This page has been fully proofread once and needs a second look.

ಮಿಂಚಿನಬಳ್ಳಿ
 
ಲಂಕೆಯ ಸೊಬಗನ್ನು ಕೇಳುವುದೇನು ? ಎರಡನೆಯ ಅಮರಾವತಿ,

ಕೋಟೆಗಳಿಂದ ಪ್ರಾಕಾರಗಳಿಂದ ಭದ್ರವಾದ ಲಂಕೆಯನ್ನು ಪ್ರವೇಶಿಸುವ ಅದಟು
ಯಾರಿಗಿದೆ ? ಈ ಕಡಲನ್ನು ದಾಟುವುದೇ ಅಶಕ್ಯವಾದ ಮಾತು. ದಾಟಿದರೂ
ಈ ನಗರವನ್ನು ಹೊಗುಕ್ಕುವುದು ಸಾಧಾರಣಕೆಲಸವಲ್ಲ. ಆದರೆ ರಾಮದೇವನ
ನಿಚ್ಚಳ ಭಕ್ತನಾದ ಹನುಮಂತನಿಗೆ ಇದೆಲ್ಲ ಒಂದು ಲೆಕ್ಕವೆ ? ಅವನಿಗೆ ದುಷ್ಕರ
ಎಂ
ವೆಂಬುದೇ ಇಲ್ಲ.
 
೧೪೧
 

 
ಹೊತ್ತು ಮುಳುಗುವುದರಲ್ಲಿತ್ತು. ರಾತ್ರಿಯಾದ ಮೇಲೆ ಊರನ್ನು

ಪ್ರವೇಶಿಸುವುದು ಎಂದು ನಿಶ್ಚಯಿಸಿದ ಹನುಮಂತ, ಬೆಕ್ಕಿನಂತೆ ಬಹು ಚಿಕ್ಕ ರೂಪ
ವನ್ನು ಧರಿಸಿಕೊಂಡ. ಯೋಗೇಶ್ವರನಾದ ಭಗವಂತನ ಪರಮಭಕ್ತನಿಗೆ ಇದೇನು
ದೊಡ್ಡದಲ್ಲ.
 

 
ಕ್ರಮೇಣ ಕತ್ತಲು ಕವಿಯಿತು. ಗೇಣುದ್ದದ ಹನುಮಂತ ಲಂಕೆಯೊಳಗೆ

ಪ್ರವೇಶಿಸಿದನು. *" ಯಾರು ನೀನು ಅಪ್ಪಣೆಯಿಲ್ಲದೆ ಊರೊಳಗೆ ಕಾಲಿಡು

ವವನು ? " ಎಂದು ಗರ್ಜಿಸುತ್ತ ಪುರದೇವತೆ ಅಡ್ಡವಾಗಿ ನಿಂತಳು. ಸ್ತ್ರೀವಧೆ
ಮಾಡುವುದು ಹನುಮಂತನಿಗೆ ಸರಿಯೆನಿಸಲಿಲ್ಲ. ಎಂತೆಲೆ ಆಕೆಯನ್ನು ಮೆಲ್ಲನೆ
ಎಡಗೈಯಿಂದ ಅದುಮಿಹಿಡಿದನು. ಪುರದೇವತೆಗೆ ಈ ಲಘುಪ್ರಹಾರದಿಂದ
ಬೆನ್ನಮೂಳೆಯೇ ಮುರಿದಂತೆನಿಸಿತು. ಆಕೆ ಗದ್ಗದಿತಳಾಗಿ ವಿನಂತಿಸಿಕೊಂಡಳು.
:
 
"
ಮಹಾನುಭಾವನೆ, ನಿನಗೆ ಸ್ವಾಗತ. ನಿನ್ನನ್ನು ನಾನು ಬಲ್ಲೆ. ಬ್ರಹ್ಮನು

ಹೇಳಿದ ಮಾತು ನನಗೆ ನೆನಪಿದೆ. ನಿನ್ನನ್ನು ಒಬ್ಬ ಕಸಿಪಿ ಸೋಲಿಸಿದಂದು

ಲಂಕೆಗೆ ವಿಪತ್ತು ಪ್ರಾಪ್ತವಾಯಿತೆಂದು ತಿಳಿ " ಎಂದು ನುಡಿದಿದ್ದನಲ್ಲವೆ ಆತ ?
ಹೆಣ್ಣು ಹೆಂಗಸು ಅರಿಯದೆಮಾಡಿದ ಅಪರಾಧವನ್ನು ಮನ್ನಿಸಿ ಬಿಡು. ನಿನ್ನ
ಕಾವ್ರ್ಯದಲ್ಲಿ ನಿನಗೆ ಜಯವಾಗಲಿ ನಿನ್ನ ಉದ್ದೇಶ ಫಲಿಸಲಿ. "
 
(6
 
Cಬಿ
 

 
ಆಕೆಯನ್ನು ಸಂತೈಸಿ, ಕುದ್ವಾರವೊಂದರಿಂದ ಮಾರುತಿಯು ಪಟ್ಟಣವನ್ನು
ಪ್ರವೇಶಿಸಿದನು. ಸೀತೆಗಾಗಿ ಮನೆಮನೆಗೆ ಅಲೆದನು. ಅಲ್ಲಿ ಎಚ್ಚರತಪ್ಪಿ ಬಿದ್ದಿರುವ
ರಾಕ್ಷಸರಲ್ಲದೆ ಇನ್ನೇನೂ ಕಾಣಿಸಲಿಲ್ಲ !
 

 
ಕೆಲವರು ಕುಡಿಯುತ್ತಿದ್ದಾರೆ. ಕೆಲವರು ಕುಡಿದು ಅಮಲೇರಿ ಬಿದ್ದಿದ್ದಾರೆ.
ಇನ್ನು ಕೆಲವರು ಮಡದಿಯರೊಡನೆ ಕಾಮಚೇಷ್ಟೆ ಮಾಡು ತ್ತಿದ್ದಾರೆ.
 

 
ಒಂದೆಡೆ ವ್ಯಭಿಚಾರಕ್ರಿಯೆ, ಹೋಮ, ಜಪ ನಡೆಯುತ್ತಿದೆ. ಎಲ್ಲಿ ನೋಡಿ
ದರಲ್ಲಿ ನಗರ ರಕ್ಷಕರು ಆಯುಧ ಧಾರಿಗಳಾಗಿ ತಿರುಗುತ್ತಿದ್ದಾರೆ.