2023-03-21 15:19:27 by jayusudindra
This page has been fully proofread once and needs a second look.
ಮಾಯಾವಿಗಳಾದ ಅಸುರರು. ಬ್ರಹ್ಮನ ವರ ಬೇರೆಯಿದೆ ಅವರಿಗೆ ಎಂತಲೆ ರಾಮಚಂದ್ರ ಆ ವೃಕ್ಷಗಳೆಡೆಗೆ ಬಾಣವೆಸೆದನು.
ಆ ಬಾಣ ಸಪ್ತತಾಲಗಳನ್ನು ಭೇದಿಸಿ ಭೂಮಿಯನ್ನು ಸೀಳಿಕೊಂಡು
ಪಾತಾಲದಲ್ಲಿದ್ದ 'ಕುಮುದಿ' ಗಳೆಂಬ ಬ್ರಹ್ಮವರಮತ್ತರಾದ ದೈತ್ಯರನ್ನೂ
ಸಂಹರಿಸಿತು. ಪ್ರಭುವಿನ ಒಂದು ಬಾಣದಿಂದ ಲೋಕದ ನೂರಾರು ಕಂಟಕ ನಾಶವಾಗಬಲ್ಲುದು.
ಈ ಅದ್ಭುತವನ್ನು ಕಂಡ ಸುಗ್ರೀವ ರಾಮನ ಕಾಲಿಗೆರಗಿ ಬಿನ್ನವಿಸಿ- ಕೊಂಡ :
" ರಾಮಚಂದ್ರ, ನನ್ನ ಮೇಲೆ ಪ್ರಸನ್ನನಾಗಬೇಕು. ಹುಲ್ಲು ಕವಿದ ಬಾವಿಯಂತೆ, ಬೂದಿ ಮುಚ್ಚಿದ ಕೆಂಡದಂತೆ ಗುಪ್ತನಾಗಿರುವ ನಿನ್ನನ್ನು ನಾನು ತಿಳಿಯದಾದೆ. ನನ್ನ ಅಜ್ಞಾನಕ್ಕೆ ಕ್ಷಮೆಯಿರಲಿ. ಇಂದು ರಾತ್ರಿ ನಾನು ಶತ್ರುಭಯವಿಲ್ಲದೆ ಸುಖವಾಗಿ ನಿದ್ರಿಸಬಲ್ಲೆ."
ಹನುಮಂತ-ಸುಗ್ರೀವರೊಡನೆ ರಾಮ-ಲಕ್ಷ್ಮಣರು ಕಿಷ್ಕಂಧೆಗೆ ತೆರಳಿದರು. ಸುಗ್ರೀವನ ಮನಸ್ಸು ಸಂತಸದಿಂದ ನುಡಿಯುತ್ತಿತ್ತು: ಇನ್ನು ವಾಲಿಗೆ ಉಳಿಗಾಲವಿಲ್ಲ.
ಕಿಷ್ಕಿಂಧೆಯ ತೇಜಸ್ಸು ನಂದಿತು
ರಾಮನು ಸಿದ್ಧನಾದ ಸುಗ್ರೀವನನ್ನು ಕಂಡು ನುಡಿದನು:
"ಇನ್ನು ನೀನು ವಾಲಿಯನ್ನು ಯುದ್ಧಕ್ಕೆ ಕರೆಯಬಹುದು."
ಸುಗ್ರೀವನು ವಾಲಿಯ ಗುಹೆಯ ಬಳಿ ಬಂದು ಕೂಗಿದನು. ಸುಗ್ರೀವನ
ಕರೆಯನ್ನು ಕೇಳಿದ ವಾಲಿ, ಹೊಡೆಸಿಕೊಂಡ ಹಾವಿನಂತೆ ಗುಹೆಯಿಂದ ಹೊರಗೆ ಬಂದನು- ಅಣ್ಣ ತಮ್ಮಂದಿರು ಜಗಳಾಡತೊಡಗಿದರು. ಹೊಡೆದುಕೊಳ್ಳುವದು, ಗುದ್ದಿಕೊಳ್ಳುವದು ನಡೆಯಿತು. ಸುಗ್ರೀವನ ಬಲ ಉಡುಗಿದಂತಾಯಿತು. ಅವನು ಅಲ್ಲಿಂದ ಕಾಲು ಕಿತ್ತವನು ಋಷ್ಯಮೂಕ ಕ್ಕೆ ಬಂದ ಮೇಲೆಯೇ ಉಸಿರೆಳೆದದ್ದು ! ಮೆಲ್ಲನೆ ರಾಮಚಂದ್ರನ ಸವಾರಿಯೂ ಅತ್ತ ಚಿತ್ತೈಸಿತು. ನೆತ್ತರಿನಿಂದ ತೊಯ್ದ ಮೈಯನ್ನು ರಾಮಚಂದ್ರನ ಕಾಲುಗಳ ಮೇಲೆ ಚೆಲ್ಲಿ ಸುಗ್ರೀವ ವಿಲಾಪಿಸತೊಡಗಿ- ದನು: