This page has not been fully proofread.

ದಿದ್ದೇನೆ. ಅದನ್ನು ಕನ್ನಡಿಸುವ ಮುದ್ದನ್ನುಣಿಸಿ ಮೈ-ಮನಗಳಲ್ಲಿ ಹುಮ್ಮಸ್ಸನ್ನು
ತುಂಬಿಕೊಂಡಿದ್ದೇನೆ.
 
ಇನ್ನು ನನ್ನ ಈ ಬರವಣಿಗೆ, ಹಿನ್ನೆಲೆಯಾದ ಸಂಸ್ಕೃತದ ಸಂಗ್ರಹ ರಾಮಾ-
ಯಣದ ಕುರಿತು ಎರಡುಮಾತು. ಅದನ್ನು ಬರೆದವರು ಕೇರಳದ ಕವಿ'
ನಾರಾಯಣಪಂಡಿತಾಚಾರ್ಯರು, ಸುಮಾರು ಹದಿಮೂರನೆಯ ಶತಮಾನ
 
ದಲ್ಲಿ ಬದುಕಿದ್ದವರು. ಅನಂದತೀರ್ಥರ ನೆಚ್ಚಿನ ಶಿಷ್ಯ ತ್ರಿವಿಕ್ರಮಪಂಡಿತರ
ಮಕ್ಕಳು. ಅವರಿಗೆ ಆಚಾರ ಮಧ್ಯರಲ್ಲಿ ಅಪಾರ ಭಕ್ತಿ. ಎಂತಲೇ ಆಚಾರರು
ಬರೆದ ರಾಮಚರಿತೆಯನ್ನು ಅನುಸರಿಸಿಯೇ ಈ ಗ್ರಂಥವನ್ನು ಬರೆದಿದ್ದಾರೆ.
ಆದರೆ ಒಂದು ಮಾತನ್ನು ನಾನಿಲ್ಲಿ ಸೂಚಿಸಬೇಕು. ಈ ಕೃತಿ ವಾಲ್ಮೀಕಿಯ
ರಾಮಾಯಣವನ್ನೇ ಅವಲಂಬಿಸಿಕೊಂಡಿದೆ. ಅದರ ಕಥಾಭಾಗಕ್ಕೂ ಇದಕ್ಕೂ
ಹೇಳಿಕೊಳ್ಳುವಂಥ ವ್ಯತ್ಯಾಸವೇನಿಲ್ಲ. ಇದ್ದರೆ ನಿರೂಪಣೆಯಲ್ಲಿ ವ್ಯ
ಅಷ್ಟೆ. ಅಲ್ಲಿನ ಕತೆಯೇ ಇಲ್ಲಿನ ಕತೆ
 
ಇಲ್ಲಿ ಒಂದು ವಿಶೇಷವಿದೆ. ರಾಮಾಯಣದಲ್ಲಿ ಅಸ್ಪಷ್ಟವಾದ ಕೆಲವು
ಮಾತುಗಳನ್ನು ಇವರು ಇದರಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಉದಾ: ಲಕ್ಷ್ಮಣ-
ಭರತರಲ್ಲಿ ಯಾರು ಅಣ್ಣ, ಯಾರು ತಮ್ಮ ಎನ್ನುವುದು ರಾಮಾಯಣದಲ್ಲಿ
ಅಸ್ಪಷ್ಟವಿದೆ. ಲಕ್ಷ್ಮನೇ ಅಣ್ಣ ಎನ್ನುವ ಸ್ಪಷ್ಟ ಮಾತು ಈ ಗ್ರಂಥದಿಂದ
ತಿಳಿದುಬರುತ್ತದೆ. ಇದಕ್ಕೆ ಅನೇಕ ಪುರಾವೆಗಳೂ ಇವೆ. ಅಂಥ ಅನೇಕ
ಸಂದೇಹಗಳು ಈ ಗ್ರಂಥದಲ್ಲಿ ನಿರ್ಣಯವಾಗಿವೆ.
ಹೀಗೆ ಈ ಸಂಸ್ಕೃತದ
'ಸಂಗ್ರಹ ರಾಮಾಯಣ' ಆಚಾರ್ ಮಧ್ವರು ಬರೆದ ರಾಮಚರಿತೆಗೂ ವಾಲ್ಮೀಕಿ
ಮುನಿಯ ರಾಮಾಯಣಕ್ಕೂ ಒಂದು ಸಂಯೋಜಕದಂತಿದೆ. ಅದರಿಂದ ನನ್ನ
ಅನುವಾದವನ್ನು ರಾಮಾಯಣದ ಸಂಗ್ರಹರೂಪವಾದ ಕನ್ನಡಾನುವಾದ
ಎಂದರೂ ಒಪ್ಪುವುದು.
 
ಇದು 'ಸಂಗ್ರಹ ರಾಮಾಯಣ'ದ ಅನುವಾದ ಎನ್ನುವುದಕ್ಕಿಂತಲೂ
ಅದನ್ನು ಆಧರಿಸಿ ಬರೆದ ಕೃತಿ ಎಂದಷ್ಟೇ ಹೇಳುವುದು ಚೆನ್ನು ಮೂಲದಲ್ಲಿ
ಸಂಸ್ಕೃತದಲ್ಲಿ ಮಾತ್ರವೇ ಎನ್ನಿಸಿದ ಬಣ್ಣನೆಗಳು ಬಂದಾಗ, ವಿಷಯ ಕತೆಯನ್ನು
ಮಾರಿ ಹರಿದಾಗ ನಾನು ಅದನ್ನು ಬಳಸದೆ ಬಿಟ್ಟಿದ್ದೇನೆ. ಅದರಲ್ಲೂ ಸೂಕ್ಷ