This page has not been fully proofread.

ಸಂಗ್ರಹರಾಮಾಯಣ
 
ಒಂದು ಮನೆಯಲ್ಲಿ ಮಾತ್ರ ಹರಿಸ್ಮರಣೆ-ಹರಿಪೂಜೆ ನಡೆಯುತ್ತಿತ್ತು. ಅದೇ
ಮಹಾತ್ಮನಾದ ವಿಭೀಷಣನ ಮನೆ. ಅಂಧಕಾರದ ಸಾಮ್ರಾಜ್ಯದಲ್ಲಿ ಮಿನುಗು
ತಿರುವ ಸೊಡರು. ಎರಡನೆಯ ಮನೆ ಕುಂಭಕರ್ಣನದು.
 
ಪರ್ವತದಂತೆ
 
೪೧
 
ಬೋರಲುಬಿದ್ದು ನಿದ್ರಿಸುತ್ತಿದ್ದಾನೆ. ಇನ್ನೊಂದು ಮನೆಯಲ್ಲಿ ಮೂಗುಕತ್ತರಿಸಿ
ಕೊಂಡ ಶೂರ್ಪಣಖೆ ಬಿದ್ದು ಕೊಂಡಿದ್ದಾಳೆ. ಕುಡಿದ ಅಮಲು ಇನ್ನೂ ಇಳಿದಿರ
ಲಿಲ್ಲ. ಏನನ್ನೂ ಅಪಸ್ವರದಿಂದ ಹಾಡುತ್ತಿದ್ದಳು. ತಲೆಕೂದಲು ಚೆದರಿದೆ. ಉಟ್ಟ
ಬಟ್ಟೆ ಎಲ್ಲಿ ಯಾವಾಗ ಜಾರಿಬಿದ್ದಿತ್ತೋ ಯಾರಿಗೆ ಗೊತ್ತು. ಈ ಅವಲಕ್ಷಣದ
ಮೂರ್ತಿಯನ್ನು ನೋಡುವುದೂ ಅಮಂಗಳ ! ನಾಚುಗೆಗೇಡಿ ರಕ್ತಸರೊಡನೆ
ಕುಣಿಯುತ್ತಿದ್ದಾಳೆ ಬೇರೆ ! ಎಂಥ ಸಂಗೀತ ! ಏನು ನಾಟ್ಯ !
 
ರಾವಣನ ಮಕ್ಕಳಾದ ಇಂದ್ರಜಿತ್ತು ಮೊದಲಾದವರ ಮನೆಯನ್ನು
ಶೋಧಿಸಿಯಾಯಿತು. ಎಲ್ಲ ಸೀತೆಯ ಕುರುಹು ಕಾಣದು. ಕಣ್ಣು ಹಾಯಿಸಿ
ದಲ್ಲೆಲ್ಲ ರೂಪಗೇಡಿ ರಕ್ಕಸಿಯರ ಸಂಸಾರ, ರಾವಣನ ರಾಜಧಾನಿಯ ಸುಂದರಿ
ಯರಿಂದ ಜುಗುಪ್ಪಿತನಾದ ಮಾರುತಿ ಬಾನಿನೆಡೆಗೆ ದಿಟ್ಟಿಸಿದಾಗ ಪೂರ್ಣ
ಚಂದ್ರನು ನಡುನೆತ್ತಿಗೆ ಬಂದಿದ್ದನು. ಹಾಲಿನಂಥ ಬೆಳುದಿಂಗಳು ಲಂಕೆಯ
ಸೌಂದಯ್ಯವನ್ನು ಇಮ್ಮಡಿಸಿತ್ತು.
 
ಅಶೋಕವೃಕ್ಷದ ನೆಳಲಲ್ಲಿ
 
ನಗರದ ಮನೆಗಳನ್ನೆಲ್ಲ ಸೋಸಿ ಹುಡುಕಿಯಾಯಿತು. ಇನ್ನು ರಾವಣನ
ಅಂತಃಪುರದ ಸರದಿ. ತ್ರಿಲೋಕ ವಿಜಯಿಯಾದ ರಾವಣನ ಅಂತಃಪುರ !.
ಅದರ ಸೊಬಗನ್ನು ಕೇಳುವುದೇನು ! ಪ್ರಪಂಚದಲ್ಲಿನ ಬೆಲೆ ಬಾಳುವ ವಸ್ತು
ಗಳೆಲ್ಲ ರಾವಣನ ಅಂತಃಪುರದಲ್ಲಿವೆ. ಪ್ರಪಂಚದ ಸುಂದರಿಯರೆಲ್ಲ ರಾವಣನ
ತೋಳ್ ಸೆರೆಯಲ್ಲಿದ್ದಾರೆ !
 
ಅವನ ಶಯ್ಯಾಗಾರವೇನು ಸಾಮಾನ್ಯವೆ! ಮಣಿಗಳಿಂದಲೆ ಕೆತ್ತಿದ
ಕಂಬಗಳು. ಬಂಗಾರ ಹಾಸಿದ ಕರುಮಾಡ. ಭವ್ಯ ಭವನದ ನಡುವೆ ರಾವಣ
ಪವಡಿಸಿದ್ದಾನೆ. ಸುತ್ತಲೂ ಸಾವಿರಾರು ಸುಂದರಿಯರ ಪರಿವಾರ, ಸುರಾದೇವಿ
ಯಿಂದ ಮೈಮರೆತ ಸುಂದರಿಯರನ್ನು ನಿದ್ರಾದೇವಿ ಗಾಢವಾಗಿಯೇ ಅಪ್ಪಿ-
ಕೊಂಡಿದ್ದಳು. ವಿಲಾಸಮತ್ತನಾಗಿ ಮಧ್ಯದಲ್ಲಿ ಮಲಗಿದ್ದ ರಾಕ್ಷಸೇಂದ್ರನನ್ನು