2023-03-15 15:35:46 by ambuda-bot
This page has not been fully proofread.
ಮಿಂಚಿನಬಳ್ಳಿ
ಚಂದ್ರನ ಪ್ರಿಯಪತ್ನಿ ರಾಕ್ಷಸಿಯರ ನಡುವೆ ಕುಳಿತಿದ್ದಾಳೆ ! ಕಣ್ಣೀರಿಡುತ್ತಿರುವ
ಸೀತೆಯನ್ನು ಕಂಡು ಹನುಮಂತ ಚಿಂತಿಸತೊಡಗಿದನು :
೧೪೪
ರಾವಣನು
"ರಾಮಚಂದ್ರನು ಹೇಳಿದ ಲಕ್ಷಣವೆಲ್ಲ ಈಕೆಯಲ್ಲಿ ಕಾಣುತ್ತಿದೆ.
ನಿಶ್ಚಯವಾಗಿಯೂ ನನ್ನ ಪ್ರಭು ರಾಮದೇವನ ಅರ್ಧಾಂಗಿ
ಕದ್ದೊಯ್ಯುತ್ತಿರುವಾಗ ಅಂತರಿಕ್ಷದಲ್ಲಿ ನಾನು ಕಂಡ ರೂಪು ಇದೇ ಆಕೆ ನಮ್ಮೆಡೆಗೆ
ಚೆಲ್ಲಿದ ಮೇಲುದ ಇವಳ ಈ ಮೇಲುದವನ್ನೆ ಹೋಲುತ್ತಿದೆ. ಲೋಕನಾಯಕನ
ಪತ್ನಿ ಲೋಕಮಾತೆಯಾದ ಸೀತೆಗೆ ಈ ದುರ್ದೆಶೆ ಹೇಗೆ ಬಂತು ? ದೇವಿಗೆ
ದುಃಖವೆಲ್ಲಿಯದು ! ಇದೆಲ್ಲ ಲೋಕ ವಿಡಂಬನೆ. ಜಗತ್ರಭುವಿನ ಲೀಲಾನಾಟಕ.
ಮಾಯಾ ಮಯವಾದ ಪ್ರತಿಕೃತಿಯನ್ನು ಇಲ್ಲಿರಿಸಿ ತಾನು ಅಂತರ್ಹಿತಳಾಗಿ
ದ್ದಾಳೆ. ಅವರಾಡುವ ಲೀಲಾನಾಟಕದಲ್ಲಿ ನನ್ನ ಪಾತ್ರವನ್ನು ನಾನು
ನಿರ್ವಹಿಸಬೇಕು."
ಹನುಮಂತನ ಕಣ್ಣು ಸೀತೆಯ ಪಾದಾರವಿಂದದಲ್ಲಿ ನೆಟ್ಟಿತ್ತು. ಮನಸ್ಸು
ರಾಮಚಂದ್ರನ ಪಾದಾರವಿಂದವನ್ನು ನೆನೆಯುತ್ತಿತ್ತು.
ತ್ರಿಜಟೆಯ ಕನಸು
ಸೀತೆಯ ಸುತ್ತ ಕುಳಿತ ರಾಕ್ಷಸಿಯರು ಒಬ್ಬೊಬ್ಬರು ಒಂದೊಂದು ತೆರ.
ವಿಚಿತ್ರವಾದ ಮುಖಗಳು, ಅಳತೆ ಮಾರಿದ ಅಂಗಾಂಗಗಳು, ಸರ್ವಾಂಗ
ಸುಂದರಿಯ ಸುತ್ತ ಕುರೂಪದ ಸಾಮ್ರಾಜ್ಯ ತಾಂಡವವಾಡುತ್ತಿತ್ತು ! ಭಗ-
ವಂತನ ಸೃಷ್ಟಿ ಎಷ್ಟು ವಿಚಿತ್ರವಾಗಿದೆ !
ಇತ್ತ ನಿದ್ರಿಸಿದ್ದ ರಾವಣನಿಗೆ ಇರುಳಿನ ತಂಗಾಳಿಯ ತಣ್ಣಿನಿಂದ ಒಮ್ಮೆಲೆ
ಎಚ್ಚರಾಯಿತು; ಒಳಗೆ ಹುದುಗಿದ್ದ ಕಾಮಪಿಪಾಸೆಯೂ ಎಚ್ಚತ್ತಿತ್ತು. ಎದ್ದವನೆ
ಅಶೋಕವನದೆಡೆಗೆ ನಡೆದನು. ರಾವಣನ ಬರವನ್ನು ಕಂಡು ಸೀತೆಯ ಮೋರೆ
ಕಪ್ಪಿಟ್ಟಿತು. ಜುಗುಪ್ಪೆಯಿಂದ ಮೈ ಜುಮ್ಮೆಂದಿತು. ನಿಟ್ಟುಸಿರೊಂದನ್ನೆಳೆದು
ಇದ್ದ ಒಂದೇ ಬಟ್ಟೆಯಿಂದ ತನ್ನ ಮೈಯನ್ನು ಮುಚ್ಚಿಕೊಂಡಳು. ಕೈಗಳಿಂದ
ಎದೆಯನ್ನೂ ಮುಚ್ಚಿ ಮುದುಡಿಕೊಂಡಳು.
ಕಾಮಮುಗ್ಧನಾದ ರಾವಣನು ಆಕೆಯನ್ನು ಸಂತೈಸುವ ಧಾಟಿಯಲ್ಲಿ
ನುಡಿದನು :