This page has not been fully proofread.

೧೩
 
ಸಂಗ್ರಹರಾಮಾಯಣ
 
ರೆಕ್ಕೆಗಳು ಮಾತ್ರ ಬಿಸಿಲಿನ ಬೇಗೆಗೆ ಕರಕಿ ಹೋದುವು. ಪುಣ್ಯ ತೀರಿದ ಜೀವಿ
ಯಂತೆ ನಾನು ನೆಲಕ್ಕುರುಳಿದೆ. ಏಳು ದಿನಗಳ ನಂತರ ಹೇಗೋ ಪ್ರಜ್ಞೆ ಬಂತು.
ರೆಕ್ಕೆಯಿಲ್ಲದೆ ಬದುಕುವದೆಂತು ? ಆದರೆ ಒಬ್ಬ ಋಷಿಯ ಸಾಂತ್ವನದಿಂದ
ನಾನು ಇನ್ನೂ ಬದುಕಿ ಉಳಿದಂತಾಯಿತು. 'ನಿನ್ನಿಂದ ರಾಮಕಾರ ನೆರವೇರ
ಲಿದೆ. ನೀನು ಬದುಕಿರಬೇಕು.' ಎಂದು ಋಷಿವಾಣಿ ನನ್ನನ್ನು ಸಂತೈಸಿತು.
ಆ ಋಷಿ ನನ್ನ ಗೆಳೆಯನಾಗಿದ್ದ. ಆತನ ಹೆಸರು ನಿಶಾಕರ ಎಂದು. ಎಂತಲೇ
ಆತನ ಮಾತಿನಂತೆ ರಾಮದೂತರನ್ನು ನಿರೀಕ್ಷಿಸುತ್ತ ಇಲ್ಲಿ ಕುಳಿತಿದ್ದೇನೆ.
 
ದಶರಥನೆಂದರೆ ನನಗೆ ಪ್ರಾಣಕ್ಕಿಂತಲೂ ಮಿಗಿಲಾದ ಸ್ನೇಹಿತ. ಅವನ
ಮಕ್ಕಳು ನನಗೂ ಮಕ್ಕಳಂತೆ. ಅವನ ಸೊಸೆ ನನಗೂ ಸೊಸೆಯಾಗಿದ್ದಾಳೆ.
ಕಪಟಿಯಾದ ರಾವಣ ನನ್ನ ಸೊಸೆ ಜಾನಕಿಯನ್ನು ಕದ್ದೊಯ್ದನೆ ? ನನ್ನ
ಸೋದರ ಜಟಾಯುವನ್ನು ಕೊಂದನೆ ? ಅವನನ್ನು ಸದೆಬಡಿಯುವ ಶಕ್ತಿ
ನನ್ನಲ್ಲಿ ಇಲ್ಲವಾಯಿತಲ್ಲ ಎಂದು ಕೊರಗುತ್ತಿದ್ದೇನೆ.
 
ವಾನರ ಪುಂಗವರೆ ! ಹಿಂದಿನ ಘಟನೆ ಈಗ ನೆನಪಿಗೆ ಬರುತ್ತಿದೆ.
ಹಿಂದೊಮ್ಮೆ ನನ್ನ ಮಗ ಸುಪಾರ್ಶ್ವನೆಂಬವನು ನನಗೆ ಆಹಾರವನ್ನೊದಗಿಸಲು
ಆಕಾಶದಲ್ಲಿ ಹಾರಾಡುತ್ತಿದ್ದಾಗ ಬಲಾತ್ಕಾರವಾಗಿ ಒಬ್ಬ ಸ್ತ್ರೀಯನ್ನು ಕೊಂಡೊ
ಯ್ಯುತ್ತಿರುವ ರಾವಣನನ್ನು ಕಂಡಿದ್ದನಂತೆ. ಆಕೆ 'ರಾಮ, ರಾಮ' ಎಂದು
ಕೂಗುತ್ತಿದ್ದಳಂತೆ. ರಾಮಕಾರವನ್ನು ಮಾಡುವುದು ನನಗೂ ಸಂತಸದ
ಮಾತು. ನಾನು ನಿಮಗೆ ಒಂದು ಮಾತನ್ನು ಹೇಳಬಯಸುತ್ತೇನೆ.
 
ನಾನು ಜನ್ಮತಃ ದೂರದರ್ಶಿಯಾಗಿದ್ದೇನೆ. ಓ, ಅಲ್ಲಿ ದೂರದಲ್ಲಿ ಲಂಕೆ
ನನಗೆ ಕಾಣಿಸುತ್ತಿದೆ. ಅದು ಇಲ್ಲಿಂದ ನೂರು ಯೋಜನ ದೂರದಲ್ಲಿದೆ. ಅಲ್ಲಿ
ಒಂದೆಡೆ ರಾಕ್ಷಸಿಯರಿಂದ ಸುತ್ತುವರಿದು ಸೀತೆ ಕುಳಿತಿದ್ದಾಳೆ. ರಾಕ್ಷಸಿಯರು
ತಂದೀವ ಆಹಾರವನ್ನು ಆಕೆ ಮುಟ್ಟುವುದಿಲ್ಲ. ದಿನವೂ ಇಂದ್ರನು ತಂದೀವ
ಅಮೃತಾನ್ನವೇ ಆಕೆಯ ಆಹಾರ. "ಇದು ನನ್ನ ಸ್ವಾಮಿ ರಾಮಚಂದ್ರನಿಗೆ,
ಇದು ನನ್ನ ಮೈದುನ ಲಕ್ಷ್ಮಣನಿಗೆ" ಎಂದು ಎರಡು ಪಾಲುಗಳನ್ನು ಪ್ರತ್ಯೇಕ
ವಾಗಿ ತೆಗೆದಿರಿಸಿ ತಾನು ತಿನ್ನುತ್ತಾಳೆ !
 
ಓ ! ರಾಮನ ಮಹಿಮೆ ಎಷ್ಟು ಅಪಾರವಾಗಿದೆ. ಆತನ ಕತೆ ಕೇಳು-
ತಿದ್ದಂತೆ ನನ್ನ ಮೈಯಲ್ಲಿ ತಾರುಣ್ಯ ಮೂಡುತ್ತಿದೆ. ಸುಟ್ಟ ರೆಕ್ಕೆಗಳು ಮತ್ತೆ