This page has been fully proofread once and needs a second look.

ಸಂಗ್ರಹರಾಮಾಯಣ
 
"ನೀನು ನಾರಾಯಣನ ಎದೆಯಲ್ಲಿ ನೆಲಸಿದವಳು ಎಂದು ನನಗೆ ಗೊತ್ತಿದೆ.
ಲಾವಣ್ಯದ ಬಳ್ಳಿಯಲ್ಲಿ ಅರಳಿದ ಹೂವು ನೀನು. ಕಾಮನು ತನ್ನ ಹೂಬಾಣ
ಗಳಿಂದಲೇ ನಿನ್ನ ಅಂಗಗಳನ್ನು ರಚಿಸಿರಬೇಕು. ನನ್ನ ಯೌವನದ ವನದಲ್ಲಿ
ನಿನ್ನ ಲಾವಣ್ಯಲತೆ ಚಿಗುರಬೇಕು ಎಂದು ನನ್ನ ಬಯಕೆ, ನನ್ನ ಲೋಕಾತಿ,
ಶಾಯಿ- ಯಾದ ಸಂಪತ್ತು-ವೈಭವ ನಿನಗೆ ಗೊತ್ತೇ ಇದೆ. ಇನ್ನೂ ರಾಮ- ನನ್ನೇ
ನೆನೆಯುತ್ತ ಕುಳಿತಿರುವುದರಲ್ಲಿ ಅರ್ಥವಿಲ್ಲ. ಅವನು ಇಲ್ಲಿಗೆ ಬರುವುದೂ
ಸಾಧ್ಯವಿಲ್ಲ. ನಿನ್ನನ್ನು ಕೊಂಡೊಯ್ಯುವುದೂ ಸಾಧ್ಯವಿಲ್ಲ. ಆ ಕಾಡಾಡಿಯ
ಚಿಂತೆಯನ್ನು ಬಿಟ್ಟುಬಿಡು. ಭುವನೇಶ್ವರನಾದ ರಾವಣನು ನಿನ್ನನ್ನು ಮೆಚ್ಚಿ
ಬಂದಿದ್ದಾನೆ. ಅದಕ್ಕಿಂತ ಮಿಗಿಲೇನು ? ನಾನು ನಿನ್ನ ದಾಸ, ಈ ಸಂಪತ್ತೆಲ್ಲ

ನಿನ್ನದೆ. ನೀನು ಬಯಸಿದರೆ ಜನಕನಿಗೂ ಅಪಾರ ಸಂಪತ್ತು ಕೊಟ್ಟು ಕರುಣಿಸ
ಬಲ್ಲೆ.
 
"}
 
C
 

 
ಸೀತೆ ಈ ನೀತಿಗೆಟ್ಟ ಮಾತಿನಿಂದ ಸಿಡಿಮಿಡಿಗೊಂಡಿದ್ದಳು. ಅವನೊಡನೆ
ಮಾತನಾಡುವುದು ಕೂಡ ಆಕೆಗೆ ಸರಿಯೆನಿಸಲಿಲ್ಲ. ಕಡೆಗೆ ಒಂದು ಹುಲ್ಲು
ಕಡ್ಡಿಯನ್ನು ಎದುರಿಟ್ಟು, ಅವನನ್ನು ಅಲಕ್ಷಿಸುವ ದನಿಯಲ್ಲಿ ಉತ್ತರಿಸಿದಳು :
 

 
"ನಾನು ರಾಮಚಂದ್ರನ ಪ್ರಿಯಪತ್ನಿ ಎಂಬುದು ನೆನಪಿರಲಿ. ಈ ಸಾಧ್
ವಿ ನಿನಗೆ ದೊರಕಲಾರಳು. ಬ್ರಹ್ಮವಿದ್ಯೆ ಅಯೋಗ್ಯನಿಗೆ ಒಲಿವುದುಂಟೆ ? ಋಷಿ
ಪುಂಗವರಾದ ಪುಲಸ್ತ್ಯರ ಕುಲದಲ್ಲಿ ಹುಟ್ಟಿಯೂ ನಿನಗೆ ಧರ್ಮದ ಅರಿವು
ಬಾರದೆ ಹೋಯಿತೆ ? ಪರನಾರಿಯರ ಮೇಲೆ ಕೈ ಮಾಡುವುದು ಹುಡುಗಾಟ
ವಲ್ಲ. ನೀನು ನಿನ್ನ ವೈಯಕ್ತಿಕ ಅಪರಾಧದಿಂದ ಜಗತ್ತಿಗೇ ಸಂಕಟವನ್ನು

ತಂದೊಡ್ಡುತ್ತಿರುವೆ.
 

 
ಇನ್ನಾದರೂ ಹಿತವಚನವನ್ನು ಕೇಳುವೆಯಾದರೆ, ನನಗೆ ನಿನ್ನ

ಮೇಲೇನೂ ಅಸೂಯೆಯಿಲ್ಲ. ರಾಮಚಂದ್ರನು ಕರುಣಾಳು. ಇನ್ನಾದರೂ
ನನ್ನನ್ನು ಆತನಿಗೊಪ್ಪಿಸಿ ಕ್ಷಮೆ ಬೇಡು. ಆತ ನಿನ್ನನ್ನು ಖಂಡಿತವಾಗಿಯೂ
ಕ್ಷಮಿಸುತ್ತಾನೆ. ಈಗಲೇ ನೀನು ನನ್ನ ಮಾತನ್ನು ಅರಿತುಕೊಂಡರೆ ಚೆನ್ನು,
ಇಲ್ಲದಿದ್ದರೆ ರಾಮ-ಲಕ್ಷ್ಮಣರ ಬಾಣಗಳಿಂದಲೇ ನೀನು ಪಾಠ ಕಲಿತುಕೊಳ್ಳ,
ಬೇಕಾಗುವುದು,
 

 
ನಿನ್ನ ಮಾತಿಗೆ ಜನಕನ ಮಗಳು ಎಂದೂ ಮರುಳಾಗಲಾರಳು, ಕಾಗೆಯ
ಹರಟೆಗೆ ರಾಜಹಂಸಿ ಚಿಂತಿಸುವುದಿಲ್ಲ. ಗರುಡನ ಕೈಗೆ ಸಿಕ್ಕಿದ ಹಾವಿನಂತೆ