2023-03-21 15:19:43 by jayusudindra
This page has been fully proofread once and needs a second look.
"ನಿನಗೂ ನನ್ನ ಮೇಲೆ ದಯೆ ಬರಲಿಲ್ಲವೆ ರಾಮಚಂದ್ರ ? ನಿನ್ನೆದೆಯೂ ಕಲ್ಲಾಯಿತೆ ?"
"ನೀವಿಬ್ಬರೂ ಅಣ್ಣ-ತಮ್ಮಂದಿರು ಒಂದೇ ತೆರನಿದ್ದೀರಿ. ಒಂದೇ ರೂಪು
ಒಂದೇ ವೇಷ, ಒಂದೇ ದನಿ. ಅದರಿಂದ ನಿಮ್ಮಿಬ್ಬರನ್ನು ಪ್ರತ್ಯೇಕವಾಗಿ ಗುರುತಿಸುವುದು ನನ್ನಿಂದ ಸಾಧ್ಯವಾಗಲಿಲ್ಲ. ಅದರಿಂದ ಬಾಣ ಬಿಡ- ಲಾಗಲಿಲ್ಲ."
ನಿಜ ಹೇಳುವುದಾದರೆ ಅಣ್ಣ-ತಮ್ಮಂದಿರ ಜಗಳದಲ್ಲಿ ಮೂರನೆ- ಯವರು ಒಮ್ಮೆಲೆ ಕೈ ಹಾಕಿ ದುಡುಕಬಾರದು ಎಂಬ ಲೋಕನೀತಿ- ಯನ್ನು ತೋರುವುದಕ್ಕಾಗಿಯೆ ರಾಮಚಂದ್ರನು ಬಾಣ ಬಿಡದಿದ್ದುದು. ಕೈಯೊಳಗಿನ ಕಂದುಕದಂತೆ ಜಗತ್ತನ್ನೆಲ್ಲ ಕಾಣುವ ಪ್ರಭುವಿಗೆ ಸುಗ್ರೀವ- ನಾರು-ವಾಲಿ ಯಾರು ಎಂದು ತಿಳಿಯದೆ ?
ಸರಿ, ಅಣ್ಣ-ತಮ್ಮಂದಿರ ವ್ಯತ್ಯಾಸ ತಿಳಿವುದಕ್ಕಾಗಿ ರಾಮನಾಣತಿ- ಯಂತೆ ಹನುಮಂತನು ಸುಗ್ರೀವನಿಗೆ ಒಂದು ಮಾಲೆ ಹಾಕಿದನು. ಮತ್ತೆ ಕಪಿ ಸೇನೆಯೊಡನೆ ಸುಗ್ರೀವ ಕಿಷ್ಕಿಂಧೆಗೆ ನಡೆದನು. ರಾಮಚಂದ್ರನು ಭಾವೀ ಕಾರ್ಯವನ್ನು ಚಿಂತಿಸತೊಡಗಿದನು :
"ವಾಲಿ ನನ್ನನ್ನು ಕಂಡನಾದರೆ ಕಾಲಿಗೆರಗುವನು. ಆಮೇಲೆ ಅವ-
ನನ್ನು ಕೊಲ್ಲುವುದು ಅಸಾಧ್ಯವಾಗುವುದು. ಆದರೆ ವಾಲಿ ವಧೆಯ ಪ್ರತಿಜ್ಞೆ ಮಾಡಿಯಾಗಿದೆ. ಅದರಿಂದ ಮರೆಯಲ್ಲಿ ನಿಂತೇ ಅವನನ್ನು ಕೊಲ್ಲಬೇಕು."
ರಾಮಚಂದ್ರನು ಮರಗಳೆಡೆಯಲ್ಲಿ ಮರೆಯಾದನು. ಸುಗ್ರೀವ ಯುದ್ಧಕ್ಕೆ ಮುನ್ನಡೆದನು. ಅವನ ಸಿಂಹನಾದಕ್ಕೆ ಕಿಷ್ಕಿಂಧೆಯ ಕಪಿಗಳ ದೇಹ ನಡುಗಿತು; ಬಲ ಉಡುಗಿತು. ವಾಲಿ ಕನಲಿ ಎದ್ದು ನಿಂತನು. ಅವನ ಮಡದಿ ತಾರೆ, ಅವನನ್ನು ಬಿಗಿದಪ್ಪಿ ನುಡಿದಳು :
"ನಾಥ, ನಾನು ಪಿಶುನತೆಯಿಂದಲೋ-ಚಾಪಲಕ್ಕಾಗಿಯೋ ಹೇಳು
ತಿಲ್ಲ. ನನ್ನಂತರಂಗದ ದನಿಯನ್ನು ಅರಿಕೆ ಮಾಡಿಕೊಳ್ಳುತ್ತಿದ್ದೇನೆ ಅಷ್ಟೆ.
ಸುಗ್ರೀವ ನಿಮಗೆ ಎದುರು ನಿಲ್ಲಬೇಕಾದರೆ ಬಲವಾದ ಬೆಂಬಲವಿದ್ದೇ ತೀರಬೇಕು. ಮಹಾವೀರನಾದ ರಾಮನಿಗೂ ಸುಗ್ರೀವನಿಗೂ ಗೆಳೆತನವಿದೆ ಎಂದು ಅಂಗದನ ಬಾಯಿಂದ ಕೇಳಿದ್ದೇನೆ. ಲೋಕಮಿತ್ರನಾದ ರಾಮಚಂದ್ರ ನಮಗೂ ಮಿತ್ರನಲ್ಲವೆ ? ಅಂಗದನು ಮುತ್ತು-ಮಾಣಿಕ್ಯಗಳಿಂದ ರಾಮಚಂದ್ರನನ್ನು ಸ್ವಾಗತಿ