This page has not been fully proofread.

ಸುಂದರಕಾಂಡ
 
ಮಾಹೇಂದ್ರದಿಂದ ತ್ರಿಕೂಟಕ್ಕೆ
 
ಮಹೇಂದ್ರ ಪರ್ವತಶಿಖರದಲ್ಲಿ ಮಹೋನ್ನತನಾಗಿ ಬೆಳೆದು ನಿಂತ ಮಾರು-
ತಿಯು ಮತ್ತೊಮ್ಮೆ ರಾಮಚರಣಗಳಿಗೆ ವಂದಿಸಿದನು. ಕೆಂಪುಮೈಯ ಮಾರು-
ತಿಯನ್ನು ಕಂಡಾಗ ಲಂಕೆಯನ್ನು ಸುಟ್ಟುಬಿಡಲು ಭುಗಿಲೆನ್ನುವ ಅಗ್ನಿಜ್ವಾಲೆ
ಯಂತೆ ಕಾಣಿಸುತ್ತಿತ್ತು. ಸುತ್ತ ಸುಳಿವ ಮೋಡಗಳು ಈ ಬೆಂಕಿಯುಗುಳುವ
ಹೊಗೆಯೇನೊ !
 
ಇಂದ್ರಿಯಗಳನ್ನು ನಿಗ್ರಹಿಸಿ, ಆತ್ಮತೇಜಸ್ಸನ್ನು ಬೆಳಗಿಸಿ ಹಾರಲು ಸನ್ನದ್ಧ
ನಾಗಿ ನಿಂತ ಹನುಮಂತನ ವೀರವಾಣಿ ಕಪಿಗಳಿಗೆ ಮೈನಿವಿರೆಬ್ಬಿಸಿತು:
 
((
 
ರಾಮಚಂದ್ರನ ಬಾಣದಂತೆ ನಾನು ಲಂಕೆಗೆ ಹಾರಿ ಸೀತೆಯನ್ನು
ಹುಡುಕುವೆನು. ಒಂದು ವೇಳೆ ಸೀತೆ ದೊರಕದಿದ್ದರೆ ಲಂಕೆಯನ್ನು ಕಿತ್ತು
ತಂದೇನು; ರಾವಣನನ್ನು ಬಲಿಕೊಡುವ ಪಶುವಿನಂತೆ ಕಟ್ಟಿ ರಾಮಚರಣಗಳ
ಮುಂದೆ ತಂದು ನಿಲ್ಲಿಸಿಯೇನು. ಕಡಲನ್ನು ಬತ್ತಿಸಿಯಾದರೂ ಸರಿ, ಗಿರಿಪರ್ವತ
ಗಳನ್ನು ನೆಗಹಿಯಾದರೂ ಸರಿ, ದೇವದಾನವರೊಡನೆ ಹೋರಾಡಿಯಾದರೂ
ಸರಿಯೆ-ಸೀತೆಯನ್ನು ಕಂಡೇ ಬರುವೆನು, ವಾಯುವಿನಂತೆ ಮೂರುಲೋಕವ
ನೆಲ್ಲ ಸುತ್ತಾಡಿದರೂ ಸರಿ ಸೀತೆಯನ್ನು ಕಂಡು ಮಾತಾಡಿಸದೆ ಈ ಹನುಮಂತ
ಮರಳುವುದಿಲ್ಲ. ರಾಮಚರಣಗಳ ನವಕಿಂಕರನಾದ ಈ ಪವಮಾನತನಯನ
ನುಡಿ ಮೂರುಕಾಲಕ್ಕೂ ಸತ್ಯ. ನನ್ನ ಬಂಧುಗಳೆ, ನನ್ನ ಸ್ನೇಹಿತರೆ, ನಿಮ್ಮೆಲ್ಲ
ರನ್ನು ಬೀಳ್ಕೊಡುತ್ತಿದ್ದೇನೆ. ಸಫಲವಾಗಿ ಮರಳಿಬಂದು ನಿಮ್ಮನ್ನು ಕಾಣುವೆನು."
ಕಪಿಗಳು ಕಣ್ಣರಳಿಸಿ ಮುಗಿಲಕಡೆ ದಿಟ್ಟಿಸುತ್ತಿದ್ದರು. ಹನುಮಂತನು
ಮಹೇಂದ್ರ ಪರ್ವತವನ್ನೊಮ್ಮೆ ತುದಿಗಾಲಿನಿಂದ ಒತ್ತಿ ಆಕಾಶಕ್ಕೆ ಚಿಮ್ಮಿದನು.
ಪರ್ವತ ಮಾರುತನ ಭಾರವನ್ನು ತಡೆಯಲಾರದೆ ನಡುಗಿತು. ಕಲ್ಲುಗಳು ಒಡೆದು
ರುಳಿದವು. ವಿದ್ಯಾಧರರು-ತಪಸ್ವಿಗಳು ದಿಗಿಲುಗೊಂಡರು.
 
ಆಕಾಶದಲ್ಲಿ ಅಪ್ಸರೆಯರು ಹೂಗಳಿಂದಲೂ ನಯನಾಂಬುಜಗಳಿಂದಲೂ
ಹನುಮಂತನನ್ನು ಹರಸಿದರು. ದೇವತೆಗಳೂ-ಮುನಿಗಳೂ ಸಂತಸದಿಂದ