This page has not been fully proofread.

ಮಿಂಚಿನಬಳ್ಳಿ
 
ಜಟಾಯುವಿನ ಸಾವಿನ ವಾರ್ತೆಯನ್ನು ಕೇಳಿ ಸಂಪಾತಿಗೆ ಸಿಡಿಲೆರಗಿ
ದಂತಾಯಿತು. ಸಂಪಾತಿ ಜಟಾಯುವಿನ ಒಡಹುಟ್ಟಿದ ಅಣ್ಣ, ತಮ್ಮನ
ಸಾವಿನ ವಾರ್ತೆ ಮುದಿಜೀವವನ್ನು ಮತ್ತಷ್ಟು ಜರ್ಜರಗೊಳಿಸಿತು. ದುಃಖದ
ದನಿಯಿಂದಲೇ ಆತ ಕಪಿಗಳನ್ನು ಪ್ರಶ್ನಿಸಿದ:
 
"ನನ್ನ ಪ್ರಾಣಸಮನಾದ ಸೋದರ, ನನ್ನ ಪ್ರೀತಿಯ ಜಟಾಯು ರಾವಣ
ನಿಂದ ಹತನಾದನೆ ? ಇದು ನಿಮಗೆ ಹೇಗೆ ತಿಳಿಯಿತು ? ಯಾರು ನೀವು ?
ಇಲ್ಲಿ ಉಪವಾಸ ಕುಳಿತಿರುವುದಾದರೂ ಏತಕ್ಕೆ ?"
 
"ಧರ್ಮಾತ್ಮನಾದ ಪಕ್ಷಿರಾಜನೆ ! ರಾಮಚಂದ್ರನ ಮಡದಿ ಸೀತೆಯನ್ನು
ರಾವಣನು ಅಪಹರಿಸಿದನು. ಅದನ್ನು ಕಂಡ ಜಟಾಯು ನಡುದಾರಿಯಲ್ಲಿ
ರಾವಣನನ್ನು ತಡೆದು ನಿಲ್ಲಿಸಿದನು. ಕಪಟಿಯಾದ ರಾವಣ ಅವನನ್ನು ಕೊಂದು
ಬಿಟ್ಟನು. ನಂತರ ರಾಮಚಂದ್ರ ಆತನ ಅಂತ್ಯಸಂಸ್ಕಾರಗಳನ್ನು ಪೂರಯಿಸಿದನು.
ಮುಂದೆ ರಾಮಚಂದ್ರನಿಗೂ ಸುಗ್ರೀವನಿಗೂ ಗೆಳೆತನವಾಯಿತು. ವಾಲಿಯ
ವಧೆಯೂ ನಡೆಯಿತು. ಕಪಿರಾಜನ ನಿರ್ದೇಶದಿಂದ ನಾವು ಸೀತೆಯನ್ನು
 
ಹುಡುಕಲು ಹೊರಟೆವು. ನಮಗೆ ಕೊಟ್ಟ ಅವಧಿ ತೀರುತ್ತಿದೆ. ಸೀತೆಯನ್ನು
ಹುಡುಕುವುದು ನಮ್ಮಿಂದಾಗಲಿಲ್ಲ. ಮುಂದೇನು ಮಾಡುವುದು ? ಉಪವಾಸ
ವಲ್ಲದೆ ಬೇರೆ ಉಪಾಯವೇ ನಮಗೆ ಉಳಿದಿಲ್ಲ.
 
ಪಕ್ಷಿರಾಜನೆ, ನಿನ್ನ ರೆಕ್ಕೆಗಳೇಕೆ ಕಾಣಿಸುತ್ತಿಲ್ಲ ? ನೀನು ಇಲ್ಲಿ ಬಿದ್ದಿರಲು
ಕಾರಣವೇನು ? ಸೀತೆಯ ಕುರಿತು ನಿನಗೇನಾದರೂ ಗೊತ್ತಿದೆಯೆ ?"
 
ಕಪಿಗಳಿಂದ ವಿವರಗಳನ್ನು ತಿಳಿದುಕೊಂಡ ಸಂಪಾತಿಯು ತಮ್ಮನಿಗೆ
ತರ್ಪಣವಿತ್ತು ಬಂದು, ತನ್ನ ಕಥೆಯನ್ನರುಹಿದನು:
 
"ನಾನು ಮತ್ತು ಜಟಾಯು ಅರುಣನ ಮಕ್ಕಳು. ಯೌವನದಲ್ಲಿ ನಾವು
ಒಂದು ಪಣ ಹೂಡಿದೆವು. ಯಾರು ಹೆಚ್ಚು ವೇಗವಾಗಿ ಓಡಬಲ್ಲರು ಎಂದು
ಪರೀಕ್ಷಿಸುವುದೇ ನಮ್ಮ ಪಣದ ಉದ್ದೇಶವಾಗಿತ್ತು. ನಾವು ವೇಗವಾಗಿ
ಮೇಲೇರಿದೆವು; ಎಲ್ಲ ಪಕ್ಷಿಗಳನ್ನೂ ಹಿಂದೆ ಹಾಕಿ ಮೇಲೇರಿದೆವು. ಉದಿಸು-
ತಿರುವ ಸೂರ್ಯನೆಡೆಗೆ ಹಾರಿದೆವು. ಹೊತ್ತು ನೆತ್ತಿಗೇರಿತ್ತು. ಬಿಸಿಲು ಅಸಹ-
ನೀಯವಾಗಿತ್ತು. ನಾವು ಬಳಲಿದೆವು. ನನ್ನ ತಮ್ಮನಂತೂ ಸಂಪೂರ್ಣ
ಸೋತಿದ್ದ. ಆಗ ನನ್ನ ರೆಕ್ಕೆಗಳ ನೆಳಲಿನಲ್ಲಿ ಆತನನ್ನು ನಿಲ್ಲಿಸಿಕೊಂಡೆ. ನನ್ನ