This page has not been fully proofread.

ಸಂಗ್ರಹರಾಮಾಯಣ
 
ನನ್ನ ಎಲ್ಲ ಸಾಹಸಗಳೂ ನೀರಮೇಲಣ ಬುರುಗಿನಂತೆ ವ್ಯರ್ಥವಾದವು.
ಈಗೇನು ಮಾಡುವುದು ? ತಪ್ಪು ಹಾದಿ ತುಳಿದ ರಾವಣನನ್ನು ಇಲ್ಲಿ ಮುಗಿಸಿ
ಬಿಡಲೆ ? ಇಲ್ಲ, ಪಶುವಿನಂತೆ ಕಟ್ಟಿಕೊಂಡೊಯ್ದು ರಾಮನ ಪಾದಗಳಲ್ಲಿ
 
ಕೆಡವಲೆ ?
 
ಆದರೆ ಅಶೋಕವನವೊಂದು ನೋಡುವುದು ಬಾಕಿಯಿದೆ. ಅಲ್ಲಿ ಸೀತೆ
ಇರಲೂಬಹುದು. ನನ್ನ ಯತ್ನ ಸಫಲವಾಗಲೂ ಬಹುದು. ಅದನ್ನು ಶೋಧಿಸಿದ
ಮೇಲೆ ಮುಂದಿನ ವಿಚಾರ, ಜಗನ್ಮಾತಾಪಿತೃಗ
ಗಳಾದ ಸೀತಾದೇವಿಗೂ-ರಾಮ-
ಚಂದ್ರನಿಗೂ ಶರಣು, ಸರ್ವಾಂತರ್ಯಾಮಿಯಾದ ಮಹಾಪ್ರಭುವಿಗೆ ಶರಣು.
ಲೀಲಾನಾಟಕದ ಪಾತ್ರಧಾರಿಗೆ ಶರಣು."
 
ಹನಮಂತನು ಅಶೋಕವನವನ್ನು ಹೊಕ್ಕನು. ಹನ್ನೆರಡು ತಿಂಗಳೂ
ಹೂ-ಹಣ್ಣುಗಳಿಂದ ತೊನೆವ ಉದ್ಯಾನ ಕಣ್ಣಿಗೆ ಹಬ್ಬವಾಗಿತ್ತು. ಅರಳಿದ
ಅಸುಗೆಗಳಿಂದ ಕಾಡಿಗೆ ಕೆಂಪು ಬಳಿದಂತಿತ್ತು. ತ್ರಿಕೂಟದಿಂದ ಇಳಿದು ಬಂದ
ನದಿಯೊಂದು ಉದ್ಯಾನವನ್ನು ಬಳಸಿ ಹರಿದಿತ್ತು. ನಡುವೆ ಕಾಡಿಗೆ ಕಳಸ
ವಿಟ್ಟಂತೆ ಬಂಗಾರದ ಹೂಗಳನ್ನು ಹೊತ್ತ ಶಿಂಶುಪಾವೃಕ್ಷ (ಒಂದು ಜಾತಿಯ
ಅಶೋಕ) ನಿಂತಿತ್ತು. ಅದರ ಬುಡದಲ್ಲಿ ಒಂದು ಮುತ್ತಿನಂಥ ವಿಹಾರಮಂದಿರ.
 
ವಾತಾವರಣ ನಿಜವಾಗಿಯೂ ಚೆತೋಹಾರಿಯಾಗಿತ್ತು. ಮೈ-ಮನಗಳಿಗೆ
ತಂಪನ್ನೀವ ತಣ್ಣೆಳಲಿನ ಶಿಂಶುಪಾವೃಕ್ಷ; ಬಳಿಯಲ್ಲಿ ಕಲಕಲನಾದಿನಿಯಾದ
ನದಿ; ಅಮೃತದಂಥ ನೀರು. ಸೀತೆ ಇದ್ದರೆ ಇಲ್ಲಿ ಇರಬೇಕು ಎನ್ನಿಸಿತು
ಮಾರುತಿಗೆ. ಮೆಲ್ಲನೆ ಶಿಂಶುಪೆಯನ್ನೇರಿ ಎಲೆಗಳೆಡೆಯಲ್ಲಿ ಮರೆಯಾಗಿ
ಸುತ್ತಲೂ ದಿಟ್ಟಿಸಿದನು.
 
ವೃಕ್ಷಮೂಲದಲ್ಲಿ ಮಾಯಾ ಸೀತೆ ಕುಳಿತಿದ್ದಳು. ನಿತ್ಯ ನಿರ್ದುಃಖೆ-
ಯಾದವಳು ದುಃಖಿತೆಯಂತೆ. ನಿತ್ಯನಿರ್ಮಲೆಯಾದವಳು ಮಲಿನಳಂತೆ ಕುಳಿ
ತಿದ್ದಳು. ಕಮಲದ ಎಸಳಿನಂಥ ಕಣ್ಣು, ಹುಣ್ಣಿಮೆಯ ಚಂದ್ರನಂಥ ಮುಖ
ಕಾಂತಿ; ಒಪ್ಪವಿಟ್ಟ ಬಂಗಾರದಂಥ ಮೈಬಣ್ಣ, ಇಳಿದು ಬಂದು ತೊಡೆಯ ಮೇಲೆ
ಮಲಗಿರುವ ಕೇಶರಾಶಿ, ಸರ್ವಾಂಗ ಸುಂದರಿಯಾದ ಈಕೆ ಸೀತೆಯಲ್ಲದೆ
ಇನ್ನಾರು ?
 
ಜಗನ್ಮಾತೆ ಬರಿಯ ನೆಲದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದಾಳೆ !
ಮೈಗೆಲ್ಲ ಒಂದೇ ಬಟ್ಟೆ. ಕೆಲವೇ ಆಭರಣಗಳು. ರಾಕ್ಷಸಾರಿಯಾದ ರಾಮ-