This page has been fully proofread once and needs a second look.

ಮಿಂಚಿನಬಳ್ಳಿ
 
ರಾಕ್ಷಸರು-ರಾಕ್ಷಸಿಯರು ಎಲ್ಲರೂ ಕೆಂಪು ಬಟ್ಟೆಯನ್ನುಟ್ಟು ಕೊಂಡಿದ್ದರು.
ಎಣ್ಣೆ ಕುಡಿದು, ಮತ್ತರಂತೆ ಹಾಡಿ ಕುಣಿಯು- ತ್ತಿದ್ದರು. ಮತ್ತೆ ಕೆಲವರು
ಗೋಮಯದ ಕೊಳದಲ್ಲಿ ಬಿದ್ದು
ಕೊಂಡಿದ್ದರು. ಲಂಕೆಯು ಬೆಂಕಿಗೆ ಆಹುತಿ-
-
ಯಾಗಿತ್ತು. ವಿಭೀಷಣ ನೊಬ್ಬನೇ ಬೆಳ್ಳಿ ಬೆಟ್ಟದಲ್ಲಿ ಬೆಳ್ಕೊಡೆಯನ್ನು ಹಿಡಿದು
ನಿಂತಿ- ದ್ದನು. ಹೀಗೆ ನನಗೆ ಕನಸು ಬಿತ್ತು.
 
CVB
 

 
ರಾಕ್ಷಸರಿಗೆ ವಿಪತ್ತು ಕಾದಿದೆ, ಸೀತೆಗೆ ಮಂಗಳವಾಗಲಿದೆ. ಇದು

ಕನಸು ಹೇಳುವ ಕಣಿ,. ಸೀತೆ ಭಾಗ್ಯಶಾಲಿನಿ,. ನೀವು ಆಕೆಯನ್ನು ಗದರಿಸ
ಬಾರದು. ಈ ಸಾಧಿಧ್ವಿಯ ಎದುರು ಕೆಟ್ಟ ಮಾತುಗಳನ್ನಾಡಿ ನಿಮ್ಮ ಸಣ್ಣತ
ತನ
ವನ್ನು ನೀವು ತೋರಿಸಬಾರದು. "
 

 
ಸೀತೆಯಂತೂ ರಾಮನನ್ನೆ ನೆನೆದುಕೊಂಡು ರೋದಿಸುತ್ತಿದ್ದಳು. ಇಷ್ಟೆಲ್ಲ
ನಡೆವಾಗಲೂ ಹನುಮಂತ ಮರದ ಮೇಲೆಯೇ ಕುಳಿತಿದ್ದ. ರಾಕ್ಷಸಿಯರು
ಎಚ್ಚತ್ತಿದ್ದಾಗ ಸೀತೆಯ ಬಳಿ ಮಾತ- ನಾಡುವುದು ಸಾಧ್ಯವಿರಲಿಲ್ಲ. ಅದಕ್ಕಾಗಿ,
ಹನುಮಂತ ಅವರು ನಿದ್ರಿಸುವುದನ್ನೇ ಕಾದು ಕುಳಿತಿದ್ದನು. ಈಗ ಎಲ್ಲರೂ
ಮಾತು ಮುಗಿಸಿ ನಿದ್ರೆಯ ಜೊಂಪಿನಲ್ಲಿದ್ದರು. ಇದೇ ಸಮಯವೆಂದು ತಿಳಿದು
ಮಾರುತಿ ಮರದ ಮರೆಯಲ್ಲಿ ನಿಂತು ಸ್ಪಷ್ಟ ವಾಣಿಯಿಂದ ನುಡಿಯತೊಡಗಿದನು:
 

 
" ದಶರಥ ತನಯ, ಸರ್ವಗುಣನಿಧಿಯಾದ ರಾಮಚಂದ್ರನು ಹರನ
ಬಿಲ್ಲನ್ನು ಮುರಿದು ಜಾನಕಿಯನ್ನು ವರಿಸಿದನು. ತಂದೆಯ ಆದೇಶದಂತೆ
`
ರಾಜ್ಯವನ್ನು ತೊರೆದು ಕಾಡಿಗೆ ನಡೆದನು. ಅವನ ಪ್ರಿಯ ಪತ್ನಿ ಸೀತೆ ಕೂಡ
'
ಅವನ ಸಂಗಾತಿಯಾಗಿ ಬಂದಳು. ಅಲ್ಲಿ ದುರುಳ ರಾವಣನು ಆಕೆಯನ್ನು
ವಂಚನೆಯಿಂದ ಕದ್ದೊಯ್ದನು. ರಾಮಚಂದ್ರನ ಸೀತಾನ್ವೇಷಣೆಯಲ್ಲಿ
ಸಹಾಯಕನಾಗಿ-ದೂತ ನಾಗಿ ನಾನಿಲ್ಲಿಗೆ ಬಂದಿದ್ದೇನೆ.
 

 
ದೇವಿ ಜಾನಕಿ ! ಮಹಾಪ್ರಭು ರಾಮಚಂದ್ರನೂ ಮೈದುನ ಲಕ್ಷ್ಮಣನೂ
ದೂತನಾದ ನನ್ನ ಮುಖದಿಂದ ನಿನ್ನ ಕುಶಲವನ್ನು ಕೇಳಿದ್ದಾರೆ."
 

 
ಇದನ್ನು ಕೇಳಿ ಸೀತೆಗೆ ಅಚ್ಚರಿಯ ಮೇಲೆ ಅಚ್ಚರಿ. ಈ ರಾಕ್ಷಸರ

ಕೊಂಪೆಯಲ್ಲೂ ರಾಮಗುಣಗಾನ ಮಾಡುವ ಪುಣ್ಯ ಪುರುಷನು ಯಾರು ?
ಕೂದಲನ್ನು ಸಾವರಿಸಿ ಮುಖವನ್ನೆತ್ತಿ ಕಾತರ ದೃಷ್ಟಿ- ಯಿಂದ ಸೀತೆ ಮರದೆಡೆಗೆ
ದಿಟ್ಟಿಸಿದಳು..