This page has not been fully proofread.

ಸಂಗ್ರಹರಾಮಾಯಣ
 
ರಕ್ಕಸಿಯರು ಕೆಲವರು ರಾವಣನ ಬಳಿ ದೂರು ಹೇಳಿದರು. ಕೆಲವರು
 
ತಿಂದುಬಿಡುವೆನೆಂದು ಮೇಲೆ ಎರಗತೊಡಗಿದರು.
 
6:2
 
ಬಳಿಯಲ್ಲಿ ತ್ರಿಜಟೆಯೆಂಬ ಸಾಧುಸ್ವಭಾವದ ರಾಕ್ಷಸಿಯೊಬ್ಬಳು ಇದನ್ನೆಲ್ಲ
ನೋಡುತ್ತಿದ್ದಳು. ಆಕೆಗೆ ಇವರ ವರ್ತನೆಯಿಂದ ಕೆಡುಕೆನಿಸಿತು. ಹಣ್ಣು -
ಮುದುಕಿಯಾದ ಆಕೆ ಮಲಗಿಕೊಂಡೇ ರಕ್ಕಸಿಯರಿಗೆ ಎಚ್ಚರಿಕೆಯ ಮಾತನ್ನಾ
 
ಡಿದಳು :
 
66
 
* ರಾಕ್ಷಸಿಯರೆ ! ಮರ್ಯಾದೆಗೆಟ್ಟವರಂತೆ ಆಕೆಯಮೇಲೆ ಎರಗಬೇಡಿ.
ಈ ಸಾಧಿ ಸಾಮಾನ್ಯಳೆಂದು ತಿಳಿದೀದ್ದೀರಾ ? ನನಗೊಂದು ಕನಸು ಬಿತ್ತು.
ಅದು ಈಕೆಯ ಭವಿಷ್ಯವನ್ನು ಹೇಳುತ್ತಿದೆ. ಲಂಕೆಯ ದುರಂತವನ್ನು ಸೂಚಿ-
ಸುತ್ತದೆ."
 
ರಕ್ಕಸಿಯರೆಲ್ಲ ಸೀತೆಯನ್ನು ಬಿಟ್ಟು ತ್ರಿಜಟೆಯನ್ನು ಮುತ್ತಿದರು. ಸ್ವಪ್ನದ
ಕಥೆಯನ್ನಾಲಿಸುವ ಲವಲವಿಕೆಯಿಂದ ಎಲ್ಲರಿಗೂ ಏನೋ ಕುತೂಹಲ, ಏನೋ
ಭಯ. ತ್ರಿಜಟೆ ರಾಮಚಂದ್ರನಿಗೆ ಕೈ ಮುಗಿದು ಹೇಳತೊಡಗಿದಳು :
 
" ಆನೆಯ ದಂತದಿಂದ ಕೆತ್ತಿದ ಬೆಳ್ಳನೆಯ ಪಲ್ಲಕ್ಕಿಯಲ್ಲಿ ರಾಮ-
ಲಕ್ಷಣರೂ ಸೀತೆಯೂ ಬರುತ್ತಿರುವುದನ್ನು ಕಂಡೆ. ಬಿಳಿ ಹೂಗಳನ್ನು ಮುಡಿದು
ಬೆಳ್ಳಿ ಬೆಟ್ಟದಲ್ಲಿ ಸೀತೆ ನಿಂತಿರುವಂತೆ ಕಂಡೆ. ನಾಲ್ಕು ದಾಡೆಯುಳ್ಳ ಬಿಳಿಯಾನೆ
ಯಲ್ಲಿ ರಾಮ-ಲಕ್ಷ್ಮಣರು ಕುಳಿತಿದ್ದರು. ಕತ್ತಿನಲ್ಲಿ ಬಿಳಿ ಹೂಗಳಮಾಲೆ,
ತೊಟ್ಟದ್ದು ಬಿಳಿಯ ಪಟ್ಟೆ. ಆಕಾಶದಲ್ಲಿ ಗಜೇಂದ್ರನಮೇಲೆ ಕುಳಿತಿದ್ದ ರಾಮನ
ಬಳಿಗೆ ಸೀತೆ ನಡೆದು ಬಂದಳು. ರಾಜಹಂಸದ ಬಳಿ ರಾಜಹಂಸಿ ಬರುವಂತೆ,
ಅನಂತರ ಆಕೆ ರಾಮಚಂದ್ರನ ತೊಡೆಯಮೇಲೆ ಕುಳಿತುಕೊಂಡಳು. ಆಕೆಯ
ಕೈಗಳು ಸೂರ್ಯ-ಚಂದ್ರನನ್ನು ನೇವರಿಸುತ್ತಿದ್ದವು. ಹೀಗೆ ನಾನು ಕನಸಿನಲ್ಲಿ
ಕಂಡೆ.
 
ಇನ್ನೊಂದೆಡೆ ರಾವಣನು ಪುಷ್ಪಕದಿಂದ ಕೆಳಗೆ ಬೀಳುತ್ತಿರುವುದನ್ನು
ಕಂಡೆ, ತಲೆಯಲ್ಲಿ ಕೂದಲುಗಳೇ ಇರಲಿಲ್ಲ. ಮೈಯಲ್ಲಿ ಕಪ್ಪು ಬಟ್ಟೆಗಳೇ
ಕಾಣಿಸುತ್ತಿದ್ದವು. ನಮ್ಮ ಲಂಕೇಶ್ವರ ಕತ್ತೆಗಳೆಳೆವ ರಥದಲ್ಲಿ ಕುಳಿತಿದ್ದನು.
ಕೆಂಪು ಮಾಲೆಗಳನ್ನು ಧರಿಸಿದ್ದನು. ತೆಂಕು ಬದಿಗೆ ಸಾಗಿದ ಆತ ಕೆಸರಿನ
ಕೊಳದಲ್ಲಿ ಮುಳುಗಿದಂತೆ ಕಂಡೆ. ರಾವಣನು ಹಂದಿಯಮೇಲೆ, ಕುಂಭ,
ಕರ್ಣನು ಒಂಟೆಯಮೇಲೆ, ಇಂದ್ರಜಿತ್ತು ನೆಗಳಿನಮೇಲೆ ಕುಳಿತಿರುವುದನ್ನು ಕಂಡೆ.