This page has not been fully proofread.

ಈ ಗ್ರಂಥದ ಕುರಿತು
 
ಎಂದು ಹೆದರಾಬಾದಿನ ತಿ ಜ ಇಂದು ಧಾರವಾಡದಲ್ಲಿ
ಸುಯೊಡೆದಿದೆ.
 
ಎರಡು ವರ್ಷಗಳ ಕೆಳಗೆ ಶ್ರೀ ಬರ್ಲಿಯವರನ್ನು ಹೈದರಾಬಾದಿನಲ್ಲಿ
ಭೆಟ್ಟಿಯಾದೆ. ಆಗ ಅವರು 'ಸಂಗ್ರಹ ರಾಮಾಯಣ'ವನ್ನು ಕನ್ನಡ ಜನಕ್ಕೆ
ಪರಿಚಯಿಸಿಕೊಡಬೇಕೆಂದು ಸೂಚಿಸಿದರು. ಅವರ ಸ್ನೇಹದ ಆದೇಶವನ್ನು
ಮೂರುವುದು ನನಗೆ ಅಸಾಧ್ಯವಾಯಿತು, ಸರಿ ಎಂದು ಒಪ್ಪಿಕೊಂಡೆ.
 
ಊರಿಗೆ ಮರಳಿದೆ, ಮತ್ತೆ ದಿನಗಳುರುಳಿದವು. ಜೀವನವೆಂದರೆ ಬೇಕಾದ
ಬೇಡವಾದ ಕೆಲಸಗಳ ಒಂದು ತುಮುಲವಿದ್ದಂತೆ, ಈ ತುಮುಲದ ಅಡೆತಡೆಗಳಲ್ಲಿ
ಬುರ್ಲಿಯವರ ಉಪಯುಕ್ತ ಸಲಹೆಯನ್ನು ಮರೆತಿದ್ದೆನೆಂದರೂ ತಪ್ಪಲ್ಲ. ಆಗ
ನಮ್ಮೂರಿನ ಗೆಳೆಯರೊಬ್ಬರು ನನ್ನನ್ನು ಎಚ್ಚರಿಸಿದರು. "ಬರೆಯ ಬಲ್ಲವರು
ಬರೆಯದಿರುವುದು ಸರಸ್ವತಿಯ ದ್ರೋಹ ಮಾಡಿದಂತೆ ! ಕತ್ತಿ ಹಿರಿದು ನಿಂತ
ಕ್ಷತ್ರಿಯ ಯುದ್ದಕ್ಕೆ ಅ೦ಜಬಾರದು. ಲೇಖನಿ ಹೊತ್ತು ತಿರುಗುವವರು ಬರೆಯ
ಲಾರೆ ಎನ್ನಬಾರದು. ಅಲ್ಲವೆ? ಸರಿ. ಬರೆಯತೊಡಗಿದೆ.
 
ಮುಂಬಯಿ ಪ್ರವಾಸ, ದಕ್ಷಿಣಭಾರತ ಪ್ರವಾಸಗಳಿಂದ ನಡುನಡುವೆ
ತಡೆದು ನಿಂತ ಬರವಣಿಗೆ ಕೂರ್ಮಗತಿಯಿಂದಲೇ ಸಾಗಿತು. ನನ್ನ ಇತ್ತೀಚಿನ
ದೈಹಿಕ ಅನಾರೋಗ್ಯದಿಂದಲಂತೂ ಅದು ಇನ್ನಷ್ಟು ಮೆಲುನಡೆಯನ್ನು ಹಿಡಿ
ಯಿತು. ಹೇಗೂ ಎರಡು ವರ್ಷಗಳ ನಂತರ ಈಗ ಹೈದರಾಬಾದಿನಲ್ಲಿ ಬಿತ್ತಿದ
ಬೀಜ ಧಾರವಾಡದಲ್ಲಿ ಚಿಗುರಿದಂತಾಯಿತು. ಅದನ್ನು ನೀರೆರೆದು ಚಿಗುರಿಸಿ
ದವರು ಬುರ್ಲಿಯವರು. ಅದರ ಪೂರ್ಣ ಶ್ರೇಯಸ್ಸು ಅವರದು.
 
ನನ್ನ ಮಟ್ಟಿಗೆ ಹೇಳುವುದಿದ್ದರೆ ಇದು ನನಗೆ ಅತ್ಯಂತ ಪ್ರಿಯವಾದ
ಕೆಲಸ, ಮೈ-ಮನಗಳು ವಿಷಣ್ಣವಾದಾಗ ರಾಮಚರಿತೆಯನ್ನು ಓದಿ ನಲಿ-