This page has been fully proofread once and needs a second look.

ಸಂಗ್ರಹರಾಮಾಯಣ
 
ಸಂದರ್ಭ ತಿಳಿಯಾದುದನ್ನು ಕಂಡು ಹನುಮಂತನು ಕಪಿಗಳನ್ನು ಕರೆ-
ಯಿಸಿ ಆಜ್ಞಾಪಿಸಿದನು :
 

 
"ಮಹೇಂದ್ರ-ಮಲಯ ಮೊದಲಾದ ದ್ವೀಪಗಳಲ್ಲಿರುವ ಎಲ್ಲ ಕಪಿಗಳೂ
ಹತ್ತು ದಿನಗಳೊಳಗೆ ಇಲ್ಲಿಗೆ ಬರಬೇಕು. ಇಲ್ಲದಿದ್ದರೆ ರಾಜದಂಡಕ್ಕೆ ಗುರಿ-
ಯಾಗಬೇಕಾದೀತು.
 
೧೨೫
 
"
 
ವಾನರರ ಪಡೆ ವಾಯುವೇಗದಿಂದ ಈ ವಾರ್ತೆಯನ್ನು ಎಲ್ಲೆಡೆಗೆ

ಹಬ್ಬಿಸಿತು. ತೋತಾದ್ರಿ, ಕೈಲಾಸದ ಕಡೆಯಿಂದ ಕೂಡ ಕೋಟಿಗಟ್ಟಲೆ ಕಪಿಗಳು
 
ಬಂದು ಸೇರಿದರು.
 

 
ವಿಂಧ್ಯ-ಹಿಮಾಲಯಗಳಿಂದ, ನಾನಾ ಪಶ್ರ್ವತಗಳಿಂದ ದೇವಾಂಶ ಸಂಭೂತ
ರಾದ ವಾನರರು ರಾಮನಾಮ ಕಿವಿಗೆ ಬಿದ್ದೊಡನೆ ಸುಗ್ರೀವ- ನೆಡೆಗೆ ಧಾವಿಸಿದರು.
 

 
ಸುಗ್ರೀವನು ತನ್ನ ಶಿಬಿಕೆಯಲ್ಲಿ ಲಕ್ಷ್ಮಣನನ್ನೂ ಕುಳ್ಳಿರಿಸಿಕೊಂಡು ರಾಮ
ನೆಡೆಗೆ ತೆರಳಿದನು. "ಅಪರಾಧಿಯನ್ನು ಕ್ಷಮಿಸಬೇಕು" ಎಂದು ಕಾಲಿಗೆರಗಿದ
ಕಪಿರಾಜನನ್ನು ರಾಮಚಂದ್ರನು ಪ್ರೀತಿಯಿಂದ ಆಲಿಂಗಿಸಿ ಕೊಂಡನು.
 

 
ಕಪಿಗಳ ಪಯಣ
 

 
ಸುಗ್ರೀವನ ಆಜ್ಞೆಯಂತೆ ಎಲ್ಲ ಕಪಿಗಳೂ ರಾಮನೆಡೆಗೆ ಬಂದು ಸೇರಿ- ದರು.
ಕಪಿಪ್ರಧಾನರಾದ ಅಂಗದ, ನೀಲ, ಸುಷೇಣ, ಪನಸ, ಹನಮಂತನ ತಂದೆ
ವೃದ್ಧ ವಾನರ ಕೇಸರಿ, ಗವಾಕ್ಷ, ಧೂಮ್ರಾಕ್ಷ, ಗವಯ, ಗಂಧ- ಮಾದನ, ಗಜ,
ವೃಷಭ, ಶಲಭ, ಶರಭ, ಮೈಂದ, ವಿವಿದ, ರುಮಂಮಣ್ವಂತ, ತಾರ, ಇಂದ್ರಜಾನು,
ದಧಿಮುಖ, ಕುಮುದ, ದರೀಮುಖ, ಜಾಂಬವಂತ, ವಿನತ, ರಂಭ, ಭೀಮ,
ಸಂಪಾತಿ, ವಿಜಯ, ವೇದರ್ಶಿ, ಮಹಾಹಸು, ಶರಾರ್ಚಿ, ಶರಗು,
ಲ್ಮ, ಸುಹೋತ್ರ, ಉಳ್ಳಾಲ್ಕಾಮುಖ ಮೊದಲಾದವರೆಲ್ಲ ಕೋಟಿಗಟ್ಟಲೆ ಕಪಿಸೇನೆಯೊಡನೆ
ಬಂದು ನೆರೆದರು.
 

 
ಕೈ ಜೋಡಿಸಿ ನಿಂತ ಕಪಿಗಳನ್ನು ಕುಳ್ಳಿರಿಸಿ ಸುಗ್ರೀವನು ರಾಮಚಂದ್ರ
-
ನೊಡನೆ ವಿಜ್ಞಾಪಿಸಿಕೊಂಡನು:
 

 
"ಸ್ವಾಮಿನ್, ಇವರೆಲ್ಲ ನಿನ್ನ ದಾಸರು, ನಿನ್ನ ಸೇವೆಗಾಗಿ ಇವರೆಲ್ಲರೂ

ಕಂಕಣಬದ್ಧರಾಗಿದ್ದಾರೆ. ಆಜ್ಞಾಪಿಸಬೇಕು."