2023-03-15 15:35:47 by ambuda-bot
This page has not been fully proofread.
ಸಂಗ್ರಹರಾಮಾಯಣ
ನಿನ್ನ ಪತಿ ಶತ್ರುಗಳನ್ನು ಸಂಹರಿಸಿ ನಿನ್ನನ್ನು ಕೊಂಡೊಯ್ಯುವನು. ನೀನು
ಬಯಸುವುದಾದರೆ ಈ ಕ್ಷಣದಲ್ಲಿ ಬೇಕಾದರೂ ನಿನ್ನನ್ನು ರಾಮಸನ್ನಿಧಿಗೆ
೧೫೧
"ನೀನು ನನ್ನನ್ನು ಕೊಂಡೊಯ್ಯುವುದು ! ಅದು ಹೇಗೆ ಸಾಧ್ಯ?
ದೇವತೆಗಳಿಗೂ ಬಗ್ಗದ ಈ ದುಷ್ಟ ರಾಕ್ಷಸರು ಗೇಣುದ್ದದ ನಿನ್ನನ್ನು ಸುಮ್ಮನೆ
ಬಿಡುವರೆ ?"
ಸೀತೆಯ ಮಾತನ್ನಾಲಿಸಿದ ಹನುಮಂತ ಮೇರುಪರ್ವತದಂತೆ ಮಹೋ-
ನೃತನಾಗಿ ಬೆಳೆದು ನಿಂತು ನುಡಿದನು:
"ಇಡಿಯ ಭೂಮಂಡಲವನ್ನೆ ಬೇಕಾದರೂ ಕ್ಷಣಾರ್ಧದಲ್ಲಿ ಎತ್ತಿ ಎಸೆಯ
ಬಲ್ಲೆ. ಈ ಚಿಕ್ಕ ಲಂಕೆ ಯಾವ ಲೆಕ್ಕಕ್ಕೆ ? ರಾಮಭಕ್ತರಲ್ಲಿ ಶ್ರೇಷ್ಠನಾದ ನನ
ಬಲ ಅಂಥದು. ಮಂದರದ ಶಿಖರದಂತಿರುವ ನನ್ನ ಬೆನ್ನ ಮೇಲೆ ಕುಳಿತುಕೊ
ತಾಯಿ, ಕ್ಷಣಾರ್ಧದಲ್ಲಿ ರಾಮನನ್ನು ಕಾಣುವೆಯಂತೆ."
"ಮಾರುತಿ ! ಬಲದಲ್ಲೂ ಜ್ಞಾನದಲ್ಲಿ ನೀನು ಅಸದೃಶನೆಂದು ಗೊತ್ತು.
ಲಂಕೆಯನ್ನೂ ಲಂಕೇಶ್ವರನನ್ನೂ ಸದೆಬಡಿದು ನೀನು ನನ್ನನ್ನು ಕೊಂಡೊಯ್ಯ
ಬಲ್ಲೆ. ಆದರೆ ರಾಮಚಂದ್ರನೇ ಇಲ್ಲಿಗೆ ಬಂದು, ರಾವಣನನ್ನು ಕೊಂದು
ನನ್ನನ್ನು ಸ್ವೀಕರಿಸಬೇಕು. ಅದು ನ್ಯಾಯವಾದ ಮಾರ್ಗ- ರಾಜಮಾರ್ಗ,
ಇದು ನಿನಗೂ ಸಮ್ಮತವಲ್ಲವೇ ?
ನಾನೂ ರಾಮಚಂದ್ರನೂ ಏಕಾಂತದಲ್ಲಿದ್ದಾಗ ನನ್ನನ್ನು ಪೀಡಿಸಬಂದ
ಕಾಗೆಯ ಕಣ್ಣನ್ನು ಹುಲ್ಲುಕಡ್ಡಿಯಿಂದ ಕುಕ್ಕಿದ ಕಥೆಯನ್ನು, ನನ್ನನ್ನು ನೋಡಿದ
ಸಂಕೇತಕ್ಕಾಗಿ ಪ್ರಭುವಿನ ಬಳಿ ಅರುಹು. ನನ್ನ ಪ್ರೀತಿಯ ಪ್ರಣಾಮಗಳನ್ನೂ
ಸಲ್ಲಿಸು.
ಇನ್ನೊಂದು ತಿಂಗಳ ಅವಧಿಯಿದೆ. ಅದರ ಮೊದಲು ರಾಮಚಂದ್ರ
ಚಿತ್ತೈಸದಿದ್ದರೆ ರಾವಣನನ್ನು ಸಂಹರಿಸದಿದ್ದರೆ ನಾನು ಜೀವದಿಂದಿರಲಾರೆ.
ನನ್ನ ಮೈದುನ ಲಕ್ಷ್ಮಣನಿಗೂ ನನ್ನ ಹರಕೆಗಳನ್ನು ತಿಳಿಸು, ಬಂಧು ಸುಗ್ರೀವ
ನಿಗೂ ಅವನ ಪರಿವಾರದವರಿಗೂ ನನ್ನ ಶುಭಾಶಯಗಳನ್ನರುಹು. ನಿನ್ನ ಕಾರ್
ಯಶಸ್ವಿಯಾಗಲಿ. ಮಾರ್ಗವು ಮಂಗಳಕರವಾಗಿರಲಿ. ಈ ಚೂಡಾಮಣಿಯನ್ನು
ಅಂಗುಲೀಯದ ಬದಲು ಪ್ರತ್ಯಭಿಜ್ಞಾನವಾಗಿ ನನ್ನ ಪ್ರಭುವಿಗೆ ಅರ್ಪಿಸು
ಶುಭಾಸ್ಕ ಪಂಥಾನಃ ಸಂತು."