This page has been fully proofread once and needs a second look.

ಮಿಂಚಿನಬಳ್ಳಿ
 
ಚಿಗುರುತ್ತಿವೆ. ಮುಪ್ಪು ತಾನೇ ಮುದುಡಿಕೊಳ್ಳುತ್ತಿದೆ. ನಾನೀಗ ಸಂಪೂರ್ಣ
ಯುವಕನಾಗಿದ್ದೇನೆ. ನಾನೀಗ ನನ್ನ ಮಂದಿರವಾದ ಹಿಮಾಲಯಕ್ಕೆ ತೆರಳ
ಬೇಕು. ನಿಮ್ಮಲ್ಲಿ ಯಾರು ನೂರು ಯೋಜನ ದೂರ ಹಾರಬಲ್ಲರೋ ಅವರು
ಸೀತೆಯನ್ನು ಕಾಣಬಲ್ಲರು. ನಿಮಗೆ ಮಂಗಳ- ವಾಗಲಿ, ನಾನಿನ್ನು ಬರುತ್ತೇನೆ."

 
ಸಂಪಾತಿ ಹೊಸತಾಗಿ ಮೂಡಿದ ರೆಕ್ಕೆಗಳನ್ನು ನವಿಗಿಸುತ್ತಾ ಆಕಾಶ- ದಲ್ಲಿ
ಮಾಯವಾದ. ಕಪಿಗಳು ರಾಮ ಮಹಿಮೆಯ ಅದ್ಭುತವನ್ನು ಕಂಡು ಬೆರಗಾಗಿ
ಕೈ ಜೋಡಿಸಿದರು. ಎಲ್ಲರೂ ತೆಂಕಣಕಡಲಿನ ಬಳಿ- ಯಲ್ಲಿ ಬಂದು ನೆರೆದರು.
ಎದುರುಗಡೆ ಅಪಾರವಾದ ಜಲರಾಶಿ ! ಮುಂದೇನು ಮಾಡುವುದು ?
 
೧೩೪
 

 
"ಯಾರು ಎಷ್ಟು ದೂರ ಹಾರಬಲ್ಲರು ಎಂಬುದನ್ನು ಪ್ರತಿಯೊಬ್ಬನೂ

ನಿವೇದಿಸಬೇಕು" ಎಂದು ವೃದ್ದ ಜಾಂಬವಂತನ ಸೂಚನೆಯಂತೆ ಒಬ್ಬೊಬ್ಬರೂ
 
,
 
"ಹತ್ತು ಯೋಜನೆ ಹಾರಬಹುದು" ಎಂದ ಗಜ. ಗವಾಕ್ಷ ಇಪ್ಪತ್ತು

ಯೋಜನ ಹಾರಿದರೆ, ಶರಭ ಮೂವತ್ತು ಯೋಜನ ಹಾರಬಲ್ಲ. ಋಷಭ

ನಾಲ್ವತ್ತು ಯೋಜನ; ಗಂಧಮಾದನ ಐವತ್ತು ಯೋಜನ; ಮೈಂದ ವಿವಿದರು
ಕ್ರಮವಾಗಿ ಅರುವತ್ತು-ಎಪ್ಪತ್ತು ಯೋಜನಗಳ ವರೆಗೆ ಹಾರ- ಬಲ್ಲರು ಎಂದು
ತಿಳಿದುಬಂತು. ತಾರ "ಎಂಭತ್ತು ಯೋಜನಗಳ ವರೆಗೂ ಹಾರಬಲ್ಲೆ" ಎಂದ.
ಆಗ ಮುದಿ ಜಾಂಬವನೂ ತನ್ನ ಅಳವಿನ ಆಳ- ವನ್ನು ವಿವರಿಸಿದ :
 
ವಿರೋ
 

 
"ನೀವು ಹರೆಯದವರು ನನ್ನನ್ನು ಮುದಿಗೊಡ್ಡು ಎಂದು ಗಾಳಿ- ಗೊಡ್ಡು -
ವಿರೋ ಏನೋ ! ಆದರೂ ನಾನು ನನ್ನ ಕುರಿತು ಹೇಳಿಕೊಳ್ಳ- ಬೇಕು. ಹಿಂದೆ
ವಾಮನನು ತ್ರಿವಿಕ್ರಮನಾಗಿ ಭೂಮ್ಯಾಕಾಶಗಳನ್ನು ತುಳಿದು ನಿಂತಾಗ ಈ
ಆನಂದ ಸಂದೇಶವನ್ನು ಹೊತ್ತ ಹರಿಕಾರನಾಗಿ ನಾನು ಮೂರು ಲೋಕಗಳನ್ನೂ
ಸುತ್ತಾಡಿದ್ದೆ. ಆಗ ಮೇರುಶಿಖರ ನನ್ನ ಮಣಿಗಂಟಿಗೆ ತಾಗಿ ನನ್ನ ವೇಗ
ಕುಂಠಿತವಾಗಿದೆ. ನಾನೀಗ ಕೇವಲ ತೊಂಬತ್ತು ಯೋಜನ ದೂರ ಮಾತ್ರವೇ
ಹಾರಬಲ್ಲೆ."
 

 
ನೂರು ಯೋಜನ ಹಾರಿ ಲಂಕೆಯನ್ನು ಸೇರಬಹುದಾದರೂ ಮರಳಿ ಹಾರಿ
ಬರುವುದು ತನ್ನಿಂದ ಸಾಧ್ಯವಾಗಲಾರದು ಎನ್ನುವ ಭಾವವನ್ನು ಅಂಗದ ವ್ಯಕ್ತ
ಪಡಿಸಿದನು. ಸಂದೇಹದ ಪರಿಸ್ಥಿತಿಯಲ್ಲಿ ಹೋಗುವುದು ಚೆನ್ನವಲ್ಲವೆಂದು