This page has not been fully proofread.

ಸಂಗ್ರಹರಾಮಾಯಣ
 
ಸುಗ್ರೀವನಿಗೆ ಪಟ್ಟವಾಯಿತು
 
ಅಗ್ರಜನ ಮೃತದೇಹವನ್ನು ಕಂಡ ಸುಗ್ರೀವನಿಗೆ ದುಃಖವನ್ನು ತಡೆಯುವು
ದಾಗಲಿಲ್ಲ. ಭಾತೃಸ್ನೇಹ ಕಟ್ಟೆಯೊಡೆದು ಹರಿದು ಬಂತು. ವಾಲಿಯ ಕಾಲಿಗೆ
ಬಿದ್ದು ವಿಲಾಪಿಸತೊಡಗಿದನು. ತಾರೆಯೂ ಬಾಣ ನೆಟ್ಟಿರುವ ಪತಿಯ ಮೈಮೇಲೆ
ಕೊಡವಿಬಿದ್ದು ಶೋಕಿಸತೊಡಗಿದಳು. ನೀಲನು ಮೆಲ್ಲನೆ ಬಂದು ಕಣ್ಣೀರಿಸಿ
ಕೊಳ್ಳುತ್ತ ವಾಲಿಯ ಮೈಯಿಂದ ಬಾಣವನ್ನೆಳೆದು ತೆಗೆದನು. ತಾರೆ ಇನ್ನೂ
ವಾಲಿಯ ಮೈ ನೆತ್ತರಲ್ಲಿ ಹೊರಳಾಡುತ್ತಲೇ ದೂರದಲ್ಲಿ ನಿಂತುಕೊಂಡಿರುವ
ಮಗನನ್ನು ಕೂಗಿ ಕರೆದಳು:
 
"ಮಗನೆ, ನಿನ್ನ ತಂದೆ ನಮ್ಮನ್ನೆಲ್ಲ ಬಿಟ್ಟು ತೆರಳುತ್ತಿದ್ದಾನೆ. ಅವನ
ಕಾಲಿಗೆರಗು. ಅವನ ಆಶೀರ್ವಾದವನ್ನು ಪಡೆ."
 
ಅಂಗದ ತಾಯಿಯ ಮಾತಿನಂತೆ ವಾಲಿಗೆ ನಮಸ್ಕರಿಸಿದನು. ತಾರೆ
ಯಂತೂ ಗೋಳಿಡುತ್ತಲೇ ಇದ್ದಳು:
 
"ಓ ನಾಥನೆ, ನಾನು ನಿನಗೆ ಪ್ರಿಯಳಾಗಿದ್ದುದು ನಿಜವಾದರೆ ಈಗೇಕೆ
ನೀನು ನನ್ನೊಡನೆ ಮಾತಾಡುತ್ತಿಲ್ಲ ? ವೀರರು ಹೀಗೆ ನೆಲದಲ್ಲಿ ಬಿದ್ದಿರ
ಕೂಡದು. ನಿನ್ನ ಸಂಗ್ರಾಮ ಯಜ್ಞದಲ್ಲಿ ಸಹಧರ್ಮಚಾರಿಣಿಯಾದ ನನ್ನನ್ನು
ತೊರೆದು ಹೋಗಬೇಡ. ನನ್ನನ್ನು ಕರೆದುಕೊ, ವಿಷವನ್ನಾದರೂ ಕುಡಿದೇನು.
ಬೆಂಕಿಗಾದರೂ ಹಾರಿಯೇನು, ವೀರನ ಪತ್ನಿ ವಿಧವೆಯಾದಳು ಎನ್ನುವ ಮಾತು
ನನಗೆ ಬಾರದಿರಲಿ. ಓ ನನ್ನ ಜೀವದ ಜೀವವೇ, ಓ ದಯೆಯ ಕಡಲೆ, ನಾನು
ನಿನಗೇನಾದರೂ ತಪ್ಪನ್ನೆಸಗಿದ್ದರೆ ಅದನ್ನು ಮರೆತುಬಿಡು. ಈ ಪಾಪಿಯನ್ನು
ಕ್ಷಮಿಸು. ಇನ್ನೊಂದು ಜನ್ಮದಲ್ಲೂ ನಾನು ನಿನ್ನವಳಾಗುವಂತೆ ಕರುಣಿಸು."
 
ಮೇರೆ ಮಾರಿ ಹರಿಯುತ್ತಿರುವ ತಾರೆಯ ಕರುಣಕ್ರಂದನವನ್ನು ಯಾರ
ಸಮಾಧಾನದ ಮಾತೂ ತಡೆಹಿಡಿಯಲಾರದಾಯಿತು. ಕೊನೆಗೆ ಪ್ರಾಜ್ಞನಾದ
ವೃದ್ಧವಾನರನೊಬ್ಬ ಮುಂದೆ ಬಂದು ನುಡಿದನು :
 
"ತಾಯಿ, ಗಂಡ-ಹೆಂಡತಿ ತಂದೆ-ಮಕ್ಕಳು ಇದೆಲ್ಲ ಒಂದು ಮಾಯೆ !
ಯಾರಿಗೆ ಯಾರು ಏನಾಗಬೇಕು ? ಈಶ್ವರೇಚ್ಛೆಯಂತೆ ಸಾಗುತ್ತಿರುವ ನಮ್ಮ
ಬಾಳು ಹಸಿ ಮಡಕೆಯಲ್ಲಿ ತುಂಬಿದ ನೀರು, ತಾರೆ, ನೀನಂತೂ ತಿಳಿದವಳು.
 
ಹೀಗೆ ಪ್ರಲಾಪಿಸುವುದು ಚೆನ್ನಲ್ಲ. ನಿನ್ನ ಗಂಡನದೇ ಪ್ರತಿಕೃತಿಯಾದ ಕುಮಾರ