This page has been fully proofread once and needs a second look.

ಸಂಗ್ರಹರಾಮಾಯಣ
 
ನಿನ್ನ ಪತಿ ಶತ್ರುಗಳನ್ನು ಸಂಹರಿಸಿ ನಿನ್ನನ್ನು ಕೊಂಡೊಯ್ಯು- ವನು. ನೀನು
ಬಯಸುವುದಾದರೆ ಈ ಕ್ಷಣದಲ್ಲಿ ಬೇಕಾದರೂ ನಿನ್ನನ್ನು ರಾಮಸನ್ನಿಧಿಗೆ
 
೧೫೧
 
ಕೊಂಡೊಯ್ಯುವೆನು.
 
"ನೀನು ನನ್ನನ್ನು ಕೊಂಡೊಯ್ಯುವುದು ! ಅದು ಹೇಗೆ ಸಾಧ್ಯ?

ದೇವತೆಗಳಿಗೂ ಬಗ್ಗದ ಈ ದುಷ್ಟ ರಾಕ್ಷಸರು ಗೇಣುದ್ದದ ನಿನ್ನನ್ನು ಸುಮ್ಮನೆ
 
ಬಿಡುವರೆ ?"
 

 
ಸೀತೆಯ ಮಾತನ್ನಾಲಿಸಿದ ಹನುಮಂತ ಮೇರುಪರ್ವತದಂತೆ ಮಹೋ-
ನೃ
ನ್ನನಾವಾಗಿ ಬೆಳೆದು ನಿಂತು ನುಡಿದನು:
 

 
"ಇಡಿಯ ಭೂಮಂಡಲವನ್ನೆ ಬೇಕಾದರೂ ಕ್ಷಣಾರ್ಧದಲ್ಲಿ ಎತ್ತಿ ಎಸೆಯ
ಬಲ್ಲೆ. ಈ ಚಿಕ್ಕ ಲಂಕೆ ಯಾವ ಲೆಕ್ಕಕ್ಕೆ ? ರಾಮಭಕ್ತ ರಲ್ಲಿ ಶ್ರೇಷ್ಠನಾದ ನ
ನ್ನ ಬಲ ಅಂಥದು. ಮಂದರದ ಶಿಖರದಂತಿ- ರುವ ನನ್ನ ಬೆನ್ನ ಮೇಲೆ ಕುಳಿತುಕೊ
ತಾಯಿ, ಕ್ಷಣಾರ್ಧದಲ್ಲಿ ರಾಮನನ್ನು ಕಾಣುವೆಯಂತೆ."
 

 
"ಮಾರುತಿ ! ಬಲದಲ್ಲೂ ಜ್ಞಾನದಲ್ಲಿಲೂ ನೀನು ಅಸದೃಶ- ನೆಂದು ಗೊತ್ತು.
ಲಂಕೆಯನ್ನೂ ಲಂಕೇಶ್ವರನನ್ನೂ ಸದೆಬಡಿದು ನೀನು ನನ್ನನ್ನು ಕೊಂಡೊಯ್ಯ
ಬಲ್ಲೆ. ಆದರೆ ರಾಮಚಂದ್ರನೇ ಇಲ್ಲಿಗೆ ಬಂದು, ರಾವಣನನ್ನು ಕೊಂದು
ನನ್ನನ್ನು ಸ್ವೀಕರಿಸಬೇಕು. ಅದು ನ್ಯಾಯವಾದ ಮಾರ್ಗ- ರಾಜಮಾರ್ಗ,
ಇದು ನಿನಗೂ ಸಮ್ಮತವಲ್ಲವೇ ?
 

 
ನಾನೂ ರಾಮಚಂದ್ರನೂ ಏಕಾಂತದಲ್ಲಿದ್ದಾಗ ನನ್ನನ್ನು ಪೀಡಿಸಬಂದ
ಕಾಗೆಯ ಕಣ್ಣನ್ನು ಹುಲ್ಲುಕಡ್ಡಿಯಿಂದ ಕುಕ್ಕಿದ ಕಥೆಯನ್ನು, ನನ್ನನ್ನು ನೋಡಿದ
ಸಂಕೇತಕ್ಕಾಗಿ ಪ್ರಭುವಿನ ಬಳಿ ಅರುಹು. ನನ್ನ ಪ್ರೀತಿಯ ಪ್ರಣಾಮಗಳನ್ನೂ
ಸಲ್ಲಿಸು.
 

 
ಇನ್ನೊಂದು ತಿಂಗಳ ಅವಧಿಯಿದೆ. ಅದರ ಮೊದಲು ರಾಮ- ಚಂದ್ರ
ಚಿತ್ತೈಸದಿದ್ದರೆ ರಾವಣನನ್ನು ಸಂಹರಿಸದಿದ್ದರೆ ನಾನು ಜೀವದಿಂದಿರಲಾರೆ.
ನನ್ನ ಮೈದುನ ಲಕ್ಷ್ಮಣನಿಗೂ ನನ್ನ ಹರಕೆ- ಗಳನ್ನು ತಿಳಿಸು, ಬಂಧು ಸುಗ್ರೀವ
ನಿಗೂ ಅವನ ಪರಿವಾರ- ದವರಿಗೂ ನನ್ನ ಶುಭಾಶಯಗಳನ್ನರುಹು. ನಿನ್ನ ಕಾರ್

ಯಶಸ್ವಿಯಾಗಲಿ. ಮಾರ್ಗವು ಮಂಗಳಕರವಾಗಿರಲಿ. ಈ ಚೂಡಾಮಣಿಯನ್ನು
ಅಂಗುಲೀಯದ ಬದಲು ಪ್ರತ್ಯಭಿಜ್ಞಾನ- ವಾಗಿ ನನ್ನ ಪ್ರಭುವಿಗೆ ಅರ್ಪಿಸು
. ಶುಭಾಸ್ತೇ ಪಂಥಾನಃ ಸಂತು."