This page has not been fully proofread.

ಸಂಗ್ರಹರಾಮಾಯಣ
 
ಸಂದರ್ಭ ತಿಳಿಯಾದುದನ್ನು ಕಂಡು ಹನುಮಂತನು ಕಪಿಗಳನ್ನು ಕರೆ-
ಯಿಸಿ ಆಜ್ಞಾಪಿಸಿದನು :
 
"ಮಹೇಂದ್ರ-ಮಲಯ ಮೊದಲಾದ ದ್ವೀಪಗಳಲ್ಲಿರುವ ಎಲ್ಲ ಕಪಿಗಳೂ
ಹತ್ತು ದಿನಗಳೊಳಗೆ ಇಲ್ಲಿಗೆ ಬರಬೇಕು. ಇಲ್ಲದಿದ್ದರೆ ರಾಜದಂಡಕ್ಕೆ ಗುರಿ-
ಯಾಗಬೇಕಾದೀತು.
 
೧೨೫
 
ವಾನರರ ಪಡೆ ವಾಯುವೇಗದಿಂದ ಈ ವಾರ್ತೆಯನ್ನು ಎಲ್ಲೆಡೆಗೆ
ಹಬ್ಬಿಸಿತು. ತೋತಾದ್ರಿ, ಕೈಲಾಸದ ಕಡೆಯಿಂದ ಕೂಡ ಕೋಟಿಗಟ್ಟಲೆ ಕಪಿಗಳು
 
ಬಂದು ಸೇರಿದರು.
 
ವಿಂಧ್ಯ-ಹಿಮಾಲಯಗಳಿಂದ, ನಾನಾ ಪಶ್ವತಗಳಿಂದ ದೇವಾಂಶ ಸಂಭೂತ
ರಾದ ವಾನರರು ರಾಮನಾಮ ಕಿವಿಗೆ ಬಿದ್ದೊಡನೆ ಸುಗ್ರೀವನೆಡೆಗೆ ಧಾವಿಸಿದರು.
 
ಸುಗ್ರೀವನು ತನ್ನ ಶಿಬಿಕೆಯಲ್ಲಿ ಲಕ್ಷ್ಮಣನನ್ನೂ ಕುಳ್ಳಿರಿಸಿಕೊಂಡು ರಾಮ
ನೆಡೆಗೆ ತೆರಳಿದನು. "ಅಪರಾಧಿಯನ್ನು ಕ್ಷಮಿಸಬೇಕು" ಎಂದು ಕಾಲಿಗೆರಗಿದ
ಕಪಿರಾಜನನ್ನು ರಾಮಚಂದ್ರನು ಪ್ರೀತಿಯಿಂದ ಆಲಿಂಗಿಸಿಕೊಂಡನು.
 
ಕಪಿಗಳ ಪಯಣ
 
ಸುಗ್ರೀವನ ಆಜ್ಞೆಯಂತೆ ಎಲ್ಲ ಕಪಿಗಳೂ ರಾಮನೆಡೆಗೆ ಬಂದು ಸೇರಿದರು.
ಕಪಿಪ್ರಧಾನರಾದ ಅಂಗದ, ನೀಲ, ಸುಷೇಣ, ಪನಸ, ಹನಮಂತನ ತಂದೆ
ವೃದ್ಧ ವಾನರ ಕೇಸರಿ, ಗವಾಕ್ಷ, ಧೂಮ್ರಾಕ್ಷ, ಗವಯ, ಗಂಧಮಾದನ, ಗಜ,
ವೃಷಭ, ಶಲಭ, ಶರಭ, ಮೈಂದ, ವಿವಿದ, ರುಮಂತ, ತಾರ, ಇಂದ್ರಜಾನು,
ದಧಿಮುಖ, ಕುಮುದ, ದರೀಮುಖ, ಜಾಂಬವಂತ, ವಿನತ, ರಂಭ, ಭೀಮ,
ಸಂಪಾತಿ, ವಿಜಯ, ವೇದರ್ಶಿ, ಮಹಾಹಸು, ಶರಾರ್ಚಿ, ಶರಗು,
ಸುಹೋತ್ರ, ಉಳ್ಳಾಮುಖ ಮೊದಲಾದವರೆಲ್ಲ ಕೋಟಿಗಟ್ಟಲೆ ಕಪಿಸೇನೆಯೊಡನೆ
ಬಂದು ನೆರೆದರು.
 
ಕೈ ಜೋಡಿಸಿ ನಿಂತ ಕಪಿಗಳನ್ನು ಕುಳ್ಳಿರಿಸಿ ಸುಗ್ರೀವನು ರಾಮಚಂದ್ರ
ನೊಡನೆ ವಿಜ್ಞಾಪಿಸಿಕೊಂಡನು:
 
"ಸ್ವಾಮಿನ್, ಇವರೆಲ್ಲ ನಿನ್ನ ದಾಸರು, ನಿನ್ನ ಸೇವೆಗಾಗಿ ಇವರೆಲ್ಲರೂ
ಕಂಕಣಬದ್ಧರಾಗಿದ್ದಾರೆ. ಆಜ್ಞಾಪಿಸಬೇಕು."