This page has been fully proofread once and needs a second look.

ಸಂಗ್ರಹರಾಮಾಯಣ
 
'ನಮ್ಮ ಕೆಲಸವನ್ನು ಇಷ್ಟರಲ್ಲಿಲೆ ಮರೆತೆಯಾದರೆ ವಾಲಿಯನ್ನು ಬಲಿ ತೆಗೆದುಕೊಂಡ
ಬಾಣಕ್ಕೆ ನಿನ್ನ ಕುರಿತೇನೂ ಕರುಣೆ ಮೂಡಲಾರದು' ಎಂದು."
 
೨೩
 

 
ಲಕ್ಷ್ಮಣನು ಸಿಡಿದುಕೊಂಡೇ ಉತ್ತರಿಸಿದನು:
 

 
"ಅಣ್ಣ, ಮರ್ಯಾದೆಗೇಡಿಯಾದ ಆ ಕಪಿಗೆ ಈಗಲೇ ಬುದ್ಧಿಗಲಿಸಿ ಬರು-
ತ್ತೇನೆ. ಸುಗ್ರೀವನೂ ವಾಲಿಯ ದಾರಿಯನ್ನೇ ಹಿಡಿದು ಹೋಗಲಿ, ಅಂಗದನು
ನಮಗೆ ಸೀತಾನ್ವೇಷಣೆಯಲ್ಲಿ ಸಹಾಯ ಮಾಡುವನು. ಅಥವಾ ಈ ವಿಡಂಬನೆ
ಗಳಾದರೂ ಏಕೆ ? ಈ ಮಂಗಗಳಿಂದೇನು ನಡೆದೀತು ? ನಿನ್ನ ಹುಬ್ಬಿನ
ಕುಣಿತಕ್ಕೆ ಮೂರು ಲೋಕವೂ ಮಣಿಯುತ್ತಿದೆ."
 

 
ಲಕ್ಷ್ಮಣನು ಸಿಟ್ಟಿಗೆದ್ದು ದನ್ನು ಕಂಡು "ಬೇಡ ತಮ್ಮ, ದುಡುಕಬಾರದು"
ಎಂದು ರಾಮಚಂದ್ರನು ನಕ್ಕು ಸಮಾಧಾನಗೊಳಿಸಿ ಕಳಿಸಿಕೊಟ್ಟನು. ಸುಗ್ರೀ
ವನ ಅಲಸ್ಯಕ್ಕೆ ಕೋಪಗೊಂಡ ಲಕ್ಷ್ಮಣನ ದಿಟ್ಟ ಹೆಜ್ಜೆಗೆ ಕಲ್ಲುಗಳು ಮರ-ಮರ-
ಮಟ್ಟುಗಳು ಸಿಡಿದು ಬೀಳುತ್ತಿದ್ದವು. ಕಾಲಪುರುಷನಂತೆ ಕಿಕ್ಷ್ಕಿಂಧೆಯನ್ನು
ಪ್ರವೇಶಿಸಿದ ಲಕ್ಷ್ಮಣನನ್ನು ಕಂಡ ವಾನರರು ದಿಕ್ಕು- ಗೆಟ್ಟು ಓಡತೊಡಗಿದರು.
ಕಾಮಿನಿಯರ ಕೂಟದಲ್ಲಿ ಮೈಮರೆತ ಸುಗ್ರೀವನಿಗೆ ಲಕ್ಷ್ಮಣನ ಬರವು ಗೋಚರಕ್ಕೆ ಬರಲಿಲ್ಲ. ಭೀತನಾದ ದೂತ-
ರಕ್ಕೆ ಬರಲಿಲ್ಲ. ಭೀತನಾದ ದೂತ
ನೊಬ್ಬ ಅಂಗದನ ಬಳಿ ಈ ಸುದ್ದಿಯನ್ನು
ಮುಟ್ಟಿಸಿ ತೆರಳಿದನು. ಅಂಗದ ಸುಗ್ರೀವನಿಗೆ ಅರುಹಿದ. ನನ್ನ ಯಾವ
ಅಪರಾಧಕ್ಕಾಗಿ ಲಕ್ಷ್ಮಣ ಕೋಪ ಗೊಂಡಿರಬಹುದು ?" ಎಂದು ಸುಗ್ರೀವ
ಚಿಂತಾಕುಲನಾದ. ಧೀಮಂತ- ನಾದ ಹನಮಂತನ ಎಚ್ಚರಿಕೆಯ ಮಾತು ಅಲ್
ಲೂ ಸಿದ್ಧವಾಗಿತ್ತು:
 
66
 

 
"ರಾಮಸೇವೆಯಲ್ಲಿ ಆಲಸ್ಯ ತೋರುವುದಕ್ಕಿಂತ ದೊಡ್ಡ ಅಪರಾಧ- ವೇನಿದೆ
ಸುಗ್ರೀವ ? ನೀನೀಗ ಲಕ್ಷ್ಮಣನನ್ನು ಸಂತೈಸಬೇಕು."
 

 
ಬಾಗಿಲು ಕಾಯುವವರನ್ನು ಬದಿಗೆ ತಳ್ಳಿ ಕೋಪದ ಕಿಡಿ ಕಾರುತ್ತ

ಲಕ್ಷ್ಮಣನು ಅಂತಃಪುರವನ್ನೆ ಪ್ರವೇಶಿಸಿದನು. ಅಂತಃಪುರದಲ್ಲಿ ತಾರೆ-ರುಮೆಯ
ರನ್ನು ಆಲಿಂಗಿಸಿಕೊಂಡು ಸಿಂಹಾಸನದಲ್ಲಿ ಕುಳಿತಿರುವ ಸುಗ್ರೀವನನ್ನು ಕಂಡು
ಲಕ್ಷ್ಮಣನ ಹುಬ್ಬು ಗಂಟಿಕ್ಕಿತು. ತುಟಿ ಅದುಮಿ- ಕೊಂಡು ಬಿಲ್ಲನ್ನು ಕೈಗೆ ತೆಗೆದು
ಕೊಂಡನು. ಸುಗ್ರೀವನ ಎದೆ ನಡುಗಿತು. ಓಡಿ ಬಂದು ಸಂತೈಸಿ ಕುಳ್ಳಿರಿಸಿದನು.

 
ಸಿಟ್ಟಿನ ಭರದಲ್ಲಿ ಲಕ್ಷ್ಮಣನು ಮಾತಿನ ಕಿಡಿಗಳನ್ನೆಸೆದನು :