This page has been fully proofread once and needs a second look.

ಸಂಗ್ರಹರಾಮಾಯಣ
 
ನಿಮ್ಮನ್ನು ಕಳಿಸಿಕೊಡುತ್ತೇನೆ. ದಯವಿಟ್ಟು ಎಲ್ಲರೂ ಕಣ್ಣು ಮುಚ್ಚಿ- ಕೊಳ್ಳ
ಬೇಕು."
 
೧೨೯
 

 
ಕಪಿಗಳು ಕಣ್ತೆರೆದಾಗ ವಿಂಧ್ಯದ ಶಿಖರದಲ್ಲಿದ್ದರು ! ಮರಗಳಲ್ಲಿ ಅರಳಿ

ನಿಂತ ಹೂಗಳು ಹೇಮಂತದ ಬರವನ್ನು ಸೂಚಿಸುತ್ತಿದ್ದವು. ತಿಂಗಳು

ತುಂಬುತ್ತ ಬಂತು. ಸೀತೆ ದೊರಕಲಿಲ್ಲ. ಸುಗ್ರೀವನ ದಂಡವನ್ನು ನೆನೆದು

ಕಪಿಗಳು ಚಿಂತಿಸತೊಡಗಿದರು. ಆಗ ಅಂಗದನು ತನ್ನ ಅಭಿಪ್ರಾಯವನ್ನು

ಕಪಿಗಳ ಮುಂದೆ ನಿವೇದಿಸಿಕೊಂಡನು.
 

 
"ಸೀತೆಯನ್ನು ಕಾಣದೆ ತೆರಳಿದರೆ ಸುಗ್ರೀವನ ದಂಡಕ್ಕೆ ನಾವು ಗುರಿ-

ಯಾಗುತ್ತೇವೆ. ರಾಜನ ಕೈದಿಯಾಗಿ ಸಾವನ್ನಪ್ಪುವದಕ್ಕಿಂತ ಇಲ್ಲೇ ಉಪವಾಸ
ಬಿದ್ದು ಸಾಯುವದು ಮೇಲು."
 

 
ಕಪಿಗಳ ಕಣ್ಣು ತೇವಗೊಂಡಿತು. ಆದರೆ ತಾರನು ಮಾತ್ರ ಏನೋ

ಭಿನ್ನಾಭಿಪ್ರಾಯ ಉಳ್ಳವನಂತೆ ಎದ್ದುನಿಂತು ನುಡಿಯತೊಡಗಿದನು:
 

 
" ತನ್ನ ಒಡಹುಟ್ಟಿದ ಅಣ್ಣನನ್ನು ಕೊಂದು ಅತ್ತಿಗೆಯನ್ನು ತನ್ನ ಅಂತಃ

ಪುರದಲ್ಲಿರಿಸಿಕೊಂಡ ಸುಗ್ರೀವನಿಗೂ ನ್ಯಾಯ ದಯೆಗಳೆಂಬುದಿವೆಯೆ ?

ಸುಗ್ರೀವನ ಬಳಿಗೆ ನಾವು ಹೋಗಲಾರೆವು. ನನಗೆ ನಮ್ಮ ಜೀವ ಭಾರ- ವಾಗಿಲ್ಲ.
ನಾವು ಈ ಗುಹೆಯನ್ನು ಹೊಕ್ಕು ಸುಖವಾಗಿ ಬಾಳಬಹುದು. ಇಂದ್ರನ
ವಜ್ರಾಯುಧಕ್ಕೂ ನಲುಗದ ಈ ಗುಹೆಯಲ್ಲಿ ರಾಮನ ಬೇಳೆ ಬೇಯದು. ಇದು
ನಮಗೆ ನೆಮ್ಮದಿಯ ನೆಲೆ.
 
23
 
"
 
ಕೆಟ್ಟ ಮಾತು ರುಚಿಸುವುದು ಬೇಗ. ಎಲ್ಲ ಕಪಿಗಳಿಗೂ ಈ ಮಾತು

ರುಚಿಸಿತು. ಎಲ್ಲರೂ 'ಇದೇ ಸರಿ' ಎಂದು ತೀರ್ಮಾನಕ್ಕೆ ಬಂದರು. ನ್ಯಾಯ
ಅವಿವೇಕದ ಅಡಿಯಲ್ಲಿ ನುಸುಳಿ ಹೋಗತೊಡಗಿದಾಗ ಹನುಮಂತನು ಎಚ್ಚರಿಸ
 
ಬೇಕಾಯಿತು:
 
*

 
"
ತಾರನ ಮಾತಿನ ಅರ್ಥ ನನಗಾಗುತ್ತಿದೆ. ಅವನ ದುರ್ನೀತಿಯನ್ನು

ನಾನು ಚೆನ್ನಾಗಿ ಬಲ್ಲೆ. ತನ್ನ ಸೋದರಳಿಯನಾದ ಅಂಗದನ ಪಟ್ಟವನ್ನು
ವನ್ನು ಅಪಹರಿಸುವ ದುರ್ಯೋಚನೆ ಆತನಲ್ಲಿ ಮೂಡಿದೆ. ಸುಗ್ರೀವ ಸೀತೆಯನ್ನು
ರಾಮನಿಗೆ ಒಪ್ಪಿಸದಿದ್ದರೆ ಅವರ ಗೆಳೆತನ ಭಂಗವಾಗು- ವುದು. ಆಗ ತನ್ನ
ಕೆಲಸವನ್ನು ಪೂರೈಸಬಹುದು ಎಂದು ಆತ ಚಿಂತಿಸು- ತ್ತಿದ್ದಾನೆ. ರಾಮಕಾ
 
ರ್ಯ