This page has not been fully proofread.

ಮಿಂಚಿನಬಳ್ಳಿ
 
ಅತ್ತಿಗೆಯನ್ನು ರಾಕ್ಷಸನು ಕದ್ದೊಯ್ಯುವಂತಾಯಿತು ಎಂದು ಪರಿತಪಿಸುತ್ತಿದ್ದಾನೆ.
ಋಷ್ಯಮೂಕದಲ್ಲಿ ನಾವು ಅವರನ್ನು ಕೂಡಿಕೊಂಡೆವು. ಅದು ನಮ್ಮ ಭಾಗ್ಯ.
ಅಲ್ಲಿ ರಾಮಚಂದ್ರನಿಗೂ ಕಪಿರಾಜ ಸುಗ್ರೀವನಿಗೂ ಗೆಳೆತನವನ್ನು ನಾನೇ ಮಾಡಿ
ಸಿದೆ. ಗೆಳೆತನದ ಸಾಕ್ಷಿಯಾಗಿ ರಾಮಚಂದ್ರನು ವಾಲಿಯನ್ನು ಕೊಂದು
ಸುಗ್ರೀವನಿಗೆ ಕಪಿ ಸಾಮ್ರಾಜ್ಯವನ್ನು ದಯಪಾಲಿಸಿದ್ದಾನೆ. ಸುಗ್ರೀವನ ಆಜ್ಞೆ
ಯಂತೆ ಕಪಿವೀರರೆಲ್ಲ ದಿಕ್ಕುದಿಕ್ಕುಗಳಲ್ಲಿ ನಿನ್ನನ್ನು ಹುಡುಕಿಕೊಂಡು ಅಲೆಯು
ತ್ತಿದ್ದಾರೆ.
 
೧೫೦
 
ನಾನೂ ಆ ಗುಂಪಿನಲ್ಲಿಯ ಒಬ್ಬನು. ಅಂಜನಾದೇವಿಯಲ್ಲಿ ಪವಮಾನ
ನಿಂದ ನನ್ನ ಜನ್ಮವಾಯಿತು. ನನ್ನನ್ನು ಹನುಮಂತನೆಂದು ಕರೆಯುತ್ತಾರೆ.
ನಾನು ರಾಮದೂತ್ಯವನ್ನು ನಿರ್ವಹಿಸುವುದಕ್ಕಾಗಿ ಸಾಗರವನ್ನು ದಾಟಿ ಇಲ್ಲಿಗೆ
ಬಂದಿದ್ದೇನೆ. ನನ್ನ ಮಾತನ್ನು ನೀನು ನಂಬಬಹುದು. ಈ ಹನುಮಂತನಿಗೆ
ಸುಳ್ಳು ನುಡಿದು ಗೊತ್ತಿಲ್ಲ."
 
ಹೀಗೆ ನುಡಿದು ರಾಮನಾಮವನ್ನು ಕೆತ್ತಿದ ಉಂಗುರವನ್ನು ಅಭಿಜ್ಞಾನ
ವಾಗಿ ಕೊಟ್ಟನು. ಸೀತೆ ಆದರದಿಂದ ಭಕ್ತಿಯಿಂದ ಅದನ್ನು ತೆಗೆದುಕೊಂಡು
ಕಣ್ಣಿಗೊತ್ತಿಕೊಂಡಳು. ರಾಮದೂತನನ್ನು ಕಂಡು ಸೀತೆಗೆ ಎಲ್ಲಿಲ್ಲದ ಆನಂದ
ವಾಗಿತ್ತು. ಲಂಕೆಗೆ ಬಂದಮೇಲೆ ಮೊದಲಬಾರಿ ಮುಗುಳು ನಗುತ್ತ ಆಕೆ
ಮಾತನಾಡಿದಳು :
 
"ಮಹಾವೀರನಾದ ರಾಮದೂತನೆ ! ನಿನ್ನ ಬುದ್ಧಿ ಬಲ ಅಪಾರವಾಗಿದೆ.
ನಿನ್ನ ಶಕ್ತಿ ಸಾಮರ್ಥ್ಯಗಳು ಅದ್ಭುತವಾಗಿವೆ. ಎಂತಲೇ ನೀನು ಇಲ್ಲಿಗೆ ಬರು
ವುದು ಸಾಧ್ಯವಾಯಿತು. ನನ್ನ ಸ್ವಾಮಿ ರಾಮಚಂದ್ರ, ಮೈದುನ ಲಕ್ಷಣ
ಎಲ್ಲರೂ ಸೌಖ್ಯವಾಗಿದ್ದಾರೆಯೆ ? ನನ್ನ ಪ್ರಭು ಇಲ್ಲಿಗೆ ಬಂದು ನನ್ನನ್ನು ಕರೆ
ದೊಯ್ಯುವನೆ ? ನಾನು ಇಲ್ಲಿಗೆ ಬಂದು ಹತ್ತು ಮಾಸಗಳು ಕಳೆದುಹೋದವು.
ಇನ್ನೆರಡು ತಿಂಗಳು ಉಳಿದಿವೆ. ಹನ್ನೆರಡನೆಯ ಮಾಸ ಕಳೆದರೆ ಮತ್ತೆ ನನ್ನನ್ನು
ಕೊಂದು ತಿನ್ನುವ ಯೋಜನೆ ನಡೆದಿದೆ. ಪುಣ್ಯಾತ್ಮನಾದ ವಿಭೀಷಣನ ಮಗಳು
ಕಲೆಯೆಂಬವಳಿಂದ ನನಗೆ ಈ ರಹಸ್ಯ ತಿಳಿಯಿತು."
 
"ದೇವಿ, ನಿನ್ನ ಪಾದದಾಣೆಯಾಗಿ ನನ್ನ ಮಾತುಗಳನ್ನು ನಂಬು, ಸದ್ಯದಲ್ಲಿ
ರಾಮಚಂದ್ರನು ಲಕ್ಷ್ಮಣನೊಡನೆ ಕಪಿಸೇನೆಯೊಡನೆ ಇಲ್ಲಿಗೆ ಬರುವನು.
ರಾವಣನ ತಲೆಗಳುರುಳುವವು. ಕುಂಭಕರ್ಣನ ನಿದ್ರೆ ಶಾಶ್ವತವಾಗುವುದು.