This page has been fully proofread once and needs a second look.

ಮಿಂಚಿನಬಳ್ಳಿ
 
"ಅಗ್ನಿ ಸಾಕ್ಷಿಕವಾಗಿ ರಾಮಚಂದ್ರನ ಮುಂದೆ ನೀನಂದುದೇನು ? 'ನನಗೆ
ನನ್ನ ರಾಜ್ಯವನ್ನು ದೊರಕಿಸಿಕೊಟ್ಟರೆ ನಾನು ಸೀತಾನ್ವೇಷಣೆ- ಯಲ್ಲಿ ನೆರವಾಗು
ವೆನು' ಎಂದು ಮಾತು ಕೊಟ್ಟಿಲ್ಲವೆ? ರಾಜ್ಯ ದೊರಕಿತು. ಹೆಣ್ಣುಗಳ ಭೋಗ,
ರಾಜ್ಯದ ಸಿರಿ ನೆತ್ತಿಗೆ ಸಿಪಿತ್ತವನ್ನಡರಿಸಿದೆ. ತಿಂಗಳುಗಳು ಉರುಳುತ್ತಿವೆ. ಸೀತಾ
ನ್ವೇಷಣೆ ಮರೆತೇಹೋದಂತಿದೆ ! ನಿನ್ನಿಂದ ಸ್ನೇಹ- ದ್ರೋಹ ನಡೆದಿದೆ.
ಮಾತು ನೆನಪಿರಲಿ, ನಿನ್ನ ಸಹಾಯವಿಲ್ಲದೆಯೂ ರಾಮಚಂದ್ರ ಸೀತೆಯನ್ನು
ಪಡೆಯಬಲ್ಲ. ಸಮುದ್ರ ತುಂಬಲಿಕ್ಕೆ ಕೊಳದ ನೀರು ಸುರಿಯಬೇಕಾಗಿಲ್ಲ.
ಆದರೆ ಲೋಕ ಗುರುವಿಗೆ ಎರಡೆಣಿಸಿದ ನಿನ್ನೆದೆಯ ನೆತ್ತರನ್ನು ನನ್ನ ಬಾಣ
ಕುಡಿಯಬಯಸುತ್ತಿದೆ."
 
ಒಂದು
 
೧೨೮
 

 
ಲಕ್ಷ್ಮಣನ ಸಿಟ್ಟು ಇನ್ನೂ ತಗ್ಗಿರಲಿಲ್ಲ. ಕಪಿಗಳೆಲ್ಲ ತಬ್ಬಿಬ್ಬಾಗಿದ್ದರು.
 

ಆಗ ಸಾಧಿಧ್ವಿ ತಾರೆಯೇ ಎದ್ದು ನಿಂತು ಲಕ್ಷ್ಮಣನನ್ನು ಸಮಾಧಾನಗೊಳಿಸಿ- ದಳು:

 
"ಧಾರ್ಮಿಕನಾದ ರಾಜಕುಮಾರನೆ ! ಶಾಂತನಾಗು, ನಮ್ಮ ಮಹಾರಾಜ
ರಾಮ ಕಾರ್ಯವನ್ನು ಮರೆತಿಲ್ಲ. ಇಷ್ಟರಲ್ಲಿ ಕಸಿಪಿಗಳನ್ನು ಬರಿಸಲು ದೇಶ ದೇಶ
ಗಳಿಗೆ ದೂತರನ್ನು ಅಡ್ಡಿಟ್ಟಿಯಾಗಿದೆ. ಆದರೆ ನನ್ನ ಪತಿ ವಾಲಿ ನುಡಿದುದನ್ನು
ನಾನು ಕೇಳಿದ್ದೆ. ಸೀತೆಯನ್ನು ರಾವಣನು ಕದ್ದೊಯ್ದನಂತೆ. ಅವನ ಸಂಹಾರಕ್ಕೆ
ದೊಡ್ಡ ಸೇನೆಯ ಆವಶ್ಯಕತೆಯಿದೆ. ಅದರ ಸನ್ನಾಹವೆಲ್ಲ ನಡೆಯುತ್ತಿದೆ. ನಮ್ಮ
ಮಹಾರಾಜ ಸುಗ್ರೀವನು ಹಿಂದಿನಂತೆಯೆ ನಿಮ್ಮ ಗೆಳೆಯನಾಗಿದ್ದಾನೆ. ಹನು
ಮಂತ ಬದುಕಿರುವ- ವರೆಗೆ ಈ ರಾಜ್ಯದಲ್ಲಿ ಸ್ನೇಹದ್ರೋಹ ನಡೆಯಲಾರದು.
ಮುಖ್ಯವಾಗಿ ನೀನು ಶಾಂತನಾಗಬೇಕು. ನಿನ್ನ ಕಿಡಿಗಣ್ಣನ್ನು ಕಂಡು ನನ್ನ
ದಾಸಿಯರು ದಿಗಿಲಾಗಿದ್ದಾರೆ."
 

 
ಸುಗ್ರೀವನೂ ತಾರೆಯ ಮಾತಿಗೆ ದನಿಗೂಡಿಸಿದ :
 

 
"ಲಕ್ಷಣ ! ನನ್ನ ಅಪರಾಧಕ್ಕೆ ಕ್ಷಮೆಯಿರಲಿ. ರಾಮಚಂದ್ರ ಒಂದು

ಬಾಣಕ್ಕೆ ಮೂರು ಲೋಕವೂ ಎಣೆಯಲ್ಲ. ಅಂಥವನಿಗೆ ನಮ್ಮಿಂದೇನು ಲಾಭ ?
ನಾವು ನಮ್ಮ ಸ್ವಾರ್ಥಕ್ಕಾಗಿ ರಾಮಚಂದ್ರನನ್ನು ಮೊರೆ ಹೊಕ್ಕವರು.
 
"
 
ಇಷ್ಟರಲ್ಲಿ ಲಕ್ಷ್ಮಣನೂ ಶಾಂತನಾಗಿ ನುಡಿದನು :
 

 
"ಕಾವ್ರ್ಯದ ಭರದಲ್ಲಿ ನಾನೂ ದುಡುಕಿ ನಡೆದೆ, ಕಪಿರಾಜ ಅದನ್ನು

ಕ್ಷಮಿಸಬೇಕು."