2023-03-15 15:35:43 by ambuda-bot
This page has not been fully proofread.
ಮಿಂಚಿನಬಳ್ಳಿ
"ಆಜ್ಞಾಪಿಸುವ ಕಾವ್ಯ ಕಪಿರಾಜನಾದ ನಿನ್ನನೇ." ಎಂದು ರಾಮ-
ಚಂದ್ರನು ಸೌಜನ್ಯಪೂರ್ಣವಾಗಿ ಉತ್ತರಿಸಿದನು.
ಒಡನೆ ಸುಗ್ರೀವನು ನಾನಾದಿಕ್ಕುಗಳಿಗೆ ಕಪಿಸೇನೆಯನ್ನು ಕಳಿಸಿದನು.
ವಿನತನನ್ನು ಪೂರ್ವದಿಕ್ಕಿಗೆ ತೆರಳುವಂತೆ ಆಜ್ಞಾಪಿಸಿದನು. ತಾರೆಯ ತಂದೆ
ಸುಷೇಣನನ್ನು ಪಶ್ಚಿಮಕ್ಕೂ ಶತಬಲಿಯನ್ನು ಉತ್ತರಕ್ಕೂ ಕಳಿಸಲಾಯಿತು.
ಹನುಮಂತನನ್ನು ತೆಂಕಣ ನಾಡಿಗೆ ಹೋಗುವಂತೆ ವಿಜ್ಞಾಪಿಸಿಕೊಂಡ ಸುಗ್ರೀ
ವನು ಹನುಮಂತನನ್ನು ಕರೆದು ಹೀಗೆ ನುಡಿದನು:
"ಪ್ರಿಯ ಹನುಮಂತನೆ ! ನೀನು ನನ್ನ ಮಂತ್ರಿ, ಮಿತ್ರ, ಗುರು, ಆಶ್ರಯ
ಎಲ್ಲವೂ ಆಗಿದ್ದೀಯೆ. ಸೀತೆ ದಕ್ಷಿಣ ಕಡೆ ಇರುವದು ಹೆಚ್ಚು ಸಂಭವ, ಎಂತಲೆ
ನಿನ್ನನ್ನು ಆ ದಿಸೆಗೆ ಕಳಿಸುತ್ತಿದ್ದೇನೆ. ಅಂಗದಾದಿಗಳು ನಿನ್ನ ಜತೆಗಾರರಾಗಿರಲಿ,
ರಾವಣನ ಮನೆಯನ್ನಾದರೂ ನುಗ್ಗಿ ಸೀತೆಯನ್ನು ಕಂಡು ಬರಬಲ್ಲವನು
ನೀನೊಬ್ಬನೆ ಎಂದು ನನ್ನ ಭಾವನೆ. ನೀನು ಸಂಚರಿಸದ ಎಡೆಯಿಲ್ಲ. ನಿನಗೆ
ತಡೆ ಎಂಬುದೂ ಇಲ್ಲ. ರಾಮಚಂದ್ರನ ಬಳಿ ನಾನು ಮಾಡಿದ ಪ್ರತಿಜ್ಞೆಯನ್ನು
ಪೂರಯಿಸುವದು ನಿನ್ನ ಕೈಯಲ್ಲಿದೆ. ನೀನೇ ನನ್ನ ಸರ್ವಸ್ವ."
ರಾಮ ಕಾರ್ಯದಲ್ಲಿ ಹನುಮಂತನ ಜಾಣತನ ಕೇಳಬೇಕೆ ? ಅವನು
ಸಂತಸದಿಂದ ಒಪ್ಪಿಕೊಂಡನು. ಎಲ್ಲರೂ ಒಂದು ತಿಂಗಳೊಳಗೆ ಮರಳಿ ಬರ
ಬೇಕು. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾದೀತು ಎಂದು ವಿಧಿಸಲಾಯಿತು.
ಸೀತೆಯನ್ನು ಕಂಡು ಹುಡುಕಿದವನಿಗೆ ಅರ್ಧ ರಾಜ್ಯವನ್ನು ಕೊಡುವುದಾಗಿ
ಸುಗ್ರೀವನು ಸಾರಿದನು.
ಕಪಿಗಳೆಲ್ಲ ತೆರಳಿದ ಮೇಲೆ ರಾಮಚಂದ್ರ ಮಾರುತಿಯನ್ನು ಕರೆದು
ನುಡಿದನು :
ಗುರುತಿಗಾಗಿ
"ಮಾರುತಿ ! ಈ ಕಾರ್ಯವನ್ನು ನೀನು ಮಾತ್ರವೇ ಮಾಡಬಲ್ಲೆ.
ಎಂತಲೇ ನೀನು ದಕ್ಷಿಣದಿಕ್ಕಿಗೆ ತೆರಳುವುದು ನನಗೂ ಸಮ್ಮತ.
ನನ್ನ ಈ ಉಂಗುರ ನಿನ್ನ ಬಳಿಯಿರಲಿ." ಎಂದು ತನ್ನ ಕೈಯಲ್ಲಿಯ ರತ್ನಾಂಗು-
ಲೀಯಕವನ್ನು ಹನಮಂತನಿಗಿತ್ತನು.
ಆತನು ಅದನ್ನು ಸ್ವೀಕರಿಸಿ, ರಾಮನ
ಮೊದಲಾದವರೊಡನೆ ತೆಂಕಣ ನಾಡಿಗೆ
ಪಾದಗಳಿಗೆರಗಿ ತಾರ ಜಾಂಬವ
ತೆರಳಿದನು.