This page has not been fully proofread.

ಮಿಂಚಿನಬಳ್ಳಿ
 
ರಾಕ್ಷಸರು-ರಾಕ್ಷಸಿಯರು ಎಲ್ಲರೂ ಕೆಂಪು ಬಟ್ಟೆಯನ್ನುಟ್ಟು ಕೊಂಡಿದ್ದರು.
ಎಣ್ಣೆ ಕುಡಿದು, ಮತ್ತರಂತೆ ಹಾಡಿ ಕುಣಿಯುತ್ತಿದ್ದರು. ಮತ್ತೆ ಕೆಲವರು
ಗೋಮಯದ ಕೊಳದಲ್ಲಿ ಬಿದ್ದು ಕೊಂಡಿದ್ದರು. ಲಂಕೆಯು ಬೆಂಕಿಗೆ ಆಹುತಿ-
- ಯಾಗಿತ್ತು. ವಿಭೀಷಣನೊಬ್ಬನೇ ಬೆಳ್ಳಿ ಬೆಟ್ಟದಲ್ಲಿ ಬೆಳ್ಕೊಡೆಯನ್ನು ಹಿಡಿದು
ನಿಂತಿದ್ದನು. ಹೀಗೆ ನನಗೆ ಕನಸು ಬಿತ್ತು.
 
CVB
 
ರಾಕ್ಷಸರಿಗೆ ವಿಪತ್ತು ಕಾದಿದೆ, ಸೀತೆಗೆ ಮಂಗಳವಾಗಲಿದೆ. ಇದು
ಕನಸು ಹೇಳುವ ಕಣಿ, ಸೀತೆ ಭಾಗ್ಯಶಾಲಿನಿ, ನೀವು ಆಕೆಯನ್ನು ಗದರಿಸ
ಬಾರದು. ಈ ಸಾಧಿಯ ಎದುರು ಕೆಟ್ಟ ಮಾತುಗಳನ್ನಾಡಿ ನಿಮ್ಮ ಸಣ್ಣತ
ತನ
ವನ್ನು ನೀವು ತೋರಿಸಬಾರದು. "
 
ಸೀತೆಯಂತೂ ರಾಮನನ್ನೆ ನೆನೆದುಕೊಂಡು ರೋದಿಸುತ್ತಿದ್ದಳು. ಇಷ್ಟೆಲ್ಲ
ನಡೆವಾಗಲೂ ಹನುಮಂತ ಮರದ ಮೇಲೆಯೇ ಕುಳಿತಿದ್ದ. ರಾಕ್ಷಸಿಯರು
ಎಚ್ಚತ್ತಿದ್ದಾಗ ಸೀತೆಯ ಬಳಿ ಮಾತನಾಡುವುದು ಸಾಧ್ಯವಿರಲಿಲ್ಲ. ಅದಕ್ಕಾಗಿ,
ಹನುಮಂತ ಅವರು ನಿದ್ರಿಸುವುದನ್ನೇ ಕಾದು ಕುಳಿತಿದ್ದನು. ಈಗ ಎಲ್ಲರೂ
ಮಾತು ಮುಗಿಸಿ ನಿದ್ರೆಯ ಜೊಂಪಿನಲ್ಲಿದ್ದರು. ಇದೇ ಸಮಯವೆಂದು ತಿಳಿದು
ಮಾರುತಿ ಮರದ ಮರೆಯಲ್ಲಿ ನಿಂತು ಸ್ಪಷ್ಟ ವಾಣಿಯಿಂದ ನುಡಿಯತೊಡಗಿದನು:
 
" ದಶರಥ ತನಯ, ಸರ್ವಗುಣನಿಧಿಯಾದ ರಾಮಚಂದ್ರನು ಹರನ
ಬಿಲ್ಲನ್ನು ಮುರಿದು ಜಾನಕಿಯನ್ನು ವರಿಸಿದನು. ತಂದೆಯ ಆದೇಶದಂತೆ
`ರಾಜ್ಯವನ್ನು ತೊರೆದು ಕಾಡಿಗೆ ನಡೆದನು. ಅವನ ಪ್ರಿಯ ಪತ್ನಿ ಸೀತೆ ಕೂಡ
'ಅವನ ಸಂಗಾತಿಯಾಗಿ ಬಂದಳು. ಅಲ್ಲಿ ದುರುಳ ರಾವಣನು ಆಕೆಯನ್ನು
ವಂಚನೆಯಿಂದ ಕದ್ದೊಯ್ದನು. ರಾಮಚಂದ್ರನ ಸೀತಾನ್ವೇಷಣೆಯಲ್ಲಿ
ಸಹಾಯಕನಾಗಿ-ದೂತನಾಗಿ ನಾನಿಲ್ಲಿಗೆ ಬಂದಿದ್ದೇನೆ.
 
ದೇವಿ ಜಾನಕಿ ! ಮಹಾಪ್ರಭು ರಾಮಚಂದ್ರನೂ ಮೈದುನ ಲಕ್ಷ್ಮಣನೂ
ದೂತನಾದ ನನ್ನ ಮುಖದಿಂದ ನಿನ್ನ ಕುಶಲವನ್ನು ಕೇಳಿದ್ದಾರೆ."
 
ಇದನ್ನು ಕೇಳಿ ಸೀತೆಗೆ ಅಚ್ಚರಿಯ ಮೇಲೆ ಅಚ್ಚರಿ. ಈ ರಾಕ್ಷಸರ
ಕೊಂಪೆಯಲ್ಲೂ ರಾಮಗುಣಗಾನ ಮಾಡುವ ಪುಣ್ಯ ಪುರುಷನು ಯಾರು ?
ಕೂದಲನ್ನು ಸಾವರಿಸಿ ಮುಖವನ್ನೆತ್ತಿ ಕಾತರ ದೃಷ್ಟಿಯಿಂದ ಸೀತೆ ಮರದೆಡೆಗೆ
ದಿಟ್ಟಿಸಿದಳು..