This page has not been fully proofread.

ಮಿಂಚಿನಬಳ್ಳಿ
 
ಕಪಿಗಳು ಗುಹೆಯೊಳಗೆ ನೀರಿರಬೇಕು ಎಂದು ಊಹಿಸಿದರು. ಬಾಯಾರಿ
ಬಳಲಿದ ವಾನರ ವೃಂದ ಗುಹೆಯನ್ನು ಪ್ರವೇಶಿಸಿತು.
 
ಗುಹೆಯೆಂದರೆ ಅಂಧಂತಮಸ್ಸು. ಕತ್ತಲು ಕವಿದ ಯೋಜನ ದೂರದ
ಮಾರ್ಗ. ಅಲ್ಲಿ ಕಣ್ಣಿದ್ದವರೂ ಕುರುಡರೇ, ಸೂರ್ಯದೇವನ ಕರುಣೆ ಆ
ಗುಹೆಯೆಡೆಗೆ ಹರಿದೇ ಇರಲಿಲ್ಲ ! ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು
ಕಪಿಗಳು ಮುಂದೆ ಸಾಗಿದರು. ಎತ್ತ ಪಯಣ ? ಯಾವುದು ದಾರಿ ? ಯಾರಿಗೆ
ಗೊತ್ತು ?
 
೧೨೮
 
ರಾಮನಾಮವನ್ನು ಗಟ್ಟಿಯಾಗಿ ಜಪಿಸುತ್ತ
 
ನಿರಾಶರಾದ ಕಪಿಗಳು
ಮುಂದೆ ಮುಂದೆ ಸಾಗಿದರು.
ಕಾಣಿಸುತ್ತಿದೆ. ಏನು ಸುಂದರವಾದ ಕಾಡು !
 
ಏನು ಅದ್ಭುತ !
 
ಕತ್ತಲೆ ಕಳೆದು ಹೊಂಬೆಳಕು
ಅದೂ ಅಲ್ಲದೆ ಒಬ್ಬ ಹೆಣ್ಣು
 
ಹೆಂಗಸು. ಕಪಿಗಳು ದಿಗ್ಗಾಂತರಾದರು. ಹನುಮಂತನು ಆಕೆಯ ಬಳಿಸಾರಿ
ನುಡಿದನು:
 
"ಸುಂದರಿ, ನೀನು ಯಾರು ? ಇದು ಯಾರ ಭೂಮಿ ? ಇನ್ನು ನಮ್ಮ
ಕುರಿತು ಹೇಳುವದಾದರೆ- ಸುಗ್ರೀವನ ಗೆಳೆಯನಾದ ರಾಮಚಂದ್ರನ ನೃತ್ಯರು
ನಾವು. ಆತನ ಮಡದಿಯನ್ನು ಹುಡುಕಿಕೊಂಡು ಬರುತ್ತಿದ್ದಾಗ ಅಕಸ್ಮಾತ್ತಾಗಿ
ಈ ಗುಹೆಯನ್ನು ಹೊಕ್ಕೆವು."
 
ಯೋಗಿನಿಯು ಸಂತಸದಿಂದಲೇ ಉತ್ತರಿಸಿದಳು:
 
"ನಾನು ಮೇರುಸಾವರ್ಣಿಯ ಮಗಳು, ನನ್ನ ಹೆಸರು ಸ್ವಯಂಪ್ರಭೆ, ಈ
ಗುಹೆ ಮಯನಿಂದ ನಿರ್ಮಿತವಾದುದು. ಹೇಮಾ ಎಂಬ ಅಪ್ಸರೆಯೊಡನೆ ಆತ
ಇಲ್ಲಿ ಬಹುಕಾಲ ವಾಸವಾಗಿದ್ದ. ನಾನು ಆ ಅಪ್ಸರೆಯ ಸಖಿ. ನೀವೆಲ್ಲ ಬಳಲಿ
ಬಂದಿದ್ದೀರಿ. ನಿಮಗೆಲ್ಲರಿಗೂ ನನ್ನ ಪ್ರೀತಿಯ ಸ್ವಾಗತವಿದೆ."
 
ಎಂದು ಮಾತಿನಿಂದ ಅವರನ್ನು ತಣಿಸಿ ಅಮೃತದಂಥ ಹಣ್ಣು-ಗಡ್ಡೆ
ಗಳಿಂದ ಅವರ ಹಸಿವನ್ನು ನೀಗಿಸಿದಳು. ಹೊಟ್ಟೆ ತುಂಬಿದ ಮೇಲೆ ಹೊರಡುವ
ಯೋಚನೆ. ಆದರೆ ಏಕೋ ಕಣ್ಣು ಕಟ್ಟಿದಂತಾಯಿತು. ಹೋಗುವ ಮಾರ್ಗವೇ
ಕಾಣಿಸದು. ಆಗ ಸ್ವಯಂಪ್ರಭೆಯೇ ಅವರಿಗೆ ಮಾರ್ಗದರ್ಶಕಳಾದಳು:
 
"ಬ್ರಹ್ಮನ ವರಬಲದಿಂದ ಈ ಗುಹೆ ದುಷ್ಪವೇಶ್ಯವಾಗಿದೆ. ಯಾರೂ
ಇದರ ಪ್ರವೇಶ ನಿರ್ಗಮಗಳನ್ನು ಅರಿಯರು. ಆದರೂ ಯೋಗಬಲದಿಂದ