ ಸೀತೆಯನ್ನು ವಿಚಾರಿಸತೊಡಗಿದರು :
 

 
"ನಿನ್ನೊಡನೆ ಮಾತನಾಡುತ್ತಿದ್ದನಲ್ಲ. ಕಪಿರೂಪನಾದ ಆತನು
 
ಯಾರು ?"
 

 
ಮಾಯಾಸೀತೆ ಮಾಯಾ ನಾಟಕವನ್ನೆ ಆಡಿದಳು :
 

 
"ಯಾರೋ, ರಕ್ಕಸರ ಮಾಯೆಯಿರಬೇಕು. ಯಾರೆಂದು ನನಗೇನು
ಗೊತ್ತು ? ನಿಮ್ಮ ಕಪಟ ನಿಮಗೇ ಗೊತ್ತು. ಹಾವಿನ ಕಾಲು ಹಾವಿಗೆ ಮಾತ್ರವೇ
ಗೊತ್ತು."
 

 
ರಕ್ಕಸಿಯರಿಗೆ ಸಂಶಯ ಬರದಿರಲಿಲ್ಲ. ಯಾರೋ ರಾಮನ ಕಡೆಯವರಿರ
ಬೇಕು ಎಂದು ಕೂಡಲೆ ಲಂಕೇಶ್ವರನಿಗೆ ವಾರ್ತೆ ಮುಟ್ಟಿಸಲಾಯಿತು.
ಚೇಷ್ಟೆಯನ್ನಾಲಿಸಿದ ರಾವಣ ಕಿಡಿಕಿಡಿ- ಯಾದ,
 
.