2023-03-15 15:35:44 by ambuda-bot
This page has not been fully proofread.
ಮಿಂಚಿನಬಳ್ಳಿ
ವನ್ನು ಅಲಕ್ಷಿಸುವುದು ಬುದ್ಧಿವಂತಿಕೆಯೆಂದು ತಿಳಿದಿದ್ದೀನಾ ? ನಿಮಗೆ ಬುದ್ಧಿ
ಕಲಿಸುವ ಮಾರ್ಗ ನನಗೆ ಗೊತ್ತು. ರಾಮದ್ರೋಹಿಯಾದವನು ಹನುಮಂತನ
ಕೈಯಿಂದ ತಪ್ಪಿಸಿಕೊಂಡು ಬದುಕಿ ಉಳಿಯಲಾರ.
೧೩ರಿ
ರಾಮನ ಮಾತು ಒತ್ತಟ್ಟಿಗಿರಲಿ. ಲಕ್ಷ್ಮಣನ ಬಾಣ ಕೂಡ ಇಂದ್ರನ
ವಜ್ರಾಯುಧಕ್ಕಿಂತ ನೂರುಪಟ್ಟು ಬಲಿಷ್ಠವಾಗಿದೆ. ಅವನ ಒಂದು ಬಾಣಕ್ಕೆ
ನಿಮ್ಮ ಗುಹೆ ತರಗೆಲೆಯಂತೆ ನುಚ್ಚು ನೂರಾದೀತು. ಯಾರ ಹುಬ್ಬಿನ ಕುಣಿತಕ್ಕೆ
ಮೂರು ಲೋಕಗಳೂ ತಾಳಹಾಕುತ್ತಿವೆಯೋ ಅಂಥ ರಾಮಚಂದ್ರನಿಗೆ ಈ ಬಿಲ
ಅಗಮ್ಯವೆ ? ಏನು ಹುಡುಗಾಟದ ಮಾತು ! "
ಮಹಾನದಿಯ ಪೂರದಲ್ಲಿ ಶಾಖಾನದಿಗಳೆಲ್ಲ ಸೇರಿಕೊಳ್ಳುವಂತೆ ಕಪಿಗಳೆಲ್ಲ
ಮಾರುತಿಯ ಮತವನ್ನನುಸರಿಸಿದರು. ಕಪಿಗಳ ಪಯಣಕ್ಕೆ ತಡೆಯಾಗಿ ಎದುರಿ
ನಲ್ಲಿ ಕಡಲು ಅಬ್ಬರಿಸುತ್ತಿತ್ತು. ನಿರುಪಾಯರಾದ ಕಪಿಗಳು ಕಡಲಬದಿಯಲ್ಲಿಯ
ಕಾಡೊಂದರಲ್ಲಿ ನಿಂತು ವಿಶ್ರಾಂತಿ ಪಡೆದರು.
ಕಾನುನಾಮದಿಂದ ಗರಿಮೂಡಿತು
ಅಂಗದನಿಗೆ ಹೋದಲ್ಲೆಲ್ಲ ನಿರಾಶೆಯೇ ಆವರಿಸುತ್ತಿತ್ತು. ಕಡಲಿನ ಕರೆ
ಯನ್ನು ಕಂಡಮೇಲಂತೂ ಅವನಿಗೆ ಉಪಾಯವೇ ತೋಚದಾಯಿತು. ಕುಲವೃದ್ಧ
ರಾದ ಕಪಿಗಳಿಗೆಲ್ಲ ಅಭಿನಂದಿಸಿ ಅವನು ವಿಜ್ಞಾಪಿಸಿಕೊಂಡನು:
" ನಮಗೆ ಕೊಟ್ಟ ಅವಧಿ ಮುಗಿಯುತ್ತಿದೆ. ಸೀತೆಯನ್ನು ಹುಡುಕುವುದು
ನಮ್ಮಿಂದಾಗಲಿಲ್ಲ. ಎದುರುಗಡೆ ಕಣ್ಣು ಹರಿವಷ್ಟು ದೂರ ಕಡಲು ಸೆಟೆದು
ನಿಂತಿದೆ. ಮಾರ್ಗವೇ ಕಾಣದಾಗಿದೆ.
ನನಗೆ ಯುವರಾಜ ಪದವಿಯೇನೋ ದೊರಕಿದೆ. ಅದು ಸುಗ್ರೀವ-
ನಿಂದಲ್ಲ; ರಾಮದೇವನ ಕರುಣೆಯಿಂದ. ನಾನು ರಾಮಚಂದ್ರನ ಋಣವನ್ನು
ತೀರಿಸಬೇಕಿತ್ತು. ಇಲ್ಲದಿದ್ದರೆ ಬದುಕಿಯಾದರೂ ಏನು ಫಲ ? ಇಲ್ಲ. ನಾನಿನ್ನು
ರಾಮಚಂದ್ರನಿಗೆ ಮೋರೆ ತೋರಿಸಲಾರೆ. ಇಲ್ಲಿ ಉಪವಾಸದೀಕ್ಷೆ ತೊಡುತ್ತೇನೆ.
ನನ್ನ ತಾಯಿಯನ್ನು ಸಮಾಧಾನಗೊಳಿಸುವ ಭಾರ ಮಾತ್ರ ನಿಮ್ಮ ಮೇಲಿದೆ.
ಪತಿಶೋಕದಿಂದ ಬಾಡಿದ ಜೀವ, ಪುತ್ರಶೋಕದಿಂದ ಕಮರಿಹೋಗಬಾರದು."