2023-03-15 15:35:41 by ambuda-bot
This page has not been fully proofread.
ಮಿಂಚಿನಬಳ್ಳಿ
ತಾರೆಯು ಪ್ರಲಾಪಿಸುತ್ತ, ರಣರಂಗದಲ್ಲಿ ರಕ್ತಸಿಕ್ತನಾಗಿ ಬಿದ್ದಿರುವ ವಾಲಿ
ಯನ್ನು ಕಂಡಳು. ಕಂಡವಳಿ "ಓ ನನ್ನ ಜೀವದ ಜೀವವೆ' ಎಂದು ಬೊಬ್ಬಿರಿದು
ವಾಲಿಯ ಕಾಲ ಬುಡದಲ್ಲಿ ಬಿದ್ದು ಬಿಟ್ಟಳು. ಅಂಗದನೂ ಇತರ ವಾನರ
ಸ್ತ್ರೀಯರೂ ದುಃಖಿತರಾಗಿ ಅಳತೊಡಗಿದರು. ತಾರೆಯಂತೂ ಪದೇ ಪದೇ ಎದೆ
ಬಡಿದುಕೊಂಡು ವಿಲಾಪಿಸುತ್ತಿದ್ದಳು:
0:6
"ಎದ್ದೇಳು ನಾಥ, ನಿನ್ನ ಪ್ರಿಯೆಯಾದ ನಾನು ಇಲ್ಲಿದ್ದೇನೆ. ನಿರಪ
ರಾಧಿನಿಯಾದ ನನ್ನ ಮೇಲೇಕೆ ಸಿಟ್ಟು, ಒಮ್ಮೆ ಕಣ್ಣೆರೆದು ನೋಡು, ನಿನ್ನ
ಮಗ ಅಂಗದನನ್ನಾದರೂ ನೋಡಿ ಏಳಲಾರೆಯಾ? ನನ್ನನ್ನು ಬಿಟ್ಟು
ಲೋಕಾಂತರಕ್ಕೆ ತೆರಳುವಷ್ಟು ನಿರ್ದಯನೆ ನೀನು ? ನನ್ನನ್ನೂ ನಿನ್ನ ಜತೆಗೆ
ಕರೆದೊಯ್ಯು, ನಿನ್ನ ವಾಸಿಯಾಗಿ ಅಲ್ಲೂ ಇರುತ್ತೇನೆ.
ಓ ಸುಗ್ರೀವ ! ಈಗಲಾದರೂ ನಿನಗೆ ಸಂತಸವಾಯಿತೆ ? ನಿನ್ನ ಅಣ್ಣನ
ನೆತ್ತರಿನಿಂದ ತೊಯ್ದ ರಾಜ್ಯವನ್ನು ನೀನು ಸುಖವಾಗಿ ಭೋಗಿಸು. ನಿನಗಾದರೂ
ದೇವರು ಮಂಗಲ ಮಾಡಲಿ."
ವಾಲಿಯ ತೊಡೆಯಲ್ಲಿ ತಲೆಯಿಟ್ಟು ತಾರೆ ವಿಲಾಪಿಸುತ್ತಲೇ ಇದ್ದಳು.
ತಾರೆಯ ಮತ್ತು ಪರಿವಾರದ ಕೂಗನ್ನು ಕೇಳಿ ಎಚ್ಚತ್ತ ವಾಲಿ ಮೆಲ್ಲನೆ ಕಣ್ಣೆರೆದು
ಸುಗ್ರೀವನನ್ನು ಕರೆದು ಇಂತೆಂದನು :
"ಸುಗ್ರೀವ ! ಇನ್ನು ನಮ್ಮಲ್ಲಿ ವೈರವಿಲ್ಲ. ನಾನು ನಿನಗೆ ಅಪರಾಧ
ಮಾಡಿದ್ದೇನೆ. ಅದನ್ನು ಮರೆತುಬಿಡು. ನನ್ನ ಮಗನಾದ ಅಂಗದನನ್ನು ನಿನ್ನ
ಮಗನೆಂದೇ ತಿಳಿ, ಇನ್ನು ಈ ಸಾಮ್ರಾಜ್ಯದ ಅಧಿಕಾರ ನಿನ್ನದು. ಅಂಗದ
ಯುವರಾಜನಾಗಲಿ, ನನ್ನ ಪ್ರೇಯಸಿ ತಾರೆಯನ್ನು ಒಳ್ಳೆಯ ರೀತಿಯಿಂದ
ನೋಡಿಕೊಳ್ಳು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ಇಹಪರಗಳ ಒಳಿತಿಗಾಗಿ
ಎಂದೆಂದೂ ರಾಮನ ಚರಣದಾಸನಾಗಿ ಬದುಕು. ರಾಮ ಕಾವ್ಯಗಳಲ್ಲಿ ಪ್ರಮಾದ
ವನ್ನೆಸಗದಿರು. ಅಂಗದ ! ನೀನು ಕೂಡ ಹಿರಿಯರಿಗೆ ಒಪ್ಪಾಗಿ ಬಾಳಬೇಕೆಂದು
ನನ್ನ ಬಯಕೆ, ಪ್ರಭು ರಾಮಚಂದ್ರ ! ಸುಗ್ರೀವನನ್ನು ಅಂಗದನನ್ನು ನಿನ್ನ
ಕೈಯಲ್ಲಿ ಅರ್ಪಿಸಿದ್ದೇನೆ."
ಹೀಗೆಂದು ತನ್ನ ಕತ್ತಿನಲ್ಲಿಯ ಮಾಲೆಯನ್ನು ರಾಮನ ಪಾದಗಳಿಗೆ
ಅರ್ಪಿಸಿದನು. ಜತೆಗೆ ತನ್ನನ್ನು ಕೂಡ. ವಾಲಿಯ ಆತ್ಮ ಮಹೇಂದ್ರನಲ್ಲಿ
ಸೇರಿಕೊಂಡಿತು. ಕಿಂಧೆಯ ತೇಜಸ್ಸು ನಂದಿತು.