This page has not been fully proofread.

ಮಿಂಚಿನಬಳ್ಳಿ
 
ಅಂಗದನನ್ನು ರಕ್ಷಿಸು. ಅದೇ ನೀನು ವಾಲಿಗೆ ಸಲ್ಲಿಸತಕ್ಕ ಸೇವೆಯಾಗಿದೆ !
ವೀರಪತ್ನಿಗೆ ಇದಕ್ಕಿಂತ ಮಿಗಿಲು ಏನನ್ನು ನಾನು ಹೇಳಬಲ್ಲೆ !"
 
೧೨೦
 
ದುಃಖದ ಉದ್ವೇಗ ಇನ್ನೂ ಮಾಸಲಿಲ್ಲ. ಸುಗ್ರೀವನೂ ದಂಗಾಗಿ
ಮಾತು ಬಾರದವನಂತೆ ನಿಂತಿದ್ದ. ಅದನ್ನು ಕಂಡು ಲಕ್ಷ್ಮಣನೇ ಸ್ಪಷ್ಟೋಕ್ತಿ
ಯಿಂದ ಎಚ್ಚರಿಸಬೇಕಾಯಿತು:
 
" ಏನು ಬಳೆತೊಟ್ಟವರಂತೆ ನಿಂತಿರುವ ಸುಗ್ರೀವ ? ತಾರೆಯನ್ನು ಸಮಾ
ಧಾನಗೊಳಿಸು. ನಿನ್ನಣ್ಣನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯಲಿ."
 
ಹನುಮಂತನಿಂದ ಅಜ್ಞಪ್ತರಾದ ಕಪಿಗಳು ಪರಿಮಳ ದ್ರವ್ಯಗಳನ್ನು
ಅಣಿಗೊಳಿಸಿದರು. ತಾರನು ಶವಕ್ಕಾಗಿ ಶಿಬಿಕೆಯನ್ನು ತಂದಿರಿಸಿದನು. ಅಂಗದನೂ
ಸುಗ್ರೀವನೂ ವಾಲಿಯ ಕಳೇಬರವನ್ನು ಶಿಬಿಕೆಯ ಮೇಲೇರಿಸಿದರು. ಶವ-
ಸಂಪುಟವನ್ನು ವೈಭವದಿಂದ ಒಂದು ನದಿಯೆಡೆಗೆ ಸಾಗಿಸಿ ಸುಟ್ಟರು. ಸಂಸ್ಕಾರ
ಗಳೆಲ್ಲ ತೀರಿದಮೇಲೆ ಪಂಪೆಯಲ್ಲಿ ತರ್ಪಣವನ್ನಿತ್ತು ಎಲ್ಲರೂ ರಾಮನ ಬಳಿಗೆ
ಬಂದರು.
 
ಕಪಿಗಳ ಸಾಲಿಗೆ ಸಾಲೇ ರಾಮಪಾದಕ್ಕೆ ಅಡ್ಡಬಿದ್ದಿರಲು ಪಂಡಿತನಾದ
ಹನುಮಂತ ಮುಂದೆಬಂದು ನಿವೇದಿಸಿಕೊಂಡನು:
 
ರಾಮಚಂದ್ರ, ನೀನು ತನ್ನ ರಾಜ್ಯದಲ್ಲಿ ಇರಬೇಕೆಂದು ಸುಗ್ರೀವನ
ಬಯಕೆ, ಮೂರು ಲೋಕಗಳಿಗೂ ಅಧಿಪತಿಯಾಗಿರುವ ನೀನು ನಮ್ಮಲ್ಲಿರು
ವುದು ನಮಗೊಂದು ಹೆಮ್ಮೆಯ ಮಾತು. "
 
ರಾಮಚಂದ್ರನು ಪ್ರೀತಿಯ ಮುಗುಳನ್ನು ಬೀರುತ್ತ ಉತ್ತರಿಸಿದನು :
 
(6
 
ನಾನು ಯಾರ ರಾಜ್ಯದಲ್ಲಿ ಇರಲಾರೆ. ಇನ್ನು ಹದಿನಾಲ್ಕು ವರ್ಷ
ಕಾಲ ಕಾಡಿನಲ್ಲಿ ಮಾತ್ರ ಇರಬಲ್ಲೆ. ಅದು ನನ್ನ ತಂದೆಯ ಆಜ್ಞೆ. ಅದಿರಲಿ,
ಸುಗ್ರೀವ ! ನೀನು ಕಪಿಸಾಮ್ರಾಜ್ಯದ ಅಧಿಪತಿಯಾಗು, ಅಂಗದನು ಯುವ
ರಾಜನಾಗಲಿ. ಈಗ ಶ್ರಾವಣ ನಡೆಯುತ್ತದೆ. ಕಾರ್ತಿಕದಲ್ಲಿ ನಮ್ಮ ಕೆಲಸದ
ಕಡೆ ಗಮನವಿರಲಿ. "
 
66
 
ಅಂಗದ-ಸುಗ್ರೀವರಿಬ್ಬರೂ ತಲೆಬಾಗಿ ರಾಮನ ಆಜ್ಞೆಯನ್ನು ಸ್ವೀಕರಿಸಿ
ದರು. ಹತ್ತು ದಿನಗಳ ವರೆಗಿನ ಪಿತೃಕ್ರಿಯೆಗಳನ್ನು ಅಂಗದನು ವಿಹಿತವಾದ
ರೀತಿಯಲ್ಲಿ ನೆರವೇರಿಸಿದನು.