This page has been fully proofread once and needs a second look.

ಮಿಂಚಿನಬಳ್ಳಿ
 
ರಾಮ-ಲಕ್ಷ್ಮಣರು ಪರ್ವತ ಗುಹೆಗಳಲ್ಲಿ ಏನೇನೋ ಕತೆಗಳನ್ನಾಡುತ್ತಾ
 

ವಾಸಿಸಿದರು.
 
ಕ್ರಮೇಣ ಮಳೆಗಾಲದ ಚಿಹ್ನೆ ಕಾಣಿಸಿಕೊಂಡಿತು. ಅದೂ

ಕಳೆದುದಾಯಿತು. ಬಾನೆಲ್ಲ ಸ್ವಚ್ಛವಾಯಿತು. ಶರತ್ಕಾಲದ ಶೋಭೆ ದಿಸೆ-

ಗಳನ್ನು ಬೆಳಗಿತು. ಶರದದ ಶೋಭೆಯಲ್ಲಿ ಲಕ್ಷ್ಮಣನಿಗೆ ಒಂದು ಸಂದೇಶ ವಿತ್ತು :

'
ಇದು ಸೀತೆಯನ್ನು ಹುಡುಕುವ ಕಾಲ.
 
033
 
'
 
ಮರೆತೂ ಬಾಳುವುದುಂಟೆ !
 

 
ಸುಗ್ರೀವನಿಗೆ ರಾಜಭೋಗ ದೊರಕಿದೆ. ಐಸಿರಿಯ ಪೂರದಲ್ಲಿ, ಹೆಣ್ಣುಗಳ
ತೋಳಿನಲ್ಲಿ ದಿನಗಳೆವ ಅವನಿಗೆ ರಾಮಚಂದ್ರನ ಸಖ್ಯದ ನೆನಪೂ ಬರಲಿಲ್ಲ. ಆಗ
ಧೀವಂಮಂತ ಹನುಮಂತನೇ ಎಚ್ಚರಿಸ-ಬೇಕಾಯಿತು :
 

 
"ಮಹಾರಾಜ, ರಾಜ್ಯ ಕೋಶ, ಸ್ತ್ರೀ ಸಂಪತ್ತು ಎಲ್ಲವೂ ನಿನಗೆ ರಾಮ

ಚಂದ್ರನ ಅನುಗ್ರಹದಿಂದ ದೊರೆತುದೆಂಬುದನ್ನು ಮರೆಯಬೇಡ. ಆದರೆ ನೀನು
ಅವನನ್ನೇ ಮರೆತಂತಿದೆ. ಸಂತ್ತಿನ ಮದ ನಿನ್ನನ್ನಡರಿದಂತಿದೆ. ನಾನಿರುವ
ವರೆಗೆ ಇಂಥ ಅಪಚಾರ ನಡೆಯಗೊಡಲಾರೆ. ಉಪಕಾರ ದ್ರೋಹ ಮಾಡುವ
ವರಿಗೆ ಶಿಕ್ಷಿಸುವ ಬಗೆ ನನಗೆ ಗೊತ್ತು. ರಾಮನೆಂದರೆ ಮೂರುಲೋಕದ ನಾಥ,
ಅವನ ಕೆಲಸವನ್ನು ನೆರವೇರಿಸುವುದು ನಮ್ಮ ಭಾಗ್ಯಫಲ. ಬೇಗನೆ ಸೀತೆಯನ್ನು
ಹುಡುಕಲಿಕ್ಕಾಗಿ ವಾನರರನ್ನು ದಿಕ್ಕು ದಿಕ್ಕುಗಳಿಗೆ ಕಳಿಸು."
 

 
ಹನುಮಂತನ ಮಾತು ಸುಗ್ರೀವನ ಮೇಲೆ ಪ್ರಭಾವ ಬೀರಿತು. ಒಡನೆ

ನೀಲ, ಪ್ರಕೃಭೃತಿ ಕಪಿಗಳನ್ನು ಬರಿಸಿ ಆಜ್ಞಾಪಿಸಿದನು:
 

 
"ಓ ಸೇನಾಪತಿಯಾದ ನೀಲನೆ ! ನಮ್ಮ ಕಪಿಗಳೆಲ್ಲರನ್ನೂ ಒಮ್ಮೆ ಇಲ್ಲಿಗೆ
ಬರಿಸು. ನೀನೂ ಅಂಗದನೂ ಸೇರಿ ನಾಡಿದ್ದು ಹುಣ್ಣಿಮೆಯ ದಿವಸ ಎಲ್ಲ
ಸೇನೆಗಳನ್ನು ಒಟ್ಟಿಟೈಸಬೇಕು. ಏಳು ದಿನಗಳೊಳಗೆ ನನಗೆ ಮುಖ ತೋರಿಸದ
ಯಾವ ವಾನರನಿಗೂ ಉಳಿಗಾಲವಿಲ್ಲ ಎಂದು ನೆನಪಿರಲಿ."
 

 
ಇತ್ತ ಶರತ್ಕಾಲದ ತಿಳಿಯಾದ ಮುಗಿಲನ್ನು ಕಂಡ ರಾಮನೂ ಲಕ್ಷಣ

ನೊಡನೆ ಪ್ರಸ್ತಾವವೆತ್ತಿದನು:
 

 
"ತಮ್ಮ, ಕಿಷ್ಠಿಂಕಿಂಧೆಗೆ ತೆರಳಿ ಸುಗ್ರೀವನಿಗೆ ಅವನ ಕರ್ತವ್ಯದ ಕುರಿತು

ಮುನ್ನೆಚ್ಚರಿಕೆಯನ್ನೀಯಬೇಕಾಗಿದೆ. ನೀನು ಅವನೊಡನೆ ನುಡಿಯಬೇಕು-