This page has been fully proofread once and needs a second look.

ಸಂಗ್ರಹರಾಮಾಯಣ
 
ಅಂಗದನ ಮಾತನ್ನು ಕೇಳಿದ ಕಪಿಗಳನೇಕರು ಗೋಳೋ ಎಂದು ಅತ್ತು
ಬಿಟ್ಟರು. ಎಲ್ಲರೂ ಅವನ ಜತೆಗೆ ನಿರಶನ ವ್ರತವನ್ನು ಕೈಗೊಳ್ಳು- ವುದೆಂದು
ನಿಶ್ಚಯಿಸಿದರು. ಉಪವಾಸ ಬಿದ್ದು ಸಾಯ ಹೊರಟ ಕಪಿ- ಗಳನ್ನು ಕಂಡು
ಸಂತೋಷಗೊಂಡ ಪ್ರಾಣಿಯೊಂದು ಅಲ್ಲಿತ್ತು. ಅದೇ ಪಕ್ಷಿರಾಜನಾದ ಸಂಪಾತಿ,
ರೆಕ್ಕೆಗಳನ್ನು ಕಳಕೊಂಡು ಹಾರಲಾರದೆ ಬಿದ್ದು ಕೊಂಡಿದ್ದ ಸಂಪಾತಿಗೆ ಎಲ್ಲಿಲ್ಲದ
ಹಸಿವಾಗಿತ್ತು. ಬಳಿಯಲ್ಲಿ ಈ ಕಪಿಗಳನ್ನು ಕಂಡಮೇಲಂತೂ ಎಲ್ಲಿಲ್ಲದ
ಆನಂದವಾಯಿತು.
 

 
ಇತ್ತ ಕಪಿಗಳು ರಾಮಚಂದ್ರನ ಚರಿತೆಯನ್ನು ಹಾಡತೊಡಗಿದರು. ಶೀಲ
ಭ್ರಷ್ಟನಾದ ಅಜಾಮಿಲನಿಗೂ ಮೋಕ್ಷವನ್ನಿತ್ತು ಕರುಣಿಸಿದ ನಾರಾಯಣನನ್ನು
 
ಕೊಂಡಾಡತೊಡಗಿದರು :
 
೧೩೧
 
ಜನಕನ
 

 
"ನಾರಾಯಣನು ರಘುವಂಶದಲ್ಲಿ ರಾಮನಾಗಿ ಜನಿಸಿದನು. ವಿಶ್ವಾ-

ಮಿತ್ರನ ಯಜ್ಞಕ್ಕೆ ಕಾವಲಾಗಿ ದುಷ್ಟ ಶಕ್ತಿಗಳನ್ನು ಸಂಹರಿಸಿದನು.
ಮನೆ ಯಲ್ಲಿ ದೇವಿ ಸೀತೆಯನ್ನು ಸಂತಸಗೊಳಿಸಿದನು. ಕೈಕೇಯಿಯ ಒಂದು

ಮಾತಿಗೆ ರಾಜ್ಯವನ್ನು ತೊರೆದು ಕಾಡಿಗೆ ತೆರಳಿದನು. ಅಲ್ಲಿ ಹದಿನಾಲ್ಕು ಸಾವಿರ
ರಾಕ್ಷಸರನ್ನು ಸಂಹರಿಸಿದನು. ಒಮ್ಮೆ ನಿರ್ಜನವಾದ ಜನಸ್ಥಾನ- ದಲ್ಲಿ ಮೋಹಿತ
ನಾದ ರಾವಣ ರಾಮಚಂದ್ರನ ಮಡದಿ ಸೀತೆಯನ್ನು ಕದ್ದೊಯ್ದನು. ಮಣಿ
ಮಾಲೆಯನ್ನು ಕಾಗೆ ಗೂಬೆಗಳು ಕೊಂಡೊಯ್ಯು- ವಂತೆ ! ದಾರಿಯಲ್ಲಿ ಮಹಾತ್ಮ
ನಾದ ಜಟಾಯು ಅವನನ್ನು ಎದುರಿಸಿ- ದನು. ಆ ಮಹಾನುಭಾವನಾದ ಪಕ್ಷಿ
ರಾಜ ರಾಮಚಂದ್ರನಿಗಾಗಿ ದೇಹ- ವನ್ನು ತೊರೆದು ಯಶಃಶರೀರನಾದ. ರಾಮನಿ
ಗಾಗಿ ಜೀವನವನ್ನು ಧಾರೆಯೆರೆದ ಪಕ್ಷಿಯ ಬಾಳು ಧನ್ಯವಾಯಿತು. ನಮಗೆ
ರಾಮಸೇವೆಯ ಭಾಗ್ಯ ದೊರಕದಾಯಿತು. ವಿಫಲರಾಗಿ ಜೀವನವನ್ನು
ತೊರೆಯು- ತ್ತಿದ್ದೇನೆವೆ !
 

 
ಮಂಥರೆಯ ಮಂತ್ರ ಫಲಿಸಿತು. ಕೈಕೇಯಿಯ ಕಾಮನೆ ಕೈಗೂಡಿತು.

ಆಕೆಯ ಕಾಮನೆಗೆ ದಶರಥನ ಜೀವ ಬಲಿಯಾಯಿತು. ವಾಲಿಯ ಪ್ರಾಣವೂ
ಬಲಿಯಾಯಿತು. ಈಗ ನನ್ನಮ್ಮ ಹರಣಗಳು ಕೂಡ ಆಕೆಯನ್ನು ತಣಿಸಲಿವೆ.
ರಘುಕುಲದ ಡಾಕಿನಿಯ ಬಯಕೆ ಈಡೇರಿತು. ಸೀತಾನ್ವೇಷಣೆ ಯಲ್ಲಿ ಬಳಲಿದ
ನಮ್ಮನ್ನು ದುಃಖದಿಂದ ರಾಮಚಂದ್ರ ನೆನೆದುಕೊಳ್ಳು- ತ್ತಿರಬಹುದು. ರಾಮ
ಚಂದ್ರನಿಗೆ ಜಯವಾಗಲಿ. ಸಚ್ಛಕ್ತಿಗೆ ಜಯವಾಗಲಿ."