This page has been fully proofread once and needs a second look.

ಮಿಂಚಿನಬಳ್ಳಿ
 
ಸಲಿ, ನೀವು ಅಣ್ಣ-ತಮ್ಮಂದಿರು ರಾಜಿಯಾಗಿರಿ, ಸುಗ್ರೀವನು ಯುವರಾಜ,
ನಾಗಲಿ. ಇದು ಸರ್ವಥಾ ಅಶಕ್ಯವಾದರೆ, ಈ ತಾಣವನ್ನೆ ಬಿಟ್ಟು ಬೇರೆಲ್ಲಾ
ದರೂ ತೆರಳೋಣ. ರಾಮಚಂದ್ರನ ವಿರೋಧವನ್ನು ಕಟ್ಟಿಕೊಂಡು ನಾವು
ಬದುಕಿ ಉಳಿವಂತಿಲ್ಲ."
 
೧೨೬
 

 
ವಾಲಿ ಮಡದಿಯನ್ನು ಸಂತೈಸಿದನು:
 
*

 
"
ಪ್ರಿಯೆ, ನಾನು ನಪುಂಸಕನಲ್ಲ. ಶತ್ರು ಯುದ್ಧಕ್ಕೆ ಕರೆದಾಗ ತಲೆ-
ದಯಾಳುವಾದ ರಾಮಚಂದ್ರ
 

ಬಾಗಲಾರೆ.
 
ಓಡಿಯೂ ಹೋಗಲಾರೆ.
 
ದಯಾಳುವಾದ ರಾಮಚಂದ್ರ
ನನಗೇನೂ ಮಾಡಲಾರ ಎಂದು ನನ್ನ ವಿಶ್ವಾಸ, ಅಥವಾ ರಾಮನ ಬಾಣ

ನನಗೆ ನಾಟಿತೆಂದರೆ ನಾನು ಪವಿತ್ರನಾದೆ, ಧನ್ಯನಾದೆ ಎಂದು ತಿಳಿಯುತ್ತೇನೆ.
ನನ್ನ ಮೇಲಣ ಪ್ರೀತಿಯಿಂದ ನೀನಾಡಿದ ಮಾತು ಸಹಜ ವಾಗಿದೆ. ನಾನು
ಯುದ್ಧಕ್ಕೆ ತೆರಳಬೇಕು. ನೀನಿನ್ನು ಒಳಗೆ ಹೋಗು ದೇವಿ. "
 

 
ತಾರೆ ಗಂಡನಿಗೆ ಸುತ್ತುವರಿದು 'ಮಂಗಳವಾಗಲಿ' ಎಂದು ಮನದಲ್ಲಿ
ಲೆ
ದೇವರನ್ನು ಸ್ಮರಿಸಿಕೊಂಡಳು. ಏಕೋ ಕಣ್ಣೀರು ಕಟ್ಟೆಯೊಡೆದು ಹರಿದು

ವಾಲಿಯನ್ನು ಕಾಣುವುದೂ ಆಕೆಯಿಂದಾಗಲಿಲ್ಲ.
 

 
ವಾಲಿ ಬರುತ್ತಿರುವುದನ್ನು ಕಂಡು ಸುಗ್ರೀವ ಟೊಂಕಬಿಗಿದು ನಿಂತನು.

ಮತ್ತೆ ಹೊಡೆದಾಟಕ್ಕೆ ಪ್ರಾರಂಭವಾಯಿತು. ವಾಲಿ ಸಿಟ್ಟಿನಿಂದ ಮುಷ್ಟಿ ಬಿಗಿದು
"ಈ ಮುಷ್ಟಿಗೆ ನಿನ್ನ ಹರಣ ಬಲಿಯಾಗಲಿದೆ" ಎಂದನು. "ನಿನ್ನ ಹರಣ ನನ್ನ
ಮುಷ್ಟಿಯಲ್ಲಿದೆ" ಎಂದು ಸುಗ್ರೀವನೂ ಮುಷ್ಟಿ ಬಿಗಿದು ವಾಲಿಗೆ ಬಲವಾಗಿ
ಹೊಡೆದನು. ರಾಮಚಂದ್ರನ ಅನುಗ್ರಹದಿಂದ ಸುಗ್ರೀವನಲ್ಲಿ ಕಸುವು ಬಂದಂತಾ
ಗಿತ್ತು. ಪೆಟ್ಟುತಿಂದ ವಾಲಿ ನೆತ್ತರು- ಕಾರುತ್ತ ನೆಲಕ್ಕೆ ಕುಸಿದನು. ಉತ್ಸಾಹ
ಗೊಂಡ ಸುಗ್ರೀವ ದೊಡ್ಡ ಮರ- ವೊಂದನ್ನು ಕಿತ್ತು ತಂದು ವಾಲಿಯ ನೆತ್ತಿಗೆ
ಹೊಡೆದನು. ಒಮ್ಮೆಗೆ ತತ್ತರಿಸಿದರೂ ಕ್ಷಣಮಾತ್ರದಲ್ಲಿ ವಾಲಿ ಸಿಟ್ಟಿನಿಂದ
ಎದ್ದು ನಿಂತನು. ಇನ್ನೇನು ಸುಗ್ರೀವ ಕುಪಿತನಾದ ವಾಲಿಯ ಕೈಯಲ್ಲಿ ಸಿಕ್ಕಿ
ನುಗ್ಗಾಗು- ವುದರಲ್ಲಿದ್ದ. ಅಷ್ಟರಲ್ಲಿ ರಾಮಚಂದ್ರನ ಬಾಣ ವಾಲಿಯ ನೆತ್ತಿಯನ್ನು

ಭೇದಿಸಿತು. ವಾಲಿ ನೆಲಕ್ಕೆ ಕುಸಿದುಬಿದ್ದನು. ಚೇತರಿಸಿಕೊಂಡು ಕರೆ
ದಾಗ ಎದುರಿನಲ್ಲಿ ರಾಮಚಂದ್ರ ಕಾಣಿಸಿಕೊಂಡ. ಮನದಲ್ಲಿ ಪ್ರಭುವಿಗೆ

ವಂದಿಸಿ ವಾಲಿ ನುಡಿದನು :