This page has been fully proofread once and needs a second look.

ಮಿಂಚಿನಬಳ್ಳಿ
 
ಜಟಾಯುವಿನ ಸಾವಿನ ವಾರ್ತೆಯನ್ನು ಕೇಳಿ ಸಂಪಾತಿಗೆ ಸಿಡಿಲೆರಗಿ

ದಂತಾಯಿತು. ಸಂಪಾತಿ ಜಟಾಯುವಿನ ಒಡಹುಟ್ಟಿದ ಅಣ್ಣ, ತಮ್ಮನ

ಸಾವಿನ ವಾರ್ತೆ ಮುದಿಜೀವವನ್ನು ಮತ್ತಷ್ಟು ಜರ್ಜರಗೊಳಿಸಿತು. ದುಃಖದ
ದನಿಯಿಂದಲೇ ಆತ ಕಪಿಗಳನ್ನು ಪ್ರಶ್ನಿಸಿದ:
 

 
"ನನ್ನ ಪ್ರಾಣಸಮನಾದ ಸೋದರ, ನನ್ನ ಪ್ರೀತಿಯ ಜಟಾಯು ರಾವಣ

ನಿಂದ ಹತನಾದನೆ ? ಇದು ನಿಮಗೆ ಹೇಗೆ ತಿಳಿಯಿತು ? ಯಾರು ನೀವು ?

ಇಲ್ಲಿ ಉಪವಾಸ ಕುಳಿತಿರುವುದಾದರೂ ಏತಕ್ಕೆ ?"
 

 
"ಧರ್ಮಾತ್ಮನಾದ ಪಕ್ಷಿರಾಜನೆ ! ರಾಮಚಂದ್ರನ ಮಡದಿ ಸೀತೆಯನ್ನು

ರಾವಣನು ಅಪಹರಿಸಿದನು. ಅದನ್ನು ಕಂಡ ಜಟಾಯು ನಡುದಾರಿಯಲ್ಲಿ
ಯಲ್ಲಿ ರಾವಣನನ್ನು ತಡೆದು ನಿಲ್ಲಿಸಿದನು. ಕಪಟಿಯಾದ ರಾವಣ ಅವನನ್ನು ಕೊಂದು
ಬಿಟ್ಟನು. ನಂತರ ರಾಮಚಂದ್ರ ಆತನ ಅಂತ್ಯ- ಸಂಸ್ಕಾರಗಳನ್ನು ಪೂರಯಿಸಿದನು.
ಮುಂದೆ ರಾಮಚಂದ್ರನಿಗೂ ಸುಗ್ರೀವನಿಗೂ ಗೆಳೆತನವಾಯಿತು. ವಾಲಿಯ
ವಧೆಯೂ ನಡೆಯಿತು. ಕಪಿರಾಜನ ನಿರ್ದೇಶದಿಂದ ನಾವು ಸೀತೆಯನ್ನು
 
ಹುಡುಕಲು ಹೊರಟೆವು. ನಮಗೆ ಕೊಟ್ಟ ಅವಧಿ ತೀರುತ್ತಿದೆ. ಸೀತೆಯನ್ನು
ಹುಡುಕುವುದು ನಮ್ಮಿಂದಾಗಲಿಲ್ಲ. ಮುಂದೇನು ಮಾಡುವುದು ? ಉಪವಾಸ
ವಲ್ಲದೆ ಬೇರೆ ಉಪಾಯವೇ ನಮಗೆ ಉಳಿದಿಲ್ಲ.
 

 
ಪಕ್ಷಿರಾಜನೆ, ನಿನ್ನ ರೆಕ್ಕೆಗಳೇಕೆ ಕಾಣಿಸುತ್ತಿಲ್ಲ ? ನೀನು ಇಲ್ಲಿ ಬಿದ್ದಿ- ರಲು
ಕಾರಣವೇನು ? ಸೀತೆಯ ಕುರಿತು ನಿನಗೇನಾದರೂ ಗೊತ್ತಿದೆಯೆ ?"
 

 
ಕಪಿಗಳಿಂದ ವಿವರಗಳನ್ನು ತಿಳಿದುಕೊಂಡ ಸಂಪಾತಿಯು ತಮ್ಮನಿಗೆ

ತರ್ಪಣವಿತ್ತು ಬಂದು, ತನ್ನ ಕಥೆಯನ್ನರುಹಿದನು:
 

 
"ನಾನು ಮತ್ತು ಜಟಾಯು ಅರುಣನ ಮಕ್ಕಳು. ಯೌವನದಲ್ಲಿ ನಾವು

ಒಂದು ಪಣ ಹೂಡಿದೆವು. ಯಾರು ಹೆಚ್ಚು ವೇಗವಾಗಿ ಓಡಬಲ್ಲರು ಎಂದು
ಪರೀಕ್ಷಿಸುವುದೇ ನಮ್ಮ ಪಣದ ಉದ್ದೇಶವಾಗಿತ್ತು. ನಾವು ವೇಗವಾಗಿ
ಮೇಲೇರಿದೆವು; ಎಲ್ಲ ಪಕ್ಷಿಗಳನ್ನೂ ಹಿಂದೆ ಹಾಕಿ ಮೇಲೇರಿ- ದೆವು. ಉದಿಸು-
ತ್ತಿರುವ ಸೂರ್ಯನೆಡೆಗೆ ಹಾರಿದೆವು. ಹೊತ್ತು ನೆತ್ತಿಗೇರಿತ್ತು. ಬಿಸಿಲು ಅಸಹ-
ನೀಯವಾಗಿತ್ತು. ನಾವು ಬಳಲಿದೆವು. ನನ್ನ ತಮ್ಮನಂತೂ ಸಂಪೂರ್ಣ
ಸೋತಿದ್ದ. ಆಗ ನನ್ನ ರೆಕ್ಕೆಗಳ ನೆಳಲಿನಲ್ಲಿ ಆತನನ್ನು ನಿಲ್ಲಿಸಿಕೊಂಡೆ. ನನ್ನ