This page has not been fully proofread.

ಮಿಂಚಿನ ಬಳ್ಳಿ
 
ಆನೆಯ ತುಳಿತಕ್ಕೆ ಸಿಕ್ಕಿದ
 
ಆಡಿನ ಮರಿಯಂತೆ ರಾಮಚಂದ್ರನ ಬಾಣಗಳಿಂದ
ನೀನು ದುಃಖಪಡಲಿರುವೆ; ಪಶ್ಚಾತ್ತಾಪ ಪಡಲಿರುವೆ, ಒಬ್ಬ ಸಾದ್ವಿ ಹೆಂಗಸು
ಆಡಿದ ಮಾತು ಸುಳ್ಳಾಗುವದಿಲ್ಲವೆಂಬುದನ್ನು ನೆನಪಿಟ್ಟುಕೊ."
 
ch
 
ರಾವಣನಿಗೆ ಸಿಟ್ಟಿನಿಂದ ದಿಕ್ಕೇ ತೋಚದಂತಾಗಿ "ಬೆಳಗಿನ ಉಪಹಾರ
ನಿನ್ನ ಮಾಂಸದಿಂದಲೇ ನಡೆದೀತು. ಎಚ್ಚರಿಕೆ" ಎಂದು ಹೆದರಿಸತೊಡಗಿದನು.
ಆಗ ಮಾನಿನಿಯಾದ ಮಂಡೋದರಿ "ಕೆಟ್ಟ ಮಾತನ್ನಾಡದಿರು" ಎಂದು ಗಂಡ
ನನ್ನು ಸಂತೈಸಿದಳು. ಸೀತೆಯ ಮನಸ್ಸನ್ನು ಹೇಗಾದರೂ ಮಾಡಿ ಒಲಿಸಿ
ಕೊಳ್ಳುವಂತೆ ರಾಕ್ಷಸಿಯರಿಗೆ ಆಣತಿ ಮಾಡಿ ರಾವಣನು ಅಂತಃಪುರಕ್ಕೆ
 
ತೆರಳಿದನು.
 
ಜಟೆ, ಭೂರಿಜಟೆ ಮೊದಲಾದ ರಾಕ್ಷಸಿಯರು ಸೀತೆಯನ್ನು ಒಲಿಸ
 
ತೊಡಗಿದರು :
 
"ಸೀತೆ ! ಮೂರುಲೋಕದ ಐಸಿರಿಗೂ ರಾವಣನೇ ಒಡೆಯನು. ಆತನು
ಎರಡನೆಯ ಪ್ರಜಾಪತಿ ಎಂದರೂ ಸಲ್ಲುವುದು, ಪುಲಸ್ಕೃವಂಶದಲ್ಲಿ ಜನಿಸಿ-
ದವನು. ಶಾಸ್ತ್ರಗಳಲ್ಲಿ ಪಾರಂಗತ. ಯಾವುದಕ್ಕೆ ಕಡಿಮೆ ಆತನಲ್ಲಿ ?
ನಿರ್ಗುಣನಾದ ರಾಮನ ಗೋಜು ತೊರೆದು, ನಿನ್ನನ್ನು ಬಯಸಿಬಂದ ರಾವಣ
ನನ್ನು ಸೇರು."
 
" ರಾಮನು ಎಂಥವನೇ ಆಗಿರಲಿ. ಆತ ನನ್ನ ಸ್ವಾಮಿ. ಆತನ ಸುದ್ದಿ
ನಿಮಗೆ ಬೇಕಿಲ್ಲ. ನೀವೀಗ ಸಂತೈಸುವುದೂ ಅವಶ್ಯವಿಲ್ಲ. ಬಯಕೆಯಿದ್ದರೆ
ನಿಮ್ಮ ಬೆಳಗಿನ ಉಪಹಾರಕ್ಕೆ ನನ್ನನ್ನು ಬಳಸಿಕೊಳ್ಳಬಹುದು.
 
ಆಗ ವಿನತೆ, ವಿಕಟೆ, ಅಶ್ವಮುಖಿ, ಚಂಡೋದರಿ, ವಿಘಸೆ, ಅಯೋ
ಮುಖಿ, ಶೂರ್ಪಣಖಿ ಮೊದಲಾದ ರಕ್ಕಸಿಯರು ಸೀತೆಯಮೇಲೆ ಬೆದರಿಕೆಯ
ಸುರಿಮಳೆ ಗರೆದರು : " ನೀನು ರಾವಣನನ್ನು ವರಿಸದಿದ್ದರೆ ನಿನ್ನ ಮೈಯನ್ನು
ಸಿಗಿದು ತಿಂದೇವು. ಕಳ್ಳಿನ ಜತೆಗೆ ಮನುಷ್ಯ ಮಾಂಸ ಬೆರೆತಾಗ ರುಚಿಯಾಗಿರು
- ಇದೆ, ಎಚ್ಚರಿಕೆ."
 
ಕರುಣರಸವೆ ಮೈವೆತ್ತು ಬಂದಂತೆ ಸೀತೆ ರೋದಿಸತೊಡಗಿದಳು :
" ರಾಮಚಂದ್ರ ! ನನ್ನ ಸ್ವಾಮಿಯೆ, ನೀನೆಲ್ಲಿರುವೆ ? ನನ್ನ ಮೇಲೆ ದಯೆ
 
ಬಾರದೆ ? "