This page has been fully proofread once and needs a second look.

ಸಂಪಾದಕರ ಮಾತು
 

 
ವಿಜಯಾದಶಮಿಯ ಶುಭಮೂಹೂರ್ತದಲ್ಲಿ ಸಂಗ್ರಹ ರಾಮಾಯಣವು
ಪ್ರಕಟವಾಗುತ್ತಿರುವದು ಒಂದು ಶುಭ ಸೂಚನೆಯಂದೇ ತಿಳಿಯುವೆ. ರಾಮಾ-
ಯಣ, ಮಹಾಭಾರತಗಳು ನಮ್ಮ ರಾಷ್ಟ್ರೀಯ ಗ್ರಂಥಗಳು, ಸರ್ವ ಕಾಲ-
ಗಳಲ್ಲಿಯೂ ಮಾರ್ಗದರ್ಶಕವಾದಂಥವು. ಭಾರತೀಯ ಜೀವನವನ್ನು ರೂಪಿಸಿ-
ದಂಥವು. ಈ ಗ್ರಂಥಗಳ ಅಧ್ಯಯನ, ವಿಮರ್ಶೆಗಳು ರಾಷ್ಟ್ರೀಯ ಪುನ
ರುಜ್ಜಿವನದ ಈ ಸಂಧಿಕಾಲದಲ್ಲಿ ಅತ್ಯಾವಶ್ಯಕವೆಂದು ನಮಗೆ ಅನಿಸುತ್ತಿದೆ.
ಈ ದೃಷ್ಟಿಯಿಂದಲೆ ಈ ಗ್ರಂಥದ ಪ್ರಕಟನೆಗೆ ಪ್ರವೃತ್ತವಾದುದು.
 

 
ಸಂಗ್ರಹ ರಾಮಾಯಣವು ೮೦೦ ವರ್ಷಗಳ ಹಿಂದೆ, ಶ್ರೀಮದಾಚಾರೈರ
ರ್ಯರ ಮಾರ್ಗದರ್ಶನದಲ್ಲಿ ಶ್ರೀ
ಶ್ರೀ
ನಾರಾಯಣಪಂಡಿತಾಚಾರ್ಯರಿಂದ ಬರೆಯಲ್ಪಟ್ಟ

ಗ್ರಂಥವು. ತತ್ವಜ್ಞಾನ ಹಾಗು ಪುರಾಣಗಳ ಸಮನ್ವಯ ಮಾಡಿದ ಗ್ರಂಥವು.
ಪಂಡಿತಾಚಾರ್ಯರು ತೀರ ಎಳೆಯ ವಯಸ್ಸಿನಲ್ಲಿಯೇ ಶ್ರೀಮದಾಚಾರ್ಯರಿಂದ

ಪ್ರಭಾವಿತರಾಗಿ ರಚಿಸಿದ ಸುಂದರ ಕಾವ್ಯವಿದು. ಇದನ್ನು ಕನ್ನಡಿಸಿದವರು
ಬನ್ನಂಜೆ ಗೋವಿಂದಾಚಾರ್ಯರು. ತರುಣ ಪಂಡಿತರು, ನವ ದೃಷ್ಟಿಯವರು,
ಭಾರತೀಯ ಸಂಸ್ಕೃತಿಯು ಉಜ್ವಲವಾಗಿ ಬೆಳಗಬೇಕೆಂಬ ಬಯಕೆಯುಳ್ಳವರು,
ತತ್ವಜ್ಞಾನದಲ್ಲಿ ಪಾಂಡಿತ್ಯವನ್ನು ಸಂಪಾದಿಸಿರುವರಲ್ಲದೆ ಎಲ್ಲ ಪುರಾಣಗಳನ್ನು

ಅಭ್ಯಸಿಸಿ ಪರಿಣತರಾಗಿರುವರು. ಇಂತಹರು ಈ ಕೃತಿಯನ್ನು ಕನ್ನಡಿಸಿ ಕನ್ನಡಿ-
ಗರಿಗೆ ನೀಡಿದ್ದಕ್ಕಾಗಿ ಮಿಂಚಿನಬಳ್ಳಿಯು ಗೋವಿಂದಾಚಾರ್ಯರಿಗೆ ಋಣಿ
 
ಯಾಗಿದೆ.
 

 
ಶ್ರೀ ಶ್ರೀ ೧೦೮ ಶ್ರೀ ಫಲಿಮಾರು ಮಠದ ಶ್ರೀಪಾದಂಗಳವರು ಮುನ್ನುಡಿ
ಯನ್ನು ಬರೆದು ಆಶೀರ್ವದಿಸಿದ್ದು ಬಳ್ಳಿಯ ಉತ್ಕರ್ಷದ ಕಾಲವು ಸಮೀಪಿಸಿದೆ
ಎಂದು ತಿಳಿಯುತ್ತೇವೆ. ಶ್ರೀಪಾದಂಗಳು ಅನುಗ್ರಹಮಾಡಿದ್ದಕ್ಕಾಗಿ ಅವರಿಗೆ

ಅನಂತ ಪ್ರಣಾಮಗಳನ್ನು ಅರ್ಪಿಸುತ್ತೇವೆ.