This page has not been fully proofread.

ಸಂಗ್ರಹರಾಮಾಯಣ
 
ಪೂರ್ವ-ಪಶ್ಚಿಮ-ಉತ್ತರಗಳಿಗೆ ತೆರಳಿದ್ದ ವಿನತ-ಸುಷೇಣ ಮತ್ತು ಶತ
ಬಲಿ ಒಂದು ತಿಂಗಳ ನಂತರ ಮರಳಿ ಬಂದು ಸೀತೆಯನ್ನು ತಮ್ಮಿಂದ ಕಾಣ
ಲಾಗಲಿಲ್ಲ ಎಂದು ನಿವೇದಿಸಿಕೊಂಡರು. ಸುಗ್ರೀವನ ಆಸೆ-ಆಕಾಂಕ್ಷೆಗಳೆಲ್ಲ
ಹನುಮಂತನಲ್ಲಿ ಕೇಂದ್ರೀಕೃತವಾದವು.
 
X
 
೧೨೭
 
X
 
ಇತ್ತ ಹನುಮಂತನು ವಿಂಧ್ಯಪರ್ವತದ ಗುಹೆಗಳಲ್ಲಿ ಕಾಡು-ಮೇಡು
ಗಳಲ್ಲಿ ತನ್ನ ಪರಿವಾರದೊಡನೆ ಸೀತೆಯನ್ನು ಹುಡುಕತೊಡಗಿದನು. ಒಂದು
ಗುಹೆಯಲ್ಲಿ ಮಾರೀಚನ ಮಗ ಕುಳಿತಿದ್ದ. ಕಪಿಗಳು ರಾವಣನೇ ಅಲ್ಲಿ ಅಡಗಿ
ಕುಳಿತಿರಬೇಕು ಎಂದು ಭಾವಿಸಿದರು. ಅಂಗದನಂತೂ ತನ್ನ ಮುಷ್ಟಿ ಪ್ರಹಾರ
ದಿಂದ ಅವನ ಕಥೆಯನ್ನೇ ತೀರಿಸಿಬಿಟ್ಟ !
 
ಅನೇಕ ಕಡೆ ಹುಡುಕಿ ತಿರುಗಿ ಬಳಲಿದ ಕಪಿಗಳು ಒಂದೆಡೆ ವಿಶ್ರಾಂತಿಗಾಗಿ
ಕುಳಿತಿದ್ದರು. ಅವರ ಮನೋವೃತ್ತಿಯನ್ನು ಪರೀಕ್ಷಿಸುವುದಕ್ಕಾಗಿ ಹನುಮಂತ
ಒಂದು ಪ್ರಶ್ನೆಯನ್ನು ಅವರ ಮುಂದಿರಿಸಿದನು :
 
X
 
ಬಹುದಿನಗಳಿಂದ ಸೀತೆಯನ್ನು ಹುಡುಕುತ್ತಿದ್ದೇವೆ. ಆದರೂ ಆಕೆ
ಕಾಣ ಸಿಗುವ ಚಿಹ್ನೆಯಿಲ್ಲ. ಮುಂದೇನು ಮಾಡುವುದು ?"
 
ಒಡನೆ ಉತ್ಸುಕನಾದ ಅಂಗವನು ಉತ್ತರಿಸಿದನು :
ರಾಮಸೇವೆ ನಮಗೆಲ್ಲರಿಗೂ ಕರ್ತವ್ಯವಾಗಿದೆ. ಸುಗ್ರೀವನ ಆಜ್ಞೆ-
ಯನ್ನೂ ಅವಶ್ಯವಾಗಿ ಪಾಲಿಸಬೇಕು. ಕೆಲಸ ಕೈಗೂಡುವ ವರೆಗೆ ಪ್ರಯತ್ನಿಸು
ವುದು ಇಷ್ಟವಾಗಿದೆ. ನಾವು ಕಂಗೆಡಬಾರದು. ಸೀತೆಯ ಅನ್ವೇಷಣೆ ಮುಂದು
ವರಿಯಬೇಕು ಎಂಬುದೇ ನಮ್ಮೆಲ್ಲರ ಆಶಯ."
 
ಹಸಿವು ಬಾಯಾರಿಕೆಗಳನ್ನೂ ಮರೆತು ಕಪಿಗಳೆಲ್ಲ ಅಂಗದನ ಮಾತನ್ನು
ಅನುಮೋದಿಸಿದರು. ಕಾಡು ಗುಹೆಗಳನ್ನು ಹೊಕ್ಕು ಸೀತೆಯನ್ನು ಹುಡುಕುವ
ಕಪಿಗಳ ಕೋಲಾಹಲದಲ್ಲಿ ಕಾಡು ಪ್ರಾಣಿಗಳ ಜೀವಕ್ಕೆ ಬೆಲೆಯೇನು ? ಕಪಿ-
ಗಳಿಗೆ ಅಡ್ಡವಾದ ಯಾವ ಪ್ರಾಣಿಯೂ ಬದುಕಿ ಹಿಂತೆರಳಲಿಲ್ಲ.
 
ಎಲ್ಲ ಸೀತೆಯ ಸುಳುವಿಲ್ಲ. ಕಪಿಗಳಿಗೆ ಹೇಳತೀರದ ಬಳಲಿಕೆ, ಸಿಕ್ಕಿ
ದ್ದನ್ನು ಕಬಳಿಸುವ ಹಸಿವು-ಬಾಯಾರಿಕೆ. ಇಂಥ ಸಂದರ್ಭದಲ್ಲಿ ಒಂದು ದೊಡ್ಡ
ಗುಹೆ ಅವರಿಗೆ ಎದುರಾಯಿತು. ಅಲ್ಲಿ ಹಂಸಗಳು ಹಾರಾಡುವುದನ್ನು ಕಂಡು