2023-03-22 03:46:19 by jayusudindra
This page has been fully proofread once and needs a second look.
0:6
"ಎದ್ದೇಳು ನಾಥ, ನಿನ್ನ ಪ್ರಿಯೆಯಾದ ನಾನು ಇಲ್ಲಿದ್ದೇನೆ. ನಿರಪ
ಮಗ ಅಂಗದನನ್ನಾದರೂ ನೋಡಿ ಏಳಲಾರೆಯಾ? ನನ್ನನ್ನು ಬಿಟ್ಟು
ಲೋಕಾಂತರಕ್ಕೆ ತೆರಳುವಷ್ಟು ನಿರ್ದಯನೆ ನೀನು ? ನನ್ನನ್ನೂ ನಿನ್ನ ಜತೆಗೆ
ಓ ಸುಗ್ರೀವ ! ಈಗಲಾದರೂ ನಿನಗೆ ಸಂತಸವಾಯಿತೆ ? ನಿನ್ನ ಅಣ್ಣನ
ನೆತ್ತರಿನಿಂದ ತೊಯ್ದ ರಾಜ್ಯವನ್ನು ನೀನು ಸುಖವಾಗಿ ಭೋಗಿಸು. ನಿನಗಾದರೂ
ವಾಲಿಯ ತೊಡೆಯಲ್ಲಿ ತಲೆಯಿಟ್ಟು ತಾರೆ ವಿಲಾಪಿಸುತ್ತಲೇ ಇದ್ದಳು.
ತಾರೆಯ ಮತ್ತು ಪರಿವಾರದ ಕೂಗನ್ನು ಕೇಳಿ ಎಚ್ಚತ್ತ ವಾಲಿ ಮೆಲ್ಲನೆ ಕಣ್ಣೆರೆದು
"ಸುಗ್ರೀವ ! ಇನ್ನು ನಮ್ಮಲ್ಲಿ ವೈರವಿಲ್ಲ. ನಾನು ನಿನಗೆ ಅಪರಾಧ
ಮಾಡಿದ್ದೇನೆ. ಅದನ್ನು ಮರೆತುಬಿಡು. ನನ್ನ ಮಗನಾದ ಅಂಗದನನ್ನು ನಿನ್ನ
ಹೀಗೆಂದು ತನ್ನ ಕತ್ತಿನಲ್ಲಿಯ ಮಾಲೆಯನ್ನು ರಾಮನ ಪಾದಗಳಿಗೆ
ಅರ್ಪಿಸಿದನು. ಜತೆಗೆ ತನ್ನನ್ನು ಕೂಡ. ವಾಲಿಯ ಆತ್ಮ ಮಹೇಂದ್ರನಲ್ಲಿ
ಸೇರಿಕೊಂಡಿತು. ಕಿಷ್ಕಿಂಧೆಯ ತೇಜಸ್ಸು ನಂದಿತು.