This page has been fully proofread once and needs a second look.

ಸಂಗ್ರಹರಾಮಾಯಣ
 
ಜಾಂಬವಂತನೂ ನುಡಿದನು. ಮತ್ತೆ ಕಪಿಗಳ ಮುಂದೆ ಅದೇ ಪ್ರಶ್ನೆ! ಮುಂದೇನು
ಮಾಡುವುದು ?
 

 
ಬೇಸರಗೊಂಡ ಅಂಗದನಂತೂ ಮತ್ತೆ ಉಪವಾಸದೆಡೆಗೆ ವಾಲತೊಡ
 
೧೩೫
 
ಗಿದನು:
 

 
"ಈ ಕಷ್ಟದಲ್ಲಿ ಯಾರು ನಮಗೆ ಆಸರೆ ? ಕಡಲನ್ನು ದಾಟುವ ಸಾಹಸಿ

ಯಾರು ? ರಾಮನ ಕಾರ್ಯವನ್ನು ಸಾಧಿಸುವ ಪುಣ್ಯಾತ್ಮ ಯಾರೂ ಇಲ್ಲವೆ ?
ಹಾಗಿದ್ದರೆ ನಮಗೆ ಉಪವಾಸವೊಂದೇ ಶರಣು."
 

 
ಆಗ ಜಾಂಬವಂತನ ಎಚ್ಚರದ ನುಡಿ ಸಿದ್ಧವಾಗಿತ್ತು:
 

 
"ನಿರಾಶನಾಗಬೇಡ ಅಂಗದ, ನಮ್ಮಲ್ಲಿ ಒಬ್ಬ ಮಹಾವೀರ ಈ ಕಾರ್ಯ
ವನ್ನು ಮಾಡಬಲ್ಲ." ಎಂದವನೇ ಹನುಮಂತನೆಡೆಗೆ ತಿರುಗಿ ನುಡಿದನು:

 
"ಮಹಾವೀರನೆ, ಏಕೆ ಮೌನವಾಗಿರುವೆ ? ಕಪಿಕುಲವೆಲ್ಲ ಭಯದಿಂದ ತತ್ತರಿ-
ಸಿದರೂ ನಿನಗೆ ಕರುಣೆ ತೋರದೆ ? ಪ್ರಾಣದೇವನ ಮಗನಲ್ಲವೆ ನೀನು ?
ಬಲದೇವತೆಯಲ್ಲವೇ ನೀನು ? ವೇಗದಲ್ಲಿ ಗರುಡ ಕೂಡ ನಿನಗೆ ಎಣೆಯಲ್ಲ.
ಳಿದವರ ಪಾಡೇನು ! ಎದ್ದೇಳು ಮಾರುತಿಯೇ ! ನಿನ್ನ ಬಂಧುಗಳನ್ನು ಉಳಿಸಿ
ಕಾಪಾಡುವ ಭಾರ ನಿನ್ನ ಮೇಲಿದೆ. ನಿನ್ನ ಪರಾಕ್ರಮವನ್ನು ನೀನು ಜಗತ್ತಿಗೆ
ತೋರಿಸಿ ಕೊಡಬೇಕು."
 

 
ಕಪಿಗಳಿಗೆಲ್ಲ ಉತ್ಸಾಹ ತುಂಬುವಂತೆ ಹನುಮಂತ ನಗುತ್ತಲೆ ನುಡಿದನು:

 
"ನೂರು ಯೋಜನ ದಾಟಿ ಬರುವದು ನನಗೊಂದು ಲೆಕ್ಕವೇ ಅಲ್ಲ.

ಸೂರ್ಯನ ಬಳಿ ಓದುತ್ತಿದ್ದಾಗ ಮೇರುವಿಗೆ ನೂರಾರು ಬಾರಿ ಸುತ್ತು ಬಂದವನು
ನಾನು. ರಾಮಚಂದ್ರನ ಅನುಗ್ರಹದಿಂದ ನನಗೆ ಈ ಕಡಲು ಒಂದು ಹೆಜ್ಜೆ
ದೂರವೂ ಅಲ್ಲ. ನೀವು ಇಲ್ಲಿ ನಿರೀಕ್ಷಿಸುತ್ತಿರಿ. ನಾನು ರಾಮಕಾರ್ಯವನ್ನು
ಪೂರೈಸಿಕೊಂಡು ಬರುವೆನು.?
 
"
 
ಕಪಿಗಳ ಜಯಕಾರ ಮುಗಿಲನ್ನು ಮುತ್ತಿತು. ಉದಯಾದ್ರಿಯನ್ನೇರಿದ

ಉದಯಭಾನುವಿನಂತೆ- ಮಹೇಂದ್ರ ಪರ್ವತವನ್ನೇರಿ ನಿಂತ ಹನುಮಂತನ
ಶೋಭೆ ಅವರ್ಣನೀಯವಾಗಿತ್ತು. ಹಾರುವ ಮುನ್ನ ಹನುಮಂತನು ಮನದಲ್ಲಿ
ಲೆ ರಾಮಚಂದ್ರನ ಚರಣಗಳಿಗೆ ವಂದಿಸಿದನು.