2023-03-15 15:35:41 by ambuda-bot
This page has not been fully proofread.
on
ಸಂಗ್ರಹರಾಮಾಯಣ
"ನಿನಗೂ ನನ್ನ ಮೇಲೆ ದಯೆ ಬರಲಿಲ್ಲವೆ ರಾಮಚಂದ್ರ ? ನಿನ್ನೆದೆಯೂ
ಕಲ್ಲಾಯಿತೆ ???
"ನೀವಿಬ್ಬರೂ ಅಣ್ಣ-ತಮ್ಮಂದಿರು ಒಂದೇ ತೆರನಿದ್ದೀರಿ. ಒಂದೇ ರೂಪು
ಒಂದೇ ವೇಷ, ಒಂದೇ ದನಿ, ಅದರಿಂದ ನಿಮ್ಮಿಬ್ಬರನ್ನು ಪ್ರತ್ಯೇಕವಾಗಿ ಗುರು
ತಿಸುವುದು ನನ್ನಿಂದ ಸಾಧ್ಯವಾಗಲಿಲ್ಲ. ಅದರಿಂದ ಬಾಣ ಬಿಡಲಾಗಲಿಲ್ಲ."
ನಿಜ ಹೇಳುವುದಾದರೆ ಅಣ್ಣ-ತಮ್ಮಂದಿರ ಜಗಳದಲ್ಲಿ ಮೂರನೆಯವರು
ಒಮ್ಮೆಲೆ ಕೈ ಹಾಕಿ ದುಡುಕಬಾರದು ಎಂಬ ಲೋಕ ನೀತಿಯನ್ನು ತೋರುವು
ದಕ್ಕಾಗಿಯೆ ರಾಮಚಂದ್ರನು ಬಾಣ ಬಿಡದಿದ್ದು ದು. ಕೈಯೊಳಗಿನ ಕಂದುಕ
ದಂತೆ ಜಗತ್ತನ್ನೆಲ್ಲ ಕಾಣುವ ಪ್ರಭುವಿಗೆ ಸುಗ್ರೀವನಾರು-ವಾಲಿ ಯಾರು ಎಂದು
ತಿಳಿಯದೆ ?
ಸರಿ, ಅಣ್ಣ-ತಮ್ಮಂದಿರ ವ್ಯತ್ಯಾಸ ತಿಳಿವುದಕ್ಕಾಗಿ ರಾಮನಾಣತಿಯಂತೆ
ಹನುಮಂತನು ಸುಗ್ರೀವನಿಗೆ ಒಂದು ಮಾಲೆ ಹಾಕಿದನು. ಮತ್ತೆ ಕಪಿ ಸೇನೆ
ಯೊಡನೆ ಸುಗ್ರೀವ ಕಿಂಧೆಗೆ ನಡೆದನು. ರಾಮಚಂದ್ರನು ಭಾವೀ ಕಾರ್ಯ
ವನ್ನು ಚಿಂತಿಸತೊಡಗಿದನು :
"ವಾಲಿ ನನ್ನನ್ನು ಕಂಡನಾದರೆ ಕಾಲಿಗೆರಗುವನು. ಆ ಮೇಲೆ ಅವ
ನನ್ನು ಕೊಲ್ಲುವುದು ಅಸಾಧ್ಯವಾಗುವುದು. ಆದರೆ ವಾಲಿ ವಧೆಯ ಪ್ರತಿಜ್ಞೆ
ಮಾಡಿಯಾಗಿದೆ. ಅದರಿಂದ ಮರೆಯಲ್ಲಿ ನಿಂತೇ ಅವನನ್ನು ಕೊಲ್ಲಬೇಕು.
ರಾಮಚಂದ್ರನು ಮರಗಳೆಡೆಯಲ್ಲಿ ಮರೆಯಾದನು. ಸುಗ್ರೀವ ಯುದ್ಧಕ್ಕೆ
ಮುನ್ನಡೆದನು. ಅವನ ಸಿಂಹನಾದಕ್ಕೆ ಕಿಂಧೆಯ ಕಪಿಗಳ ದೇಹ ನಡುಗಿತು;
ಬಲ ಉಡುಗಿತು. ವಾಲಿ ಕನಲಿ ಎದ್ದು ನಿಂತನು. ಅವನ ಮಡದಿ ತಾರೆ,
ಅವನನ್ನು ಬಿಗಿದಪ್ಪಿ ನುಡಿದಳು :
"ನಾಥ, ನಾನು
ಪಿಶುನತೆಯಿಂದಲೋ-ಚಾಪಲಕ್ಕಾಗಿಯೋ ಹೇಳು
ತಿಲ್ಲ. ನನ್ನಂತರಂಗದ ದನಿಯನ್ನು ಅರಿಕೆ ಮಾಡಿಕೊಳ್ಳುತ್ತಿದ್ದೇನೆ ಅಷ್ಟೆ.
ಸುಗ್ರೀವ ನಿಮಗೆ ಎದುರು ನಿಲ್ಲಬೇಕಾದರೆ ಬಲವಾದ ಬೆಂಬಲವಿದ್ದೇ ತೀರಬೇಕು.
ಮಹಾವೀರನಾದ ರಾಮನಿಗೂ ಸುಗ್ರೀವನಿಗೂ ಗೆಳೆತನವಿದೆ ಎಂದು ಅಂಗದನ
ಬಾಯಿಂದ ಕೇಳಿದ್ದೇನೆ. ಲೋಕಮಿತ್ರನಾದ ರಾಮಚಂದ್ರ ನಮಗೂ ಮಿತ್ರ-
ನಲ್ಲವೆ ? ಅಂಗದನು ಮುತ್ತು-ಮಾಣಿಕಗಳಿಂದ ರಾಮಚಂದ್ರನನ್ನು ಸ್ವಾಗತಿ