This page has not been fully proofread.

ಮಿಂಚಿನ ಬಳ್ಳಿ
 
ಪುರುಷರೂಪದಿಂದ ಯಾಚಿಸುತ್ತಿರುವ ಮೈನಾಕನ ಮೈದಡವಿ ಹನು-
ಮಂತನು ಸಂತೈಸಿದನು:
 
"ಮಿತ್ರನಾದ ಮೈನಾಕನೆ! ದಣಿದವರಿಗೆ ಮಾತ್ರವೇ ವಿಶ್ರಾಂತಿಯ ಆವಶ್ಯ
ಕತೆ, ನನಗಂತೂ ದಣಿವೆಂಬುದೇ ಇಲ್ಲ. ನನ್ನ ಕಾವ್ಯದ ಅವಧಿಯೂ ಹೆಚ್ಚಿಲ್ಲ.
ಅದರಿಂದ ತ್ವರೆಯಿಂದ ಮುಂದುವರಿಯಬೇಕಾಗಿದೆ. ರಾಮಕಾವ್ಯವನ್ನು
ಪೂರೈಸಿದ ಹೊರತು ನನಗೆ ಯಾವ ಆತಿಥ್ಯವೂ ಬೇಕಿಲ್ಲ. ನಿನ್ನ ಸೌಜನ್ಯಕ್ಕೆ
ಕೃತಜ್ಞತೆಗಳು."
 
ಮುಗಿಲಿನಲ್ಲಿ ದೇವತೆಗಳು ಹರ್ಷೋದ್ಧಾರಗೈದರು. ನಿರಪೇಕ್ಷೆಯೂ ಸಾಮ
ರ್ಥ್ಯದ ಒಂದು ಲಕ್ಷಣ. ದೊಡ್ಡವರು ತಮ್ಮ ಸ್ವಂತಬಲದಿಂದಲೇ ಕಾರ್ಯವನ್ನು
ಸಾಧಿಸಿಕೊಳ್ಳುವರು; ಅವರು ಎಂದಿಗೂ ಇನ್ನೊಬ್ಬರ ಸಹಕಾರದ ಮೋರೆಯನ್ನು
ನೋಡಲಾರರು !
 
ಮೈನಾಕದ ಕೃತ್ಯದಿಂದ ಸಂತೋಷಗೊಂಡ ಇಂದ್ರನು "ರಾಮಸೇವಾ
ನಿರತನಾದ ನಿನಗೆ ಇನ್ನು ನನ್ನಿಂದ ಭಯವಿಲ್ಲ" ಎಂದು ಸಂತೈಸಿದನು.
 
ಹನುಮಂತನು ಮೊದಲಿಗಿಂತ ಎರಡುಪಟ್ಟು ವೇಗದಲ್ಲಿ ಹಾರತೊಡಗಿ-
ದನು. ಆಗ ದೇವತೆಗಳು ಸರಸೆಯೆಂಬ ನಾಗಸ್ತ್ರೀಯನ್ನು ಕರೆದು ನುಡಿದರು :
"ನೀನು ಹೋಗಿ ಮಾರುತಿಗೆ ಅಡ್ಡಿಯನ್ನೊಡ್ಡಬೇಕು. ನಾವೀಗ ಅವನ
ಸಾಮರ್ಥ್ಯವನ್ನು ಪರೀಕ್ಷಿಸಬೇಕಾಗಿದೆ. ನೀನು ಬಯಸಿದುದು ನಿನ್ನ ಬಾಯಲ್ಲಿ
ಬಂದು ಬೀಳಲಿ, ಹೋಗು ನಮ್ಮ ಕಾರ್ಯವನ್ನು ಸಾಧಿಸು."
 
ಸುರಸೆ ಮಾರುತಿಯ ಮಾರ್ಗಕ್ಕೆ ಅಡ್ಡವಾಗಿ ರಾಕ್ಷಸಿಯ ರೂಪು ತಾಳಿ
ಬಾಯಿ ತೆರೆದು ನಿಂತಳು. ಆಗ ಹನುಮಂತನು "ನಾನು ಮಾರುತಿ, ರಾಮ-
ಚಂದ್ರನ ಕಿಂಕರ; ನನಗೆ ದಾರಿ ಬಿಡು" ಎಂದು ಕೇಳಿಕೊಂಡನು. ಒಡನೆ
ಸುರಸೆ ನುಡಿದಳು ; " ನೀನು ಯಾರಾದರೆ ನನಗೇನು ? ಮೊದಲು ನನ್ನ
ಬಾಯಿಯೊಳಹೊಕ್ಕು ಜೀರ್ಣವಾಗು."
 
ಆಗ ಹನುಮಂತನು ಕೋಪಗೊಂಡು ಪರ್ವತಾಕಾರದ ರೂಪನ್ನು ತಾಳಿ
"ಈಗ ನನ್ನನ್ನು ಹೇಗೆ ತಿನ್ನುವೆ ?" ಎಂದು ಅಣಕಿಸಿದನು. ಅವನ ದೇಹಕ್ಕಿಂತ
ಎರಡುಪಟ್ಟು ದೊಡ್ಡದಾಗಿ ಬಾಯಗಲಿಸಿದಳು ಸುರಸೆ ! ತತ್ ಕ್ಷಣ ಹನುಮಂತ
ಹೆಬ್ಬೆರಳಿನಷ್ಟು ಚಿಕ್ಕದಾಗಿ ಆಕೆಯ ಬಾಯಿಯನ್ನು ಹೊಕ್ಕು ಹೊರಬಂದನು
ಅವನ ಪ್ರಭಾವವನ್ನು ಕಂಡ ಸುರಸೆ ಮೆಚ್ಚಿಗೆಯ ಮಾತನ್ನಾಡಿದಳು :