This page has been fully proofread once and needs a second look.

ಸಂಗ್ರಹರಾಮಾಯ ರಕ್ಕಸಿಯರು ಕೆಲವರು ರಾವ
 
ರಕ್ಕಸಿಯರು ಕೆಲವರು ರಾವಣ
ನ ಬಳಿ ದೂರು ಹೇಳಿದರು. ಕೆಲವರು
 
ತಿಂದುಬಿಡುವೆನೆಂದು ಮೇಲೆ ಎರಗತೊಡಗಿದರು.
 
6:2
 

 
ಬಳಿಯಲ್ಲಿಲೆ ತ್ರಿಜಟೆಯೆಂಬ ಸಾಧುಸ್ವಭಾವದ ರಾಕ್ಷಸಿಯೊಬ್ಬಳು ಇದನ್ನೆಲ್ಲ
ನೋಡುತ್ತಿದ್ದಳು. ಆಕೆಗೆ ಇವರ ವರ್ತನೆಯಿಂದ ಕೆಡುಕೆನಿಸಿತು. ಹಣ್ಣು -
ಮುದುಕಿಯಾದ ಆಕೆ ಮಲಗಿಕೊಂಡೇ ರಕ್ಕಸಿಯರಿಗೆ ಎಚ್ಚರಿಕೆಯ ಮಾತನ್ನಾ
 
ಡಿದಳು :
 
66
 
*

 
"
ರಾಕ್ಷಸಿಯರೆ ! ಮರ್ಯಾದೆಗೆಟ್ಟವರಂತೆ ಆಕೆಯಮೇಲೆ ಎರಗಬೇಡಿ.
ಈ ಸಾಧಿಧ್ವಿ ಸಾಮಾನ್ಯಳೆಂದು ತಿಳಿದೀದ್ದೀರಾ ?
ನನಗೊಂದು ಕನಸು ಬಿತ್ತು.
ಅದು ಈಕೆಯ ಭವಿಷ್ಯವನ್ನು ಹೇಳುತ್ತಿದೆ. ಲಂಕೆಯ ದುರಂತವನ್ನು ಸೂಚಿ-
ಸುತ್ತದೆ."
 

 
ರಕ್ಕಸಿಯರೆಲ್ಲ ಸೀತೆಯನ್ನು ಬಿಟ್ಟು ತ್ರಿಜಟೆಯನ್ನು ಮುತ್ತಿದರು. ಸ್ವಪ್ನದ
ಕಥೆಯನ್ನಾಲಿಸುವ ಲವಲವಿಕೆಯಿಂದ ಎಲ್ಲರಿಗೂ ಏನೋ ಕುತೂಹಲ, ಏನೋ
ಭಯ. ತ್ರಿಜಟೆ ರಾಮಚಂದ್ರನಿಗೆ ಕೈ ಮುಗಿದು ಹೇಳತೊಡಗಿದಳು :
 

 
" ಆನೆಯ ದಂತದಿಂದ ಕೆತ್ತಿದ ಬೆಳ್ಳನೆಯ ಪಲ್ಲಕ್ಕಿಯಲ್ಲಿ ರಾಮ-
ಲಕ್ಷಣರೂ ಸೀತೆಯೂ ಬರುತ್ತಿರುವುದನ್ನು ಕಂಡೆ. ಬಿಳಿ ಹೂಗಳನ್ನು ಮುಡಿದು
ಬೆಳ್ಳಿ ಬೆಟ್ಟದಲ್ಲಿ ಸೀತೆ ನಿಂತಿರುವಂತೆ ಕಂಡೆ. ನಾಲ್ಕು ದಾಡೆಯುಳ್ಳ ಬಿಳಿಯಾನೆ
ಯಲ್ಲಿ ರಾಮ-ಲಕ್ಷ್ಮಣರು ಕುಳಿತಿದ್ದರು. ಕತ್ತಿನಲ್ಲಿ ಬಿಳಿ ಹೂಗಳಮಾಲೆ,
ತೊಟ್ಟದ್ದು ಬಿಳಿಯ ಪಟ್ಟೆ. ಆಕಾಶದಲ್ಲಿ ಗಜೇಂದ್ರನಮೇಲೆ ಕುಳಿತಿದ್ದ ರಾಮನ

ಬಳಿಗೆ ಸೀತೆ ನಡೆದು ಬಂದಳು. ರಾಜಹಂಸದ ಬಳಿ ರಾಜಹಂಸಿ ಬರುವಂತೆ,
ಅನಂತರ ಆಕೆ ರಾಮಚಂದ್ರನ ತೊಡೆಯಮೇಲೆ ಕುಳಿತುಕೊಂಡಳು. ಆಕೆಯ
ಕೈಗಳು ಸೂರ್ಯ-ಚಂದ್ರನನ್ನು ನೇವರಿಸುತ್ತಿದ್ದವು. ಹೀಗೆ ನಾನು ಕನಸಿನಲ್ಲಿ
ಕಂಡೆ.
 

 
ಇನ್ನೊಂದೆಡೆ ರಾವಣನು ಪುಷ್ಪಕದಿಂದ ಕೆಳಗೆ ಬೀಳು- ತ್ತಿರುವುದನ್ನು
ಕಂಡೆ, ತಲೆಯಲ್ಲಿ ಕೂದಲುಗಳೇ ಇರಲಿಲ್ಲ. ಮೈಯಲ್ಲಿ ಕಪ್ಪು ಬಟ್ಟೆಗಳೇ
ಕಾಣಿಸುತ್ತಿದ್ದವು. ನಮ್ಮ ಲಂಕೇಶ್ವರ ಕತ್ತೆಗಳೆಳೆವ ರಥದಲ್ಲಿ ಕುಳಿತಿದ್ದನು.
ಕೆಂಪು ಮಾಲೆಗಳನ್ನು ಧರಿಸಿದ್ದನು. ತೆಂಕು ಬದಿಗೆ ಸಾಗಿದ ಆತ ಕೆಸರಿನ
ಕೊಳದಲ್ಲಿ ಮುಳುಗಿದಂತೆ ಕಂಡೆ. ರಾವಣನು ಹಂದಿಯಮೇಲೆ, ಕುಂಭ,
-
ಕರ್ಣನು ಒಂಟೆಯಮೇಲೆ, ಇಂದ್ರಜಿತ್ತು ನೆಗಳಿನಮೇಲೆ ಕುಳಿತಿರುವುದನ್ನು ಕಂಡೆ.