This page has been fully proofread once and needs a second look.

ಸಂಗ್ರಹರಾಮಾಯಣ
 
ಅಂಗುಲೀಯಕ್ಕೆ ಬದಲಾಗಿ ಚೂಡಾಮಣಿ
 

 
ಹನುಮಂತನು ಮರದಿಂದ ಕೆಳಗಿಳಿದು ವಿನಯಪೂರ್ವಕ ವಾಗಿ ವಿಜ್ಞಾಪಿಸಿ
ಕೊಂಡನು:
 

 
"ರಾಮಚಂದ್ರನ ಪತ್ನಿ ಸೀತೆಯಲ್ಲವೆ ನೀನು ? ನನ್ನ ಸಾಹಸದ ಸಾಫ.
ಲ್ಯದ ಸಂಕೇತವಲ್ಲವೆ ನೀನು ?"
 
೧೪೯
 

 
"ರಾಮನ ಮಡದಿ, ದಶರಥನ ಸೊಸೆ, ಜನಕನ ಮಗಳು, ಆ ನಿರ್ಭಾಗ್ಯ
ಸೀತೆ ನಾನೆ ! ಆದರೆ ನೀನು ಯಾರು ? ಎಲ್ಲಿಂದ ಬಂದಿರುವೆ ?"
 

 
"ನನ್ನ ತಾಯಿ, ರಾಮಚಂದ್ರನು ನಿನ್ನ ಕುಶಲವನ್ನು ಕೇಳಿದ್ದಾನೆ.

ನಾನು ರಾಮಚಂದ್ರನ ಬಳಿಯಿಂದ ಬಂದ ಅವನ ನನ್ನಮ್ರ ಸೇವಕ."
 

 
ಹನುಮಂತನು ಸೀತೆಯ ಬಳಿಸಾರಿ ಕೆಂದಾವರೆಯಂಥ ಕಾಲು ಗಳಿಗೆರಗಿ
'ಧನ್ಯನಾದೆನು' ಎಂದುಕೊಂಡನು.
 

 
ಸೀತೆ, ಸಂಶಯದಿಂದ ಕಾಲುಕೊಡವಿಕೊಂಡು ದೂರ ಸರಿದಳು.

 
"ನೀನು ಮಾಯಾವಿ ರಾವಣನೇ ಇರಬೇಕು. 'ಮಂಗನ ರೂಪ- ದಿಂದ
ಬಂದು ಮರುಳು ಮಾಡಬೇಕೆಂದಿರುವೆಯಾ ? ನೀನು ರಾಮದೂತನೇ
ನಿಜವಾದರೆ ಆತನ ಲಕ್ಷಣವನ್ನರುಹು. ದುಃಖ- ನಾಶಕವಾದ ಆತನ ಚರಿತೆ-
ಯನ್ನರಹು."
 
"

 
"
ದೇವದೇವನ ಲಕ್ಷಣವನ್ನು ಹೇಳುವುದು ಸಾಧ್ಯವೆ ? ಭೂಮಿಯ
ಶಾಂತಿ, ಸೂರ್ಯನ ತೇಜಸ್ಸು, ಮಾರನ ರೂಪಶ್ರೀ, ಇಂದ್ರನ ಯಶಸ್ಸು ಇವೆಲ್ಲ
ಪ್ರಭು ರಾಮಚಂದ್ರನ ಕೊಡುಗೆಗಳು, ಅವನ ಸದ್ಗುಣಗಳ ಕಡಲಿನಿಂದ ಚಿಮ್ಮಿದ
ಕಣಗಳು. ಇಂದ್ರನೀಲ ದಂತೆ ಕಪ್ಪಾದ ಮೈಬಣ್ಣ. ಕಮಲದಂಥ ಕಣ್ಣು.
ಸಿಂಹದಂತೆ ಪರಾಕ್ರಮ. ಇದು ಲೋಕದ ಜನ ಕೊಡುವ ಉಪಮಾನಗಳು,

ನಿಜಕ್ಕೂ ರಾಮಚಂದ್ರನಿಗೆ ಎಣೆಯೆಂಬುದಿದೆಯೆ ? ದ್ವಾತ್ರಿಂಶ ಲಕ್ಷಣಗಳಿಂದ
ಪರಿಪೂರ್ಣ ಸುಂದರವಾದ ಆ ಮೂರ್ತಿಯನ್ನು ಬಣ್ಣಿಸುವುದು ಯಾರಿಗೆ ಸಾಧ್ಯ ?
 
.
 
ಅವನ ಹೆಸರು
 

 
"ಅವನಿಗೆ ಅನುರೂಪನಾದ ತಮ್ಮನೊಬ್ಬನಿದ್ದಾನೆ.
ಲಕ್ಷ್ಮಣ. ನಿನ್ನ ಮೈದುನ ಕಾಡೆಲ್ಲ ನಿನಗಾಗಿ ಹುಡುಕುತ್ತಿದ್ದಾನೆ.. ತನ್ನಿಂದಾಗಿ