This page has been fully proofread once and needs a second look.

ಸಂಗ್ರಹರಾಮಾಯಣ
 
"ನೀನೂ ಬದುಕಿದೆ. ದೇವತೆಗಳ ವರವನ್ನೂ ಬದುಕಿಸಿದೆ. ನಿನ್ನ ಶಕ್ತಿ

ಹಾಗೂ ಯುಕ್ತಿ ಅಪಾರವಾಗಿದೆ. ನೀನು ನಿಶ್ಚಯವಾಗಿ ಲಂಕೆಯನ್ನು ಸೇರಬಲ್ಲೆ.
ಸೀತೆಯನ್ನು ಕಾಣಬಲ್ಲೆ."
 
೧೯
 
ಅವಳಿಗ
 

 
ಆಕೆಯ ಹರಕೆಯ ಮಾತನ್ನು ಹೊತ್ತು ಹನುಮಂತನು ಮುಂದುವರಿ-

ದನು. ಆಕಾಶದಲ್ಲಿ ಹಾರುವ ಈ ಮಹಾದೇಹ ಸಿಂಹಿಕೆಯ ಕಣ್ಣಿಗೆ ಬಿತ್ತು.

ಆಕೆ ಲಂಕೆಯನ್ನು ಕಾಯುವವಳು. ಬ್ರಹ್ಮನ ವರ ಬಲದಿಂದ ಆಕೆಗೆ ಸಾವೂ
ತಟ್ಟದು. ನೆರಳು ಸಿಕ್ಕಿದರೆ ಸಾಕು; ಜನರನ್ನು ಸೆಳೆದುಬಿಡು- ತ್ತಿದ್ದಳಂತೆ ಆಕೆ.
ಅದರಿಂದಲೇ ಅವಳನ್ನು ಛಾಯಾಗ್ರಹ ಎಂದೂ ಕರೆಯುತ್ತಿದ್ದರು.
ಹನುಮಂತನನ್ನು ನುಂಗಿಬಿಡುವೆನೆಂದು ಬಾಯಿ ತೆರೆದು ನಿಂತಿದ್ದಳು. ಇಲ್ಲಿ
ಹನುಮಂತನು ಹಿಂದಿನದೇ ಉಪಾಯವನ್ನು ಹೂಡಿದನು. ಮೊದಲು ಮುಗಿಲು
ತುಂಬ ಬೆಳೆದು ನಿಂತನು. ಆಕೆಯೂ ಮುಗಿಲೆತ್ತರಕ್ಕೆ ಬಾಯಗಲಿಸಿದಾಗ ಚಿಕ್ಕ
ದಾಗಿ ಅವಳ ಹೊಟ್ಟೆಯನ್ನು ಪ್ರವೇಶಿಸಿ ಹೃದಯವನ್ನು ಭೇದಿಸಿದನು. ಸಿಂಹಿಕೆ
ಯನ್ನು ಕೊಂದು ಅವಳ ಕರುಳನ್ನೇ ಕಿತ್ತು ತಂದ ಹನುಮಂತನನ್ನು ಕಂಡು
ದೇವತೆಗಳು ಬೆರಗಾಗಿ ಕೊಂಡಾಡಿದರು :
 

 
"ಮಹಾ ಮಹಿಮನಾದ ಮಾರುತಿಯೇ ! ಎಲ್ಲ ದುಷ್ಟ ಶಕ್ತಿಗಳನ್ನೂ ನೀನು
ಸಂಹರಿಸಿರುವೆ. ಇನ್ನು ನಾವೆಲ್ಲ ಧೈರ್ಯದಿಂದ ಆಕಾಶದಲ್ಲಿ ತಿರುಗಾಡಬಹುದು.
ಇನ್ನು ಮುಂದೆ ನಮ್ಮೆಲ್ಲರ ಬಾಯಿಯೂ ನಿನ್ನನ್ನು ಕೊಂಡಾಡುತ್ತಿರುತ್ತದೆ."
 

 
ದೇವತೆಗಳು ಸಂತಸದಿಂದ ಹೂಮಳೆ ಸುರಿಸಿದರು. ಹನಮಂತನು ಕುಡಿ
ಗಣ್ ನೋಟದಿಂದ ಅವರನ್ನು ಕರುಣಿಸಿ ಮುಂದೆ ಸಾಗಿದನು. ಮುಗಿಲನ್ನೂ
ಕಡಲನ್ನೂ ಹಿಂದೆ ಹಾಕಿ ಮುಂದೆ ಸಾಗಿದನು. ಎದುರು- ಗಡೆ ಲಂಕೆಯ ರಕ್ಷೆಗೆ
ಕೋಟೆಯಂತಿರುವ ಲಂಬ ಪರ್ವತ ಕಾಣಿಸಿತು. ವೇಗದಿಂದ ಬಂದ ಹನು
ಮಂತನು ಗಿರಿ ಶಿಖರದಲ್ಲಿ ಕಾಲೂರಿದನು. ಈ ಸಂರಂಭಕ್ಕೆ ಹೆದರಿದ ಮೃಗ-
ಪಕ್ಷಿಗಳು ದಿಕ್ಕುಗೆಟ್ಟು ಸಿಕ್ಕಾಬಟ್ಟೆ ಓಡ- ತೊಡಗಿದವು. ತ್ರಿಕೂಟದ ಶಿಖರದಲ್ಲಿ
ನಿಂತ ಹನುಮಂತನ ಮೇಲೆ ಸುರರು ಹೂಮಳೆಗರೆದರು.
 

 
ನೂರು ಯೋಜನ ದೂರದ ಉತ್ಪತನದಿಂದಲೂ ಹನುಮಂತ ದಣಿಯ
ಲಿಲ್ಲ. ಬೆಳಗುವ ವಹ್ನಿ ಕತ್ತಲಲ್ಲಿಲೂ ಬೆಳಗುತ್ತಿರುತ್ತದೆ. ತ್ರಿಕೂಟದ ಶಿಖರದಲ್ಲಿ
ನಿಂತ ಹನುಮಂತ ಒಮ್ಮೆ ಲಂಕೆಯೆದೆಡೆಗೆ ಕಣ್ಣು ಹಾಯಿಸಿದನು.